ಜಾಲಹಳ್ಳಿ- ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಯಲ್ಲಿ ಬರುವ ಬುಂಕಲದೊಡ್ಡಿ ಗ್ರಾಮಕ್ಕೆ ಹತ್ತಿರ ವಿರುವ ಶ್ರೀ ಶ್ರೀ ಆದಿಲಿಂಗ ಮೌನೇಶ್ವರ ವೀರಗೋಟ ಮಠದಲ್ಲಿ ಶ್ರೀ ಶ್ರೀ ಅಡವಿಲಿಂಗ ಮಹಾರಾಜರ ಧಿವ್ಯಸಾನಿಧ್ಯದಲ್ಲಿ ಅತಿ ವಿಜೃಂಭಣೆಯಿಂದ ರಥೋತ್ಸವ ಜರುಗಿತು ರಥೋತ್ಸವಕ್ಕೆ ಬೇರೆ ಬೇರೆ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಸಾವಿರಾರು ಭಕ್ತರು ಆಗಮಿಸಿ ಭಕ್ತಿ ಮೆರೆದರು ರಥೋತ್ಸವ ಪೂರ್ವದಲ್ಲಿ ಬುಂಕಲದೊಡ್ಡಿ ಗ್ರಾಮದಿಂದ ಕುಂಬ ಕಳಸದ ಮೆರವಣಿಗೆ ಮತ್ತು ಕಣಿಮಜಲು ಡೊಳ್ಳು ಕುಣಿತ ನಂದಿಕೋಲು ಕುದುರೆ ಕುಣಿತ ಮೆರವಣಿಗೆ ಬುಂಕಲದೊಡ್ಡಿ ಗ್ರಾಮದಿಂದ ಸಾವಿರಾರು ಮಹಿಳೆಯರು ಮತ್ತು ಪುರುಷರು ಕಾಲು ನಡುಗೆಯಲ್ಲಿ ಅತಿ ವಿಜೃಂಭಣೆಯಿಂದ ಮಠಕ್ಕೆ ಜನ ಸಾಗರ ಹರಿದು ಬಂದಿದು ತುಂಬ ಆಕರ್ಷಣೆ ಯಾಗಿತ್ತು ನಂತರ ದಲ್ಲಿ ಮಠದಿಂದ ಶ್ರೀ ಶ್ರೀ ಆದಿಲಿಂಗ ಮೌನೇಶ್ವರ ಮೂರ್ತಿ ಗಂಗಸ್ಥಳಕ್ಕೆ ಬಾಜಿಬಜಂತ್ರಿಯೊಂದಿಗೆ ಪುರುವಂತರ ಸೇವೆಯೊಂದಿಗೆ ಕೃಷ್ಣ ನದಿಗೆ ಮೌನೇಶ್ವರರ ಝಳಕಕ್ಕೆಅಡವಿಲಿಂಗ ಮಹಾರಾಜರ ನೇತೃತ್ವದಲ್ಲಿ ಮೆರವಣಿಗೆ ಯೊಂದಿಗೆ ತೆರಳಲಾಯಿತು ಕೃಷ್ಣ ನದಿಯಲ್ಲಿ ಮಿಂದ ನಂತರ ರಥೋತ್ಸವ ಅತಿವಿಜ್ರಂಭಣೆಯಿಂದ ಜರುಗಿತು ಸಾವಿರಾರು ಭಕ್ತರು ಹಣ್ಣು ಹೂ ಉತ್ತತ್ತಿ ರಥೋತ್ಸವಕ್ಕೆ ಎಸೆದು ಭಕ್ತಿ ಮೆರೆದರು
Check Also
ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …