ವರದಿ ಆನಂದ ಸಿಂಗ್ ರಜಪೂತ
ಕವಿತಾಳ :-
“ಆಡು ಮುಟ್ಟದ ಸೊಪ್ಪಿಲ್ಲ” ಎಂಬ ನಾಣ್ಣುಡಿಯನ್ನು ತ್ರಿಪದಿ ಕವಿ ಸರ್ವಜ್ಞ ಕ್ಷೇತ್ರದಲ್ಲೂ ಕೈಯಾಡಿಸಿದ್ದಾರೆ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುವ ನೀಡಿದ್ದಾರೆ ಎಂದು ಮುಖ್ಯಗುರುಗಳಾದ ರುದ್ರಪ್ಪ ಲೋಕಪೂರ ಹೇಳಿದರು.
ಪಟ್ಟಣ ಸರಕಾರಿ ಹಿರಿಯ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಸಂತ ಕವಿ ತ್ರಿಪದಿ ಕವಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ವಿಶ್ವಕ್ಕೆ ಮಾದರಿಯಾಗಿದ ವರಕವಿ ತ್ರಿಪದಿ ಕವಿ ಸರ್ವಜ್ಞ 16ನೇ ಶತಮಾನದ ವಚನಕಾರರು ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ ನಿಷ್ಠೂರವಾದಿ ವಾಸ್ತವ ಪ್ರತಿಪಾದಕ ವಿರಾಗಿ ಮಹಾನ ಕವಿ ಸರ್ವಜ್ಞರು ಸಾಮಾನ್ಯರೊಂದಿಗೆ ಬೆರೆತು ಸಮಾಜದ ಅಂಕುಡೊಂಕು ತಿದ್ದಿ ತೀಡಿ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಭೂಗೋಳ ಸೂರ್ಯ ಚಂದ್ರ ಆಕಾಶ ಸೇರಿದಂತೆ ಪ್ರತಿಯೊಂದು ವಿಷಯದ ಕುರಿತು ತ್ರಿಪದಿಗಳನ್ನು ರಚಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಅಯ್ಯನ ಗೌಡ. ಬಾಬನ್. ಸಂಗಪ್ಪ. ಶಿಕ್ಷಕಿಯರಾದ ಪ್ರೀತಿ ಭಾರತಿ ಶರಣಮ್ಮ ಸಂಗಮ್ಮ ಇತರರು ಇದ್ದರು