ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಪುರ ಕೆರೆಯ ಎಡಗಡೆಯ ಭಾಗದಲ್ಲಿ 100 ಎಕರೆ ಜಾಗವನ್ನು ಮಂಜೂರು ಮಾಡುವ ಕುರಿತು ಸಣ್ಣ ನೀರಾವರಿ ಇಲಾಖೆ ಸಚಿವರಾದ ಜೆ ಸಿ ಮಾಧುಸ್ವಾಮಿ ಅವರಿಗೆ ಸೋಮುವಾರದಂದು ಮನವಿ ಸಲ್ಲಿಸಲಾಯಿತು.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲಿಂಗಸಗೂರಿಗೆ ತೆರಳುವ ಮಾರ್ಗ ಮದ್ಯದಲ್ಲಿ ಸ್ಥಳೀಯ ಪ್ರವಾಸಿ ಮಂದಿರದ ಹತ್ತಿರ ಸ್ಥಳೀಯ ಪಟ್ಟಣ ಪಂಚಾಯತ್ ಸದಸ್ಯರು ಹಾಗೂ ಸಾರ್ವಜನಿಕರು ಸಚಿವರನ್ನು ಸ್ವಾಗತಿಸಿ ಮನವಿ ಸಲ್ಲಿಸಿದರು. ನಂತರ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಸಚಿವರಲ್ಲಿ ಮನವಿ ಮಾಡಿಕೊಂಡು ಈಗಾಗಲೇ ತುರುವಿಹಾಳ ಎಡದಂಡೆ ಕಾಲುವೆಯಿಂದ ತಾವರಗೇರಾ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸರ್ಕಾರವು ಸಚಿವ ಸಂಪುಟದಲ್ಲಿ ಮಂಜೂರು ಮಾಡಿ ಅನುದಾನ ಬಿಡುಗಡೆ ಗೊಳಿಸಿದ್ದು ಪುರ ಕೆರೆಯಲ್ಲಿ ಜಾಗ ಮಂಜೂರು ಮಾಡಿಸಿಕೊಡಬೇಕೆಂದು ಹೇಳಿದರು.
ಮನವಿ ಸ್ವೀಕರಿಸಿದ ಸಚಿವ ಮಾಧುಸ್ವಾಮಿ ಅವರು ಕೆರೆಯ ಜಾಗವನ್ನು ನೀಡುವದಾಗಿ ಭರವಸೆ ನೀಡಿದರು.
ಈ ಸಂಧರ್ಬದಲ್ಲಿ ಪಪಂ ಸದಸ್ಯರಾದ ನಾರಾಯಣ ಗೌಡ ಮೆದಿಕೇರಿ, ಅಂಬಣ್ಣ ಕಂದಗಲ್, ವಿರೇಶ ಭೋವಿ, ಅಯೂಬ್ ಖಾನ್, ಮುಖಂಡರಾದ ಬಸನಗೌಡ ಮಾಲಿ ಪಾಟೀಲ್, ದುರುಗೇಶ ನಾರಿನಾಳ, ಲಿಂಗರಾಜ ಹಂಚಿನಾಳ, ಅಮರೇಶ ಗಾಂಜಿ, ವೀರೆಶ ತಾಳಿಕೋಟಿ, ಅಮರೇಶ ಕುಂಬಾರ, ರುದ್ರಗೌಡ ಕುಲಕರ್ಣಿ, ಮಂಜು ಕುಂಬಾರ, ರಂಗಪ್ಪ ಉಪ್ಪಾರ, ರಾಮಣ್ಣ ಭೋವಿ ಹಾಗೂ ಇನ್ನೀತರರಿದ್ದರು.