Friday , November 22 2024
Breaking News
Home / Breaking News / ಮುದಗಲ್ ಪಟ್ಟಣದ ನಿವಾಸಿಗಳಿಗೆ ತೆರಿಗೆ ಹೆಚ್ಚಳ ಬರೆ…

ಮುದಗಲ್ ಪಟ್ಟಣದ ನಿವಾಸಿಗಳಿಗೆ ತೆರಿಗೆ ಹೆಚ್ಚಳ ಬರೆ…

ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಮುದಗಲ್ ಪಟ್ಟಣದ ನಿವಾಸಿಗಳಿಗೆ  ಕೊರೊನಾ ಆರ್ಥಿಕ ಸಂಕಷ್ಟದ ನಡುವೆಯೇ ಆಸ್ತಿ ತೆರಿಗೆ ಹೆಚ್ಚಳ  ಬರೆ ಹಾಕಲು ಮುದಗಲ್ ಪುರಸಭೆ, ಮುಂದಾಗಿದೆ ಸರಕಾರದ ಆದೇಶದಂತೆ ಪುರಸಭೆ ರೂಪಿಸಿರುವ  ತೆರಿಗೆ  ವಸತಿಗೆ  0.6% ಹಾಗೂ ವಾಣಿಜ್ಯಕ್ಕೆ  1.0%ರಷ್ಟು ಹಾಗೂ ಖಾಲಿ ಇರುವ ನಿವೇಶನಗಳಿಗೆ 0.5ರಷ್ಟು
ತೆರಿಗೆ  ಹೆಚ್ಚಿಸುವ ಕುರಿತು ಬುಧುವಾರ ಪಟ್ಟಣದ ಪುರಸಭೆಯಲ್ಲಿ ನಡೆದ ಪುರಸಭೆ ಅಧ್ಯಕ್ಷೆ ಅಮೀನಾ ಬೇಗಂ ಬಾರಿಗಿಡರವರ  ಅಧ್ಯಕ್ಷತೆಯಲ್ಲಿ 20-21ನೇ ಸಾಲಿನ  ವಿಶೇಷ ಸಾಮಾನ್ಯ ಸಭೆಯಲ್ಲಿ ಪುರಸಭೆ  ಸದಸ್ಯರ ಸರ್ವಾನು  ಮತದಿಂದ ಒಪ್ಪಿಗೆ ಸೂಚಿಸಿದ್ದಾರೆ.  ಈ ಮೂಲಕ ಪಟ್ಟಣದಲ್ಲಿ ವಸತಿ, ವಾಣಿಜ್ಯ, ಖಾಲಿ ನಿವೇಶನಗಳ ತೆರಿಗೆ ಹೆಚ್ಚಾಗಲಿದೆ.
 ಸಭೆಯಲ್ಲಿ ವ್ಯವಸ್ಥಾಪಕ ಮಲ್ಲಿಕಾರ್ಜನ ಮಾತನಾಡಿ ೨೦೨೧-೨೨ ನೇ ಬಜೆಟ್ ಅಂದಾಜು ಜಮಾ, ಖರ್ಚಿನ ಬಗ್ಗೆ ಎಸ್ ಎಫ್ ಸಿ ವೇತನ ಜನಗಣತಿ, ಅನುದಾನ ,ವಿದ್ಯುತ್ ಅನುದಾನ ೧೫ನೇ ಹಣಕಾಸು ಅನುದಾನ , ಸ್ಕೆರ್ ಸಿಟಿ ಅನುದಾನ,ರಸ್ತೆ ಮತ್ತು ಚರಂಡಿ ದುರಸ್ಥಿ , ಕುಡಿಯುವ ನೀರು ಸರಬರಾಜು, ಜಂಗಲ್ ಕಟಿಂಗ್ ಸೇರಿದಂತೆ ಇನ್ನಿತರ  ಪುರಸಭೆ ನಿಧಿ ಅನುದಾನದ ಕುರಿತು ಮಾಹಿತಿ ನೀಡಿ.ಬಜಟ್ ವಿವರಣೆ  ನಿಡಿದರು.ಈ  ಸಂದರ್ಭದಲ್ಲಿ ಉಪಾಧ್ಯಕ್ಷ ಶಿವನಾಗಪ್ಪ ಬಡಕುರಿ ,ಮುಖ್ಯಾಧಿಕಾರಿ ಮರಿಲಿಂಗಪ್ಪ ಸದಸ್ಯರಾದ ಅಮೀರ್  ಬೇಗಂ ಉಸ್ತಾದ, ಗುಂಡಪ್ಪ ಗಂಗಾವತಿ, ಎಸ್ ಆರ್ ರಸೂಲ್, ಶ್ರೀಕಾಂತ್ ಗೌಡ ಪಾಟೀಲ್ , ಜಯಶ್ರೀ ಶಂಕ್ರಪ್ಪ  ಜೀಡಿ, ಮೈಹಿಬೂಬ್  ಕಡ್ಡಿಪುಡಿ, ದುರುಗಪ್ಪ ಕಟ್ಟಿಮನಿ, ನಾಮ ನಿರ್ದೇಶನ ಸದಸ್ಯರಾದ ಸಂತೋಷ ಸುರಪುರ,ಉದಯ ಕುಮಾರ್ ಕಮ್ಮಾರ, ಪಕೀರಪ್ಪ ಕುರಿ, ನೈರ್ಮಲ್ಯ ಅಧಿಕಾರಿ ಹನುಮಂತ ನಾಯಕ, ಜಗನಾಥ್ ಜೋಶಿ, ಆರ್ ಓ ಮರೆಪ್ಪ  , ಸಮುದಾಯಅಧಿಕಾರಿ ಚನ್ನಮ್ಮ   ಹಾಗೂ ಪುರಸಭೆ ಸಿಬ್ಬಂದಿಗಳು ಇದ್ದರು.

About Nagaraj M

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!