Friday , September 20 2024
Breaking News
Home / Breaking News / ತಾವರಗೇರಾ ಡಿಗ್ರಿ ಕಾಲೇಜು ‘ನ್ಯಾಕ್’ ಸಂಸ್ಥೆ ಗುರುತಿಸುವಂತಾಗಲಿ, ಶಾಸಕ ಬಯ್ಯಾಪೂರ

ತಾವರಗೇರಾ ಡಿಗ್ರಿ ಕಾಲೇಜು ‘ನ್ಯಾಕ್’ ಸಂಸ್ಥೆ ಗುರುತಿಸುವಂತಾಗಲಿ, ಶಾಸಕ ಬಯ್ಯಾಪೂರ

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸರ್ಕಾರದ ನ್ಯಾಕ್ ಸಂಸ್ಥೆ ಯಲ್ಲಿ ತಾವರಗೇರಾ ಕಾಲೇಜು ಉತ್ತಮ ಶ್ರೇಣಿ ಹೊಂದಬೇಕೆಂಬ ಮಹದಾಸೆ ಹೊಂದಿರುವದಾಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.
ನಂತರ ಮಾತನಾಡಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಹಾಗೂ ಬದುಕುವ ರೀತಿಯನ್ನು ಕಲಿತುಕೊಳ್ಳಬೇಕೆಂದು ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ವಿದ್ಯಾರ್ಥಿಗಳಲ್ಲಿ ಇಚ್ಛಾ ಶಕ್ತಿ ಕೊರತೆ ಇದ್ದು, ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಅವರ ಮಾರ್ಗದರ್ಶನದಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಶಾಮೀದಸಾಬ ದೋಟಿಹಾಳ, ಶಕೀಲಾ ಶೆಟ್ಟಿ, ಸುವರ್ಣಮ್ಮ ಕುಂಬಾರ ಮಾತನಾಡಿದರು. ವೇದಿಕೆಯಲ್ಲಿ ಹನಮಸಾಗರದ ಮೈನುದ್ದಿನ್ ಸಾಬ ಒಂಟೆಳ್ಳಿ, ಪಪಂ ಸದಸ್ಯ ರಾದ ನಾರಯಾಣಗೌಡ ಮೆದಿಕೇರಿ, ವೀರನಗೌಡ ಪಾಟೀಲ್, ರಾಘವೇಂದ್ರ ನಾಯಕ, ಮುಖಂಡರಾದ ಬಸನಗೌಡ ಮಾಲಿ ಪಾಟೀಲ್, ರುದ್ರಗೌಡ ಕುಲಕರ್ಣಿ, ಅಮರೇಶ ಗಾಂಜಿ, ನಾರಾಯಣಸಿಂಗ್ ಹಾನೇರಿ, ಮೊರಾರ್ಜಿ ವಸತಿ ಶಾಲೆ ಪ್ರಾಚಾರ್ಯ ನಾಗರಾಜ, ಉಪನ್ಯಾಸಕರಾದ ಮೈಬೂ ಸಾಬ ಒಂಟೆಳ್ಳಿ, ಲೋಹಿತ ನಾಯಕ, ಲವಕುಮಾರ ಇನ್ನೀತರರು ಇದ್ದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ವಿಕ್ರಮ್ ರಾಯ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಪ್ರಾಚಾರ್ಯ ದೊಡ್ಡಪ್ಪ ಗುಮಗೇರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಉಪನ್ಯಾಸಕಿಯರಾದ ಅರುಣಾಕುಮಾರಿ ನಿರೂಪಿಸಿದರು, ಡಾ. ಯಲ್ಲಮ್ಮ ವಂದಿಸಿದರು.
ಜೀವನಸಾಬ ಬಿನ್ನಾಳರು ನಡೆಸಿಕೊಟ್ಟ ಜಾನಪದ ಶೈಲಿಯ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖಂಡರ ಹಾಗೂ ವಿದ್ಯಾರ್ಥಿಗಳ ಗಮನ ಸೆಳೆಯಿತು. ಈದೇ ಸಂದರ್ಭದಲ್ಲಿ ಶಾಸಕ ಅಮರೇಗೌಡ ಬಯ್ಯಾಪೂರ ಅವರನ್ನು ಹಾಗೂ ಕಟ್ಟಡ ನಿರ್ಮಿಸಿದ ಗುತ್ತಿಗೆ ದಾರರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!