ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ : ಸಮೀಪದ ಮೆಣೇಧಾಳ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮೆಣೇಧಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಾಬುಸಾಬ ಮೆಣೇಧಾಳ (೮೦) ಸೋಮವಾರ ಮೃತರಾದರು. ಮೃತರಿಗೆ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವಿದೆ. ಸೋಮವಾರ ಸಂಜೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.
ಬಾಬುಸಾಬ ರವರು ಹಲವಾರು ವರ್ಷಗಳಿಂದ ಮೆಣೇಧಾಳ ಸೇರಿದಂತೆ ಸುತ್ತು ಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಜನ,ಮನದ ನಾಯಕರಾಗಿದ್ದರು ಅವರ ಅಗಲಿಕೆಯಿಂದ ಈ ಪ್ರದೇಶದ ಜನರು ಅನಾಥರಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರೊಂದಿಗೆ ಈ ಪ್ರದೇಶದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಮಹಾನ್ ಚೇತನ ಬಾಬು ಸಾಬ.
ಬಾಬುಸಾಬ ರವರು ಇಂದಿನ ಯುವ ಜನತಗೆ ಮಾದರಿಯಾದಂತವರು
ಮೇರು ವ್ಯಕ್ತಿತ್ವದ ನೇರ, ನಿಷ್ಠುರ ನುಡಿಯಿಂದ ಈ ಭಾಗದಲ್ಲಿ ಸುಪ್ರಸಿದ್ಧ ರಾಗಿದ್ದ ಅವರ ಅಗಲಿಕೆ ನೋವು ಕಾಡುತ್ತಿದೆ.
ಕಾಯಕವೇ ಕೈಲಾಸ ಎಂದು ನಂಬಿಕೆಯಿಂದ ಬದುಕಿ ಬಾಳಿದವರು ಬಾಬುಸಾಬ ರವರು ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ತಮ್ಮದೇ ಆದಾ ಛಾಪು ಮೂಡಿಸಿದ್ದರು.
ಮಾಜಿ ಸಂಸದರಾದ ಹೆಚ್ ಜಿ ರಾಮುಲು, ಮಾಜಿ ಸಚಿವರಾದ ಬಸವರಾಜ ರಾಯರಡ್ಡಿ, ಎಮ್ ಮಲ್ಲಿಕಾರ್ಜುನ ನಾಗಪ್ಪ, ಶಿವರಾಜ ತಂಗಡಗಿ, ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ, ರಾಘವೇಂದ್ರ ಹಿಟ್ನಾಳ,
ಮಾಜಿ ಶಾಸಕರಾದ ಕೆ ಶರಣಪ್ಪ, ಹಸನಸಾಬ ದೋಟಿಹಾಳ, ದೊಡ್ಡನಗೌಡ ಪಾಟೀಲ್,
ಉದ್ಯಮಿ ಅಯ್ಯನಗೌಡ ಮಾಲಿ ಪಾಟೀಲ್, ಶೇಖರಗೌಡ ಪೊಲೀಸ್ ಪಾಟೀಲ್, ಬಸನಗೌಡ ಮಾಲಿಪಾಟೀಲ್, ಮೆಣೇಧಾಳ ಕ್ಷೇತ್ರದ ಜಿಪಂ ಸದಸ್ಯ ಹನಮಗೌಡ ಪೊಲೀಸ್ ಪಾಟೀಲ್, ಹಿರೇಮನ್ನಾಪೂರ ಕ್ಷೇತ್ರದ ಜಿಪಂ ಸದಸ್ಯ ಕೆ ಮಹೇಶ, ಮುಖಂಡರಾದ ಲಿಂಗರಾಜ ಹಂಚಿನಾಳ, ತಾವರಗೇರಾ ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕರ್ ಸೇರಿದಂತೆ ಮೆಣೇಧಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಸ್ಥರು, ಹಿರಿಯ ಮುಖಂಡರು ಸಂತಾಪ ಸೂಚಿಸಿದ್ದಾರೆ.