ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಶನಿವಾರ ಬೆಳಗಿನ ಜಾವ ಸಮೀಪದ ಗಾಣಗಿತ್ತಿ ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಉದಯವಾಹಿನಿ ಯಲ್ಲಿ ಸುದ್ದಿ ಪ್ರಕಟ ಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಗಾಣಗಿತ್ತಿ ಗುಡ್ಡ ಹಾಗೂ ಸುತ್ತಮುತ್ತಲಿನ ಗದ್ದೆರಹಟ್ಟಿ ಸೇರಿದಂತೆ ಗುಡ್ಡದಲ್ಲಿ ಪರಿಶೀಲನೆ ನಡೆಸಿ ಅಲ್ಲಿಯ ಸಾರ್ವಜನಿಕರ ಮಾಹಿತಿ ಪಡೆದು ಚಿರತೆ ಸೆರೆ ಹಿಡಿಯಲು ಬೋನ್ ಅನ್ನು ಅಳವಡಿಸಿದ್ದಾರೆ. ನಂತರ ಉಪವಲಯ ಅರಣ್ಯ ಅಧಿಕಾರ ರಿಯಾಜ ಗನಿ ಮಾತನಾಡಿ ಶನಿವಾರ ರಾತ್ರಿಯಿಂದಲೇ ಬೋನ್ ಅನ್ನು ಅಳವಡಿಸಿ ಕಾರ್ಯಾಚರಣೆ ಕೈಗೊಂಡಿರುವುದಾಗಿ ತಿಳಿಸಿದರು.ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ಹೇಳಿದರು.
ಈ ಸಂಧರ್ಬದಲ್ಲಿ ಅರಣ್ಯ ಸಿಬ್ಬಂದಿ ಗಳಾದ ಶಂಕರ್ ಗೌಡ, ಗಂಗಾಧರ, ತಿಪ್ಪಣ್ಣ, ಲಕ್ಷ್ಮಣ್ಣ, ಹನುಮಂತಪ್ಪ ಪೂಜಾರಿ, ಯಮನೂರ, ಶಿವಕುಮಾರ್ ಸೇರಿದಂತೆ ಇನ್ನೀತರರಿದ್ದರು.