ಉದಯ ವಾಹಿನಿ :-
ಕವಿತಾಳ :-
ಪಟ್ಟಣ ಸಮೀಪದ ಹಿರೇದಿನ್ನಿ ಗ್ರಾಮದಲ್ಲಿ ಭಾರತ ಹುಣ್ಣಿಮೆಯ ಮರುದಿನ ಗ್ರಾಮದ ಶಕ್ತಿದೇವತೆ ಶ್ರೀ ಮಾವುರದ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ 5 ಗಂಟೆಗೆ ದೇವಿಯು ಚಿಕ್ಕದಿನ್ನಿ ಗ್ರಾಮದಲ್ಲಿ ಗಂಗಾಸ್ಥಾನ ಮುಗಿಸಿಕೊಂಡು ಚಿಕ್ಕದಿನ್ನಿ ಗ್ರಾಮದಲ್ಲಿ ಪ್ರಸಾದ ಸ್ವೀಕರಿಸಿ ನಂತರ ಚಿಕ್ಕದಿನ್ನಿ ಮತ್ತು ಹಿರೇದಿನ್ನಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಕುಣಿತ ಭಾಜಿ ಭಜಂತ್ರಿಗಳೊಂದಿಗೆ ವಾದ್ಯ ವೈಭವದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಸಂಜೆ 5 ಗಂಟೆಗೆ ರಥಕ್ಕೆ ಉತ್ತುತ್ತಿ. ಬಾಳೆ ಹಣ್ಣು ಎಸೆದು ಭಕ್ತರು ಅರಿಕೆ ತಿರಿಸಿಕೊಂಡರು. ಹಿರೇದಿನ್ನಿ ಚಿಕ್ಕದಿನ್ನಿ ತೋರಣದಿನ್ನಿ ಮಲ್ಕಾಪೂರ ಮಲ್ಲದಗುಡ್ಡ ಡೋಣಮರಡಿ ಕವಿತಾಳ ಪರಸಾಪೂರ ಗೊಗೆಬಾಳ ಬಸಾಪೂರು ಗಂಗಾನಗರ ಕ್ಯಾಂಪ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಜಾತ್ರೆಗೆ ಆಗಮಿಸಿದ್ದರು. ಕವಿತಾಳ ಪೋಲಿಸ್ ಠಾಣೆಯ ಎಎಸ್ಐ ಈರಣ್ಣ ಮತ್ತು ಸಿಬ್ಬಂದಿ ವರ್ಗ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.