Friday , November 22 2024
Breaking News
Home / Breaking News / ಸರ್ಕಾರವು ಅನುದಾನಿತ ಶಾಲೆಗಳನ್ನು ಕಡೆಗಣಿಸುವುದು ‘ಸರಿಯಲ್ಲ’ – ಮಲ್ಲನಗೌಡ ಓಲಿ

ಸರ್ಕಾರವು ಅನುದಾನಿತ ಶಾಲೆಗಳನ್ನು ಕಡೆಗಣಿಸುವುದು ‘ಸರಿಯಲ್ಲ’ – ಮಲ್ಲನಗೌಡ ಓಲಿ

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ : ಸರ್ಕಾರವು ಅನುದಾನಿತ ಶಾಲಾ,ಕಾಲೇಜುಗಳಿಗೆ ಮಲತಾಯಿ ಧೋರಣೆ ಮಾಡುತ್ತಿರುವುದು ಸರಿಯಲ್ಲ ಎಂದು ತಾವರಗೇರಾ ಶಿಕ್ಷಕರ ತರಬೇತಿ ಸಂಸ್ಥೆಯ ಕಾರ್ಯದರ್ಶಿ ಮಲ್ಲನಗೌಡ ಓಲಿ ಹೇಳಿದರು.

ಪಟ್ಟಣದ ತಾವರಗೇರಾ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೨೦೨೦-೨೧ ನೇ ಸಾಲಿನ ಡಿಎಲ್ ಡಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಕಾಲದಲ್ಲಿ ಸಹ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳನ್ನು ನಡೆಸಿದ್ದು, ಸರ್ಕಾರವು ಸರ್ಕಾರದ ಶಾಲಾ, ಕಾಲೇಜುಗಳಿಗೆ ಅನುದಾನ ಬಿಡುಗಡೆಗೊಳಿಸಿದ್ದು, ಅನುದಾನಿತ ಶಾಲಾ,ಕಾಲೇಜುಗಳಿಗೆ ಅನುದಾನವನ್ನು ನೀಡುವಲ್ಲಿ ಕಾಲವಿಳಂಬನೆ ಮಾಡುತ್ತಾ ಮಲತಾಯಿ ಧೊರೆಣೆ ಮಾಡುತ್ತಿದೆ ಇದು ಸರಿ ಅಲ್ಲ. ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ತಂದೆ, ತಾಯಿ ಹೆಸರು ಮತ್ತು ಸಂಸ್ಥೆಯ ಹೆಸರು ತರಬೇಕು ಎಂದರು.
ಸಂಸ್ಥೆಯ ಪ್ರಾಚಾರ್ಯ ಆರ್ ಜೆ ಅಂಬಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಶೇಖರಗೌಡ ಪೊಲೀಸ್ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ನಿರ್ದೇಶಕರಾದ ಶರಣಪ್ಪ ಐಲಿ, ಬಸಪ್ಪ ಗಡಗಿ, ಮಲ್ಲಪ್ಪ ಗಲಗಲಿ, ಮಲ್ಲಿಕಾರ್ಜುನಗೌಡ ಪೊಲೀಸ್ ಪಾಟೀಲ್, ಆಡಳಿತಾಧಿಕಾರಿ ಬಸನಗೌಡ ಪಾಟೀಲ್, ಪ್ರಾಚಾರ್ಯ ಎಸ್ ವಿ ಹಿರೇಮಠ, ಸಂಗಪ್ಪ ಗುಡದೂರು, ಉಪನ್ಯಾಸಕಿ ಅಶ್ವಿನಿ ನಾಗಲಿಕರ್, ಪಂಪಾಪತಿ ಕೊರ್ಲಿ, ತಮ್ಮಣ್ಣ ಸೇರಿದಂತೆ ಇನ್ನಿತರರಿದ್ದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಬಿ ಬಿ ಬಡಿಗೇರ, ಶ್ರೀನಿವಾಸ ಗದ್ದಿ, ಅರ್ಚನಾ ಬುಜರಕರ್, ಪ್ರಶಿಕ್ಷಣಾರ್ಥಿ ರಾಜಾಸಾಬ, ಅಶ್ವೀನಿ ರಡ್ಡಿ ಇವರನ್ನು ಸನ್ಮಾನಿಸಲಾಯಿತು.
ಪ್ರಶಿಕ್ಷಣಾರ್ಥಿಗಳಾದ ಬಾಳಮ್ಮ ಸಂಗಡಿಗರು ಪ್ರಾರ್ಥಿಸಿದರು, ಶಮ್ ಷಾದ್ ಬೇಗಂ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

About N Shameed

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!