ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ :ಪಟ್ಟಣದ ಹೊರ ವಲಯದಲ್ಲಿರುವ ನಂದಿ ಆಗ್ರೋ ಫಾರಂ ಹೌಸ್ ಗೆ ಮತ್ತು ಅಂಬಣ್ಣ ಕಂದಗಲ್ ಅವರ ತೋಟಕ್ಕೆ ಮಂಗಳವಾರ ತೋಟಗಾರಿಕೆ ಸಚಿವ ಆರ್ ಶಂಕರ್ ಭೆಟ್ಟಿ ನೀಡಿದರು.
ನಂತರ ಸುದ್ದಿಗಾರರೊಂದಿಗೆ ತೋಟಗಾರಿಕೆ ಸಚಿವ ಆರ್ ಶಂಕರ್ ಮಾತನಾಡಿ, ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯಡಿ ಜಿಲ್ಲೆಯ ಪೇರಲ ಬೆಳೆ ಆಯ್ಕೆಯಾಗಿದ್ದು, ರೈತರು ಬೆಳೆದ ಪೇರಲ ಬೆಳೆಗಳಿಗೆ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರವು ಕೂಡ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು. ಯೋಜನೆಯ ಸದುಪಯೋಗವನ್ನು ರೈತರು ಪಡೆದು ಕೊಳ್ಳಬೇಕು. ಜಿಲ್ಲೆಯ ದಾಳೆಂಬೆ ಬೆಳಗಾರರ ಸಾಲ ಮನ್ನಾ ಮಾಡುವಂತೆ ಮನವಿಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಚರ್ಚಿಸಿ ಮುಂದಿನ ದಿನಮಾನಗಳಲ್ಲಿ ರೈತರ ಬೇಡಿಕೆಯನ್ನು ಈಡೇರಿಸಲಾಗುವುದು ಎಂದರು.
ಬಸಯ್ಯ ಹಿರೇಮಠ ರವರ ನಂದಿ ಆಗ್ರೋ ಫಾರಂ ಹೌಸ್ ನಲ್ಲಿ ನುಗ್ಗೆ ಸೊಪ್ಪಿನಿಂದ ತಯಾರಿಸುವ ಮಾತ್ರೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಅದರಂತೆ ಅಂಬಣ್ಣ ಕಂದಗಲ್ ಅವರ ಪೇರಲ ತೋಟಕ್ಕೆ ಭೇಟಿ ನೀಡಿ ಮೆಚ್ಚಿಗೆ ವ್ಯಕ್ತ ಪಡಿಸಿದರು.
ತೋಟಗಾರಿಕೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕರಾದ ಮಂಜುನಾಥ ನಾರಾಯಣಪುರ, ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ್, ಕುಷ್ಟಗಿ ತಾಲೂಕಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ದುರ್ಗಾ ಪ್ರಸಾದ, ಯಲಬುರ್ಗಾ ತಾಲೂಕಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ನಿಂಗನಗೌಡ, ಬಿಜೆಪಿ ಮುಖಂಡರಾದ ಅಮರೇಶ ಕರಡಿ, ಹೇಮಲತಾ ನಾಯಕ್, ಶಂಭನಗೌಡ ಪೊಲೀಸ್ ಪಾಟೀಲ್, ಮಂಜುನಾಥ ದೇಸಾಯಿ, ರೈತರಾದ ಬಸಯ್ಯ ಹಿರೇಮಠ, ಅಂಬಣ್ಣ ಕಂದಗಲ್, ಸಂತೋಷ ಸರನಾಡಗೌಡರ, ಶ್ಯಾಮಣ್ಣ ಸುಣಗಾರ, ಚಂದ್ರಶೇಖರ ತಾಳಿಕೋಟಿ, ಕನಕಪ್ಪ ಮಳಗಾವಿ ಸೇರಿದಂತೆ ಇನ್ನಿತರರಿದ್ದರು.
———————————————