ಸಿರವಾರ : ಪ್ರತಿ ವರ್ಷದಂತೆ ಈ ವರ್ಷವು ಸಹ ನಾಳಿನ ಭಾರತ ಹುಣ್ಣಿಮೆಯ ದಿನದಂದು ಜರುಗುವ ಕುರುಕುಂದಾ ಗ್ರಾಮದ ಸುಕ್ಷೇತ್ರ ರೇಣುಕಾ ಯಲ್ಲಮ್ಮ ಜಾತ್ರೆಯಲ್ಲಿ ಅಕ್ರಮ ಕಲಬೆರೆಕೆ ಮಧ್ಯೆ ಮಾರಾಟ ಪ್ರತಿ ವರ್ಷವು ಅಬಕಾರಿ ಇಲಾಖೆಯ ಕಣ್ಣು ತಪ್ಪಿಸಿ ಮಾರುತ್ತಿದ್ದಾರೆ,
ಕುರುಕುಂದ ಗ್ರಾಮ, ಪಟ್ಟನ ದೊಡ್ಡಿ ,ಕಸನದೊಡ್ಡಿ , ಗ್ರಾಮಗಳಲ್ಲಿ ಅಕ್ರಮವಾಗಿ ಲಕ್ಷಗಟ್ಟಲೆ ಅಕ್ರಮ ಕಲಬೆರೆಕೆ ಮದ್ಯ ಮಾರಾಟ ಮಾಡುತ್ತಿದ್ದು ಇದನ್ನು ಸ್ಥಳಿಯ ತಹಸೀಲ್ದಾರರು ಹಾಗೂ ಅಬಕಾರಿ ಇಲಾಖೆಯವರು ಅಧಿಕಾರಿಗಳು ಈ ವರ್ಷ ಸಂಪೂಣ್ವಾಗಿ ಮಧ್ಯೆ ನಿಷೇಧಕ್ಕೆ ಮರಾಟ ಗ್ರಾಮದ ದಲಿತ ಯುವ ಮುಖಂಡ ಶಿವಕುಮಾರ ಮರಾಟ ಆಗ್ರಹಿಸಿದ್ದಾರೆ.
ಕಳೆದ ವರ್ಷ ಅಂದಿನ ತಹಸೀಲ್ದಾರರು ಹಾಗೂ ಅಬಕಾರಿ ಇಲಾಖೆ ಮತ್ತು ಪೋಲೀಸ್ ಇಲಾಖೆಯವರು ಅಕ್ರಮ ಮಧ್ಯೆ ನಿಷೇಧಕ್ಕೆ ಕಡಿವಾಣ ಹಾಕಿದ್ದರು. ಅದೇ ತೆರನಾಗಿ ಈ ವರ್ಷವು ಸಹ ಮಧ್ಯೆ ಮಾರಾಟ ನಿಷೇಧ ಮಾಡಬೇಕು.
ಒಂದು ವೇಳೆ ಈ ಅಕ್ರಮಕ್ಕೆ ಅವಕಾಶ ಕೊಟ್ಟರೇ ಜಾತ್ರೆಯ ದಿನ ಗಲಾಟೆಗಳು ಆಗುವ ಸಂಭವ ಇರುತ್ತದೆ, ಮುನ್ನಚ್ಚರಿಕೆ ಕ್ರಮವಾಗಿ ಅಬಕಾರಿ ಇಲಾಖೆ ಅವರು ಕಿರಾಣಿ ಅಂಗಡಿಗಳಲ್ಲಿ ಹಾಗೂ ಇನ್ನಿತರೇ ಅಂಗಡಿಗಳ ಮಾಲೀಕರು ಮಧ್ಯೆ ಮಾರಾಟ ಮಾಡುತ್ತಿದ್ದಾರೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ದಲ್ಲಾಳಿಗಳಿಗೆ ಕಾನೂನು ಕ್ರಮದ ಬಿಸಿ ಮುಟ್ಟಿಸಬೇಕು, ಬರುವ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಗಮನದಲ್ಲಿಟ್ಟುಕೊಂಡು ಕೂಡಲೇ ಕುರುಕುಂದ ಜಾತ್ರೆಯಲ್ಲಿ ಹಾಗೂ ಪಟಕನ ದೊಡ್ಡಿ ,ಕಸನದೊಡ್ಡಿ, ಗ್ರಾಮಗಳಲ್ಲಿ ಮಧ್ಯೆಯನ್ನು ನಿಷೇಧ ಮಾಡಬೇಕು ಎಂದು ತಿಳಿಸಿದರು.