ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಬೆಳಿಗ್ಗೆ 7 ಗಂಟೆಯಿಂದ 9 ರ ವರೆಗೆ ತಾವರಗೇರಾ ದಿಂದ ಗಂಗಾವತಿ ನಗರಕ್ಕೆ ಯಾವುದೆ ಬಸ್ ಇಲ್ಲದ ಪರಿಣಾಮ ಕಾಲೇಜು ಶಿಕ್ಷಣ ಪಡೆಯಲು ಹೋಗುವ ವಿಧ್ಯಾರ್ಥಿಗಳಿಗೆ ತುಂಬಾ ತೊಂದರೆಯಾದ ಕಾರಣ ಪಟ್ಟಣದ ಹಾಗೂ ಸುತ್ತ ಮುತ್ತಲಿನ ವಿಧ್ಯಾರ್ಥಿಗಳು ಸ್ಥಳಿಯ ಬಸ್ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ವಿಧ್ಯಾರ್ಥಿ/ವಿಧ್ಯಾರ್ಥಿನಿಯರು ಜಮಾಯಿಸಿ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಿರತ ವಿಧ್ಯಾರ್ಥಿಗಳು ಪತ್ರಿಕೆಯೊಂದಿಗೆ ಮಾತನಾಡಿ ಬೆಳಗಿನ ಜಾವದಲ್ಲಿ ಕಾಲೇಜು ಶಿಕ್ಷಣದ ತರಗತಿಗಳು ನಡೆಯುತ್ತವೆ ಎಂಬ ಸಾಮನ್ಯ ಜ್ಞಾನ ಸಾರಿಗೆ ಸಂಚಾರ ನಿಗಮದ ವ್ಯವಸ್ಥಾಪಕರಿಗೆ ಇದೆಯೋ ಇಲ್ಲವೋ ತಿಳಿಯದು, ಸಮಯಕ್ಕೆ ಸರಿಯಾಗಿ ಬಸ್ ಓಡಿಸದ ಕಾರಣ ಪ್ರತಿ ದಿನವೂ ಒಂದಿಲ್ಲೊಂದು ತರಗತಿಯಿಂದ ಹೊರ ಉಳಿಯಬೇಕಾದ ಪರಿಸ್ಥಿತಿ ನಮ್ಮದಾಗಿದೆ, ಅಷ್ಟೇ ಅಲ್ಲದೆ ತಾವರಗೇರಾದಿಂದ ಗಂಗಾವತಿ ಹೋಗಬೇಕಾದರೆ ಕನಕಗಿರಿ ಕೇಸರಹಟ್ಟಿ ವಿವಿಧ ಗ್ರಾಮಗಳ ವಿಧ್ಯಾರ್ಥಿಗಳು ಪ್ರತಿ ನಿತ್ಯವೂ ಬಸ್ ನಲ್ಲಿ ಸ್ಥಳ ಸಿಗದೆ ಜೋತು ಬಿದ್ದುಕೊಂಡು ಹೋಗಬೇಕಾಗಿರುವದು ಅನಿವಾರ್ಯ ದುಸ್ಥಿತಿಯಾಗಿದೆ ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದ ಬಸ್ ಸಂಚಾರ ನಿಗಮದ ಅಧಿಕಾರಿಗಳಿಗೆ ನಮ್ಮ ಧಿಕ್ಕಾರ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಸ್ಥಳದಲ್ಲೆ ಇದ್ದ ಬಸ್ ನಿಲ್ದಾಣದ ಬಸ್ ಸಂಚಾರ ನಿಯಂತ್ರಕ ಪ್ರತಿಕ್ರಿಯಿಸಿ ನಾಳೆಯಿಂದ ವಿಧ್ಯಾರ್ಥಿಗಳಿಗೆ ಸಮಯಕ್ಕೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಲಾಗುವದು ಎಂದರು.