ವರದಿ ಎನ್ ಶಾಮೀದ್ ತಾವರಗೇರಾ
ಕುಷ್ಟಗಿ: ಕನ್ನಡ ನಾಡು ನುಡಿ ಜಲ ರಕ್ಷಣೆ ಗಾಗಿ ಪ್ರತಿಯೊಬ್ಬ ಕನ್ನಡಿಗರು ಒಂದಾಗಬೇಕೆಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.
ಅವರು ಬುಧವಾರ ದಂದು ತಾಲೂಕಿನ ಗುಮಗೇರಿ ಯಲ್ಲಿ ನಡೆದ 12 ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿಕ್ಸೂಚಿ ಭಾಷಣದಲ್ಲಿ ಹೇಳಿ, ಗಡಿ ನಾಡು ರಕ್ಷಣೆ ವಿಷಯದಲ್ಲಿ ಪಕ್ಷ, ಜಾತಿ, ಮತ ಎನ್ನದೆ ಕನ್ನಡ ಭಾಷೆಗಾಗಿ ಒಗ್ಗಟ್ಟಿನಿಂದ ಮುಂದೆ ಬರಬೇಕು ತಾಲೂಕಿನ ಸಾಹಿತ್ಯ ಆಸಕ್ತರು ಹಾಗೂ ಸಾಹಿತಿಗಳಿಗಾಗಿ ಸಹಾಯಹಸ್ತ ನೀಡಲಾಗುವುದು ಎಂದು ಹೇಳಿದರು.
ನಂತರ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಸಿಂಧನೂರಿನ ಹಿರಿಯ ಸಾಹಿತಿ ಸಿ.ಬಿ ಚಿಲ್ಕರಾಗಿ ಮಾತನಾಡಿ ಮಹಾನಗರಗಳಲ್ಲಿ ಕನ್ನಡ ಭಾಷೆ ಜನರು ಕಡಿಮೆಯಾಗುತ್ತ ಬೇರೆ ಭಾಷೆಗಳ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ವಿಷಾದ ನಿಯ ನಮ್ಮ ಸ್ವಂತ ಭಾಷೆಯನ್ನು ಉಳಿಸಿಕೊಳ್ಳುವಲ್ಲಿ ಪ್ರತಿಯೊಬ್ಬ ಕನ್ನಡಿಗರು ಮುಂದೆ ಬರಬೇಕು ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಪರ ಸಂಘಟನೆಗಳು ಕೆಲಸ ಮಾಡಬೇಕು ಎಂದು ಹೇಳಿದರು.
ನಂತರ ಸಮ್ಮೇಳನದ ಅಧ್ಯಕ್ಷ ರಾದ ಶೇಖರಗೌಡ ವಿ ಸರನಾಡಗೌಡರ ಮಾತನಾಡಿ ಸಾಹಿತ್ಯ ಸಮಾಜ ಸುಧಾರಣೆಯ ವಿವಿಧ ಸಾಧನೆಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಸಾಹಿತ್ಯ, ನಾಡು, ನುಡಿ, ನೆಲ, ಜಲ, ಸಂಸ್ಕ್ರತಿ, ಸಸ್ಯ ಸಂಪತ್ತು, ಸಕಲ ಜೀವ ಸಂಕುಲಗಳೊನ್ನಳಗೊಂಡ ಆಚಾರ ವಿಚಾರಗಳನ್ನು ಪ್ರತಿನಿಧಿಸುವಂತಿರಬೇಕು ಸಾಹಿತ್ಯದಿಂದ ಸಮಾಜವನ್ನು ಕಟ್ಟುವ ಕೆಲಸ ನಿರಂತರವಾಗಿ ನಡೆದಿರಬೇಕು ಎಂದು ಹೇಳಿದರು.
ಇದೇ ಸಂಧರ್ಬದಲ್ಲಿ ವಿವಿಧ ಲೇಖಕರ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪಂಚಾಯತ ಸದಸ್ಯ ಕೆ.ಮಹೇಶ್ ಪುಸ್ತಕ ಮಳಿಗೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಾ.ಶೇಖರಗೌಡ ಮಾಲಿ ಪಾಟೀಲ್, ಮಾಜಿ ಶಾಸಕ ಹಸನಸಾಬ ದೋಟಿಹಾಳ, ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ, ತಾಲೂಕು ಕಸಾಪ ಅಧ್ಯಕ್ಷ ಉಮೇಶ್ ಹಿರೇಮಠ, ರವಿಂದ್ರ ಬಾಕಳೇ, ನಟರಾಜ ಸೋನಾರ, ವಿಕ್ರಮ್ ರಾಯ್ಕರ್, ಬಸನಗೌಡ ಮಾಲಿ ಪಾಟೀಲ, ಅಮರೇಶ ಗಲಗಲಿ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.
ನಂತರ ಸಂಕೀರ್ಣ ಗೋಷ್ಠ, ಕವಿ ಗೋಷ್ಠಿ ಸೇರಿದಂತೆ ತಾಲೂಕಿನ ವಿವಿಧ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಗಳು ಜರುಗಿದವು.
ಇದೇ ಸಂದರ್ಭದಲ್ಲಿ ಸಮ್ಮೇಳನಾದ್ಯಕ್ಷರಿಗೆ ವಿವಿಧ ಗಣ್ಯರು ಸನ್ಮಾನಿಸಿದರು.
ಸಮ್ಮೇಳನದಲ್ಲಿ ಜಿಲ್ಲೆಯ ಹಾಗೂ ತಾಲೂಕಿನ ಸಾಹಿತಿಗಳು, ಲೇಖಕರು, ಕಲಾವಿದರು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.