ವರದಿ ಎನ್ ಶಾಮೀದ್ ತಾವರಗೇರಾ
ಮಸ್ಕಿ: ಮಸ್ಕಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು ಇದೇ ಏಪ್ರಿಲ್ 17 ರಂದು ಚುನಾವಣೆ ನಡೆಯಲಿದೆ. ಕೆಲವು ದಿನಗಳಿಂದ ನಿರೀಕ್ಷೆಯಲ್ಲಿದ್ದ ದಿನಾಂಕ ಘೋಷಣೆ ಯಾಗಿರುವದರಿಂದ ಕ್ಷೇತ್ರದ ಮತದಾರರಲ್ಲಿ ಕುತೂಹಲ ಗರಿಗೆದರಿದರೆ, ಇತ್ತ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿ “ಢವ ಢವ” ಶುರುವಾಗಿದೆ. ಈಗಾಗಲೇ ಪಕ್ಷದ ಅಭ್ಯರ್ಥಿಗಳು ಬಹುತೇಕ ಅಂತಿಮಗೊಂಡಿದ್ದು, ಕಾಂಗ್ರೆಸ್ ನಿಂದ ಆರ್ ಬಸನಗೌಡ ತುರುವಿಹಾಳ ಹಾಗೂ ಬಿಜೆಪಿಯಿಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಚುನಾವಣಾ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾದಂತಾಗಿದೆ. ಆದರೆ ಮತದಾರರು ಮಾತ್ರ ಗೊಂದಲಕ್ಕಿಡಾಗಿರುವುದು ಸತ್ಯ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಪ್ರತಾಪಗೌಡ ಪಾಟೀಲ್ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಗೆಲುವು ಸಾದಿಸಿದ್ದರೇ, ಇತ್ತ ಬಿಜೆಪಿಯಿಂದ ಆರ್ ಬಸನಗೌಡ ತುರುವಿಹಾಳ ಸ್ಪರ್ಧಿಸಿ ಸೋಲುಕಂಡಿದ್ದರು. ಆದರೆ ಈಗ ಬದಲಾದ ಸನ್ನಿವೇಶ ದಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಆದಂತಾಗಿದ್ದು ಕಾರ್ಯಕರ್ತರಲ್ಲಿ ಹಾಗೂ ಮತದಾರರಲ್ಲಿ ಗೊಂದಲ ಉಂಟಾದಂತಾಗಿದೆ.
ಮಸ್ಕಿ ವಿಧಾನಸಭಾ ಉಪಚುನಾವಣೆ ರಾಜ್ಯದ ಗಮನಸೆಳೆಯುವಂತಾಗಿದೆ ಆಡಳಿತ ಪಕ್ಷ ಬಿಜೆಪಿಗೆ ಸವಾಲಾಗಿ ಪರಿಣಮಿಸಿದ್ದರೇ ಇತ್ತ ಕಾಂಗ್ರೆಸ್ ಗೂ ಕೂಡ ಮಹತ್ವದಾಗಿದೆ ಈಗಾಗಲೇ ಎರಡು ಪಕ್ಷದ ಘಟಾನುಘಟಿಗಳು ಕ್ಷೇತ್ರಕ್ಕೆ ಆಗಮಿಸಿ ತಮ್ಮ ಶಕ್ತಿ ಪ್ರದರ್ಶನ ಕೈಗೊಂಡಿದ್ದಾರೆ ಒಟ್ಟಿನಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಮಸ್ಕಿ ವಿಧಾನಸಭಾ ಉಪ ಚುನಾವಣೆ ರಾಜ್ಯದ ಜನರ ಕುತೂಹಲಕ್ಕೆ ಕಾರಣವಾಗಿದೆ.