ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಕಳೆದ 15 ದಿನಗಳ ಹಿಂದೆ ರೈತರ ತೋಟಕ್ಕೆ ದಾಳಿ ಮಾಡಿದ್ದ ಕರಡಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ.
ಬುಧವಾರ ಮದ್ಯಾಹ್ನ ಪಟ್ಟಣದ ಬಸಪ್ಪ ಗಡಗಿ ಅವರ ತೋಟದ ಹತ್ತಿರ ಇಡಲಾಗಿದ್ದ ಬೋನಿಗೆ ಬಿದ್ದ ಕರಡಿಯನ್ನು ಸೆರೆ ಹಿಡಿದ ಅರಣ್ಯ ಇಲಾಖೆಯವರು ಕುಷ್ಟಗಿಯ ಕಲಕೇರಿ ಫಾರ್ಮ್ ನಲ್ಲಿ ಇರಿಸಿದ್ದು, ಇದನ್ನು ಕಮಲಾಪುರ ಕರಡಿದಾಮಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಉಪ ಅಧಿಕಾರಿ ರಿಯಾಜ ತಿಳಿಸಿದ್ದಾರೆ.
ಈ ಹಿಂದೆ ಕರಡಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಭಯಬೀತಿ ಗೊಂಡಿದ್ದರೆ ರೈತರು ಕರಡಿ ದಾಳಿ ಆತಂಕ ವ್ಯಕ್ತಪಡಿಸಿದ್ದರು. ವಿಪರ್ಯಾಸ ಎನ್ನುವಂತೆ ವಿಶ್ವ ವನ್ಯಜೀವಿ ದಿನವಾದ ಇಂದು ಕರಡಿ ಬೋನ್ ಗೆ ಬಿದ್ದಿರುವುದು ವಿಶೇಷ ವಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ರೈತರು ನಿಟ್ಟುಸಿರು ಬಿಟ್ಟಂತಾಗಿದೆ.
ಈ ಸಂಧರ್ಬದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶಂಕರಗೌಡ ಸೇರಿದಂತೆ ಇನ್ನಿತರರು ಇದ್ದರು.
ಒಳ್ಳೆಯ ಕೆಲಸ. ಧನ್ಯವಾದಗಳು.
,Good work. Thanks