Friday , November 22 2024
Breaking News
Home / Breaking News / ಕವಿತಾಳ- ಶಿವಾಜಿ ಮಹಾರಾಜರ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಣೆ

ಕವಿತಾಳ- ಶಿವಾಜಿ ಮಹಾರಾಜರ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಣೆ

 


ವರದಿ ಆನಂದ ರಜಪೂತ
ಕವಿತಾಳ :- ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ. ದೇಶಪ್ರೇಮ ಮತ್ತು ಆದರ್ಶಗಳು ಯುವಕರಿಗೆ ಸದಾ ಪ್ರೇರಕ ಶಕ್ತಿಯಾಗಿದೆ ಎಂದು ಮುಖ್ಯ ಗುರುಗಳಾದ ಮಲ್ಲಪ್ಪ ಹೇಳಿದರು.

ಪಟ್ಟಣ ಸಮೀಪದ ಮಲ್ಕಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿದರು

ಛತ್ರಪತಿ ಶಿವಾಜಿ ಮಹಾರಾಜರ ಅವರು ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ ಅವರು ವಿಶ್ವಚೇತನರು ಎಂದು ಹೇಳಿದರು ಜೀಜಾಬಾಯಿ ಅವರು ಶಿವಾಜಿ ಮಹಾರಾಜರಿಗೆ ಚಿಕ್ಕಂದಿನಿಂದಲೇ ರಾಮಾಯಣ ಮಹಾಭಾರತದ ಕಥೆಗಳು ದೇಶ ಕಟ್ಟುವಲ್ಲಿ ಹೋರಾಡಿದ ಮಹಾಪುರುಷರ ಜೀವನ ಸಾಧನೆಗಳು ಹೇಳಿ ಅವರಲ್ಲಿ ಅವರಲ್ಲಿ ಆದರ್ಶಗಳನ್ನು ತುಂಬುತ್ತಿದ್ದರು ಜೀಜಾಬಾಯಿ ವರಂತೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೀವನ ಮೌಲ್ಯಗಳನ್ನು ಹೇಳಿ ಕೂಡ ಬೇಕು ಎಂದು ಹೇಳಿದರು

ಶಿವಾಜಿಗೆ ರಕ್ತಗತವಾಗಿ ಧೈರ್ಯ ಶಕ್ತಿ ಹಾಗೂ ಕ್ಷತ್ರಿಯ ಗುಣಗಳಿದ್ದವು ಶಿವಾಜಿಯವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು..

ನಂತರ ಸಂತೋಷ ಶಿಕ್ಷಕರು ಮಾತನಾಡಿದ ಆರ್ಥಿಕ. ಸಾಮಾಜಿಕ. ರಾಜಕೀಯ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಸವಿತಾ ಸಮಾಜ ತನ್ನದೇ ಆದ ಪರಂಪರೆ ಹೊಂದಿದೆ. ಸವಿತಾ ಮಹರ್ಷಿ ದೇವಾನುದೇವತೆಗಳ ಜೊತೆಗೆ ತಪಸ್ಸು ಮಾಡುತ್ತಿದ್ದರು ಎಂದು ಹೇಳಿದರು

ಈ ಸಂದರ್ಭದಲ್ಲಿ ಶಿಕ್ಷಕರಾದ ಸುನೀಲ್ ನಾಯ್ಕ. ಬೂದೇಶ್. ಶಿವರಾಮ. ಇತರರು ಇದ್ದರು

About N Shameed

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!