ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಗುಣಾತ್ಮಕ ಕಾಮಗಾರಿ ಮಾಡುವ ಮೂಲಕ ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಕಾಮಗಾರಿ ಕೈಗೊಂಡು ತಕ್ಷಣವೇ ಕಾಮಗಾರಿ ಪ್ರಾರಂಭಿಸಿವುಂತೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.
ಅವರು ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮಂಜೂರಾದ 1.10 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವಸತಿ ಗೃಹ ಹಾಗೂ ಕಾಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಲವಾರು ದಿನಗಳಿಂದ ಅವಶ್ಯಕತೆ ಇದ್ದ ವಸತಿ ಗೃಹ ಹಾಗೂ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು ತಕ್ಷಣವೇ ಕಾಮಗಾರಿ ಆರಂಭವಾಗಲಿದೆ ಎಂದರು.
ನಂತರ ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಇನ್ನು ಹೆಚ್ಚಿನ ಅನುದಾನ ತಂದು, ಪಟ್ಟಣದ ಜನರ ಶ್ರೇಯಾಭಿವೃದ್ದಿಗಾಗಿ ಕೆಲಸ ಮಾಡುತ್ತೆನೆಂದು ತಿಳಿಸಿದರು. ಈ ಸಂಧರ್ಬದಲ್ಲಿ ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕರ್, ಆರೋಗ್ಯ ಅಧಿಕಾರಿ ಆನಂದ ಗೊಟೂರ, ಪಪಂ ಸದಸ್ಯ ರಾದ ಚಂದ್ರಶೇಖರ ನಾಲತವಾಡ, ನಾರಾಯಣ ಗೌಡ ಮೆದಿಕೇರಿ, ವೀರನಗೌಡ ಪಾಟೀಲ್, ವೀರೆಶ ಭೋವಿ, ಶಾಂತಲಾ ಮುಖಿಯಾಜಿ, ಮುಖಂಡರಾದ ಡಾ. ಶಾಮೀದ್ ಸಾಬ ದೋಟಿಹಾಳ, ಆನಂದ ಭಂಡಾರಿ, ವೀರೆಶ ತಾಳಿಕೋಟಿ, ಶಾಮೀದಸಾಬ ನಾಲಗಾರ, ಅಮರೇಶ ಗಾಂಜಿ, ರುದ್ರಗೌಡ ಕುಲಕುರ್ಣಿ, ವೈದ್ಯಾದಿಕಾರಿ ಡಾ.ಕಾವೇರಿ ಶಾವಿ, ಪ್ರಶಾಂತ ತಾಳಿಕೋಟಿ ಇನ್ನಿತರರಿದ್ದರು.
*ವಾಲ್ಮೀಕಿ ಸಮುದಾಯ ಭವನದ ಭೂಮಿ ಪೂಜೆ*
ಪಟ್ಟಣದ ಕರಡಚೆಲುಮಿ ರಸ್ತೆಯಲ್ಲಿಯ ವಾಲ್ಮೀಕಿ ಸಮುದಾಯ ಭವನ ನಿರ್ಮಾಣದ ಕಟ್ಟಡ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸಮುದಾಯ ಭವನ ನಿರ್ಮಾಣಕ್ಕಾಗಿ ಈಗಾಗಲೇ 50 ಲಕ್ಷ ಬಿಡುಗಡೆ ಯಾಗಿದ್ದು ಇನ್ನು 25 ಲಕ್ಷ ಅನುದಾನ ನೀಡುವುದಾಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.
ನಂತರ ಹಿಂದುಳಿದ ವಾಲ್ಮೀಕಿ ಸಮುದಾಯವು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮುಂದೆ ಬರಬೇಕು, ಪಟ್ಟಣದ ವಾಲ್ಮೀಕಿ ಸಮುದಾಯ ದವರು ಸ್ವಂತ 10 ಲಕ್ಷ ರೂ ವೆಚ್ಚದಲ್ಲಿ ನಿವೇಶನ ಖರೀದಿ ಮಾಡಿಕೊಂಡು ಸಮಾಜದ ಬಗ್ಗೆ ಕಾಳಜಿ ಹೊಂದಿರುವುದು ಶ್ಲಾಘನೀಯ ಎಂದರು.
ಈ ಸಂಧರ್ಬದಲ್ಲಿ ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕರ್, ಪಪಂ ಸದಸ್ಯರಾದ ಚಂದ್ರಶೇಖರ ನಾಲತವಾಡ, ನಾರಾಯಣ ಗೌಡ, ವೀರನಗೌಡ ಪಾಟೀಲ್, ವೀರೆಶ ಭೋವಿ, ರಾಘವೇಂದ್ರ ನಾಯಕ್, ಗ್ರಾಪಂ ಮಾಜಿ ಅಧ್ಯಕ್ಷೆ ರಾದ ನರಹರಿ ನಾಯಕ್ ಶಶಿಕಲಮ್ಮ ಬಿಳೆಗುಡ್ಡ, ವೆಂಕಟೇಶ ಗೊತಗಿ, ಸಂತೋಷ ಬಿಳೇಗುಡ್ಡ, ಕನಕಪ್ಪ ಬಿಳೇಗುಡ್ಡ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.