Friday , November 22 2024
Breaking News
Home / Breaking News / ವಿವಿಧ ಬೇಡಿಕೆಗಳ ಈಡೇರಿಕೆಗಾಗಿ SFI – DYFI ಮನವಿ.

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ SFI – DYFI ಮನವಿ.


ವರದಿ ಆನಂದ ಸಿಂಗ್ ರಜಪೂತ
ಉದಯ ವಾಹಿನಿ :-
ಕವಿತಾಳ :
ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲಾ ಕಾಲೇಜುಗಳಿಗೆ ಹಾಗೂ ಪಟ್ಟಣದ ವಿವಿಧ ವಾರ್ಡ್ ಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮತ್ತು ಇತರೆ ಬೇಡಿಕೆಗಳ ಈಡೇರಿಕೆಗಾಗಿ ಭಾರತ ವಿದ್ಯಾರ್ಥಿ ಫೆಡರೇಷನ್‌ ( SFI ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ ( DYFI ) ನಗರ ಘಟಕದ ವತಿಯಿಂದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಸಂಘಟನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು.

ಪಟ್ಟಣದಲ್ಲಿರುವ ನಾಲ್ಕು ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಮೂರು ಪ್ರೌಢಶಾಲೆ, ಒಂದು ಪಿಯು ಕಾಲೇಜು ಹಾಗೂ ಪದವಿ ಕಾಲೇಜು ಗಳ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಇಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ಸ್ವಚ್ಚತೆಯ ಸಮಸ್ಯೆ ಇದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿ ವಿದ್ಯಾಭ್ಯಾಸಕ್ಕೆ ಅಡಚಣೆಯಾಗುತ್ತಿದೆ ಜೊತೆಗೆ ಪಟ್ಟಣದಲ್ಲಿರುವ ಬಹುತೇಕ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮತ್ತು ಇಡೀ ಪಟ್ಟಣದ ಜನತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಜವಾಬ್ದಾರಿ ಹೊತ್ತ ಪಟ್ಟಣ ಸದಸ್ಯರು ಮತ್ತು ಅಧಿಕಾರಿಗಳು ಮೈ ಮರೆತಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಮಸ್ಯೆ ಗಳ ಪರಿಹಾರಕ್ಕಾಗಿ ನಮ್ಮ ಸಂಘಟನೆಗಳು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿದಾಗಿನಿಂದಲೂ ನಿರಂತರವಾಗಿ ಹೋರಾಟ, ಮನವಿ ಇತ್ಯಾದಿಗಳ ಮೂಲಕ ತಮ್ಮ ಗಮನಕ್ಕೆ ತರುತ್ತಾ ಬರುತ್ತಿದೆ ಆದರೂ ಈ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಾವು ವಿಫವಾಗಿದ್ದಿರಿ ಎಂದು ದೂರಿದರು. ನಮ್ಮ ಹೋರಾಟದ ಫಲವಾಗಿ ಪಟ್ಟಣದ ಒಂದಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ ಆಗಬೇಕಿರುವವು ಸಾಕಷ್ಟು ಬಾಕಿ ಇವೆ ಆದ್ದರಿಂದ ಕೂಡಲೇ ಪಟ್ಟಣದಲ್ಲಿ ಸಮಸ್ಯೆಗಳನ್ನು ಆಲಿಸಿ ಅಧ್ಯಕ್ಷ ಮತ್ತು ತಮ್ಮ ನೇತೃತ್ವದಲ್ಲಿ ಸಾರ್ವಜನಿಕರ ಸಭೆಯನ್ನು ಕರೆಯಬೇಕು ಕುಂದು ಕೊರತೆಗಳನ್ನು ಆಲಿಸಿ ಪರಿಹಾರಕ್ಕೆ ಮುಂದಾಗಬೇಕು ಮತ್ತು ನಿರ್ಮಾಣ ಆಗಿ ಉದ್ಘಾಟನೆ ಮಾಡದೆ ನಿಂತಿರುವ ಸಾರ್ವಜನಿಕ ಶೌಚಾಲಯ ವನ್ನು ಕೂಡಲೇ ಉದ್ಘಾಟಿಸಿ ಸಾರ್ವಜನಿಕ ಅನುಕೂಲಕ್ಕೆ ಅವಕಾಶ ಮಾಡಿಕೊಡಬೇಕು, 5&6 ನೆ ವಾರ್ಡ್ ನಲ್ಲಿ ಅವೈಜ್ಞಾನಿಕ ವಾಗಿ ಕಳಪೆ ಗುಣಮಟ್ಟದಲ್ಲಿ ಮಾಡಿರುವ ಪೈಪ್ ಲೈನ್ ಕಾಮಗಾರಿಯನ್ನು ಪರಿಶೀಲಿಸಿ ಕ್ರಮಕ್ಕೆ ಮುಂದಾಗಬೇಕು ಮತ್ತು ಹಳೆಯ ಬಸ್ ನಿಲ್ದಾಣ ( ಶಿವಪ್ಪ ಮಠ ) ಹತ್ತಿರ ಸಾರ್ವಜನಿಕ ಶೌಚಾಲಯ ವನ್ನು ನಿರ್ಮಿಸಬೇಕು, ಬಾಕಿ ಇರುವ. ವಸತಿ ಯೋಜನೆಯ, ವೈಯಕ್ತಿಕ ಶೌಚಾಲಯದ ಬಿಲ್ ಬಿಡುಗಡೆ ಮಾಡಬೇಕು, ಹಕ್ಕುಪತ್ರ ವಿತರಣೆಯ ಕಾರ್ಯವನ್ನು ಸುಗಮಗೊಳಿಸಬೇಕು, ನಡೆದಿರುವ ಕಾಮಗಾರಿ ಗಳಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸೂಚಿಸಬೇಕು ಹಾಗೂ ಪಟ್ಟಣದ ಎಲ್ಲಾ ವಾರ್ಡ್ ಗಳಿಗೆ ಸಿ.ಸಿ ರಸ್ತೆ, ಚರಂಡಿ, ವಿದ್ಯುತ್ ದ್ವೀಪ, ಸ್ವಚ್ಚತೆ ಸೇರಿ, ಸೊಳ್ಳೆಗಳ ನಿಯಂತ್ರಣ ಕ್ಕಾಗಿ ಫಾಗಿಂಗ್ ಮಾಡಬೇಕು, ಆಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಬೇಕೆಂದು ಒಳಗೊಂಡಿರುವ ಮನವಿಯನ್ನು ಮುಖ್ಯಾಧಿಕಾರಿ ಹನುಮಂತಮ್ಮನ ಸ್ವೀಕರಿಸಿ ಬೇಡಿಕೆಗಳ ಈಡೇರಿಸುವ ಭರವಸೆ ನೀಡಿದರು.

ನಿರ್ಲಕ್ಷ್ಯ ತೋರಿದರೆ ಪಂಚಾಯತಿಗೆ ಬೀಗಮುದ್ರೆ ಹಾಕಿ ಮತ್ತೊಮ್ಮೆ ಹೋರಾಟ ವನ್ನು ಮಾಡಬೇಕಾಗುತ್ತದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ SFI ರಾಜ್ಯ ಉಪಾಧ್ಯಕ್ಷರು ಶಿವಕುಮಾರ ಮ್ಯಾಗಳಮನಿ, SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, DYFI ಅಧ್ಯಕ್ಷರಾದ ಮಹಮ್ಮದ್ ರಫೀ, SFI ಕವಿತಾಳ ಘಟಕದ ಅಧ್ಯಕ್ಷರಾದ ಮೌನೇಶ ಬುಳ್ಳಾಪುರ, ಕಾರ್ಯದರ್ಶಿ ವೆಂಕಟೇಶ, ಮುಖಂಡರಾದ ನಾಗಮೋಹನ್ ಸಿಂಗ್, ಮಲ್ಲಿಕಾರ್ಜುನ, ಕುಪ್ಪಣ್ಣ, ಪಾಷ ಜೆ.ಇ ಮಲ್ಲಣ ಸೇರಿದಂತೆ ಇತರರು ಇದ್ದರು.

About Nagaraj M

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!