ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ವೀರಭದ್ರೇಶ್ವರ ಜಾತ್ರಾ ಅಂಗವಾಗಿ ಸ್ಥಳೀಯ ಎಪಿಎಮಸಿ ಆವರಣದಲ್ಲಿ ನಡೆದ 1.5 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ಕಲ್ಲು ಎಳೆಯುವ ಸ್ಪರ್ಧೆಯ ಲ್ಲಿ ಪಾಲ್ಗೊಂಡು ವೀಕ್ಷಿಸಿದ್ದು ವಿಶೇಷವಾಗಿತ್ತು.
ಸ್ಪರ್ಧೆಗೆ ಗುಡದೂರಿನ ಗುರುಬಸಯ್ಯ ತಾತನವರು ಚಾಲನೆ ನೀಡಿದರು. ನಂತರದಲ್ಲಿ ಒಟ್ಟು 8 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು, ಅದರಲ್ಲಿ ಹಂಚಿನಾಳ ಗ್ರಾಮದ ರೈತ ಶರಣಪ್ಪ ಗುಡಿಹಿಂದಲ್ ಅವರ ಎತ್ತುಗಳು ಸ್ಪರ್ಧೆಯಲ್ಲಿ 1 ನಿಮಿಷ 16 ಸೆಕೆಂಡ್ ಗಳಲ್ಲಿ ನಿಗದಿತ ಗುರಿಯನ್ನು ತಲುಪಿ ಪ್ರಥಮ ಸ್ಥಾನ ಪಡೆದು 5 ಗ್ರಾಂ ಬಂಗಾರ ಪಡೆದುಕೊಂಡವು, ಅದೇ ರೀತಿ ದ್ವೀತಿಯ ಸ್ಥಾನ ವೆಂಕೋಬಣ್ಣ ಗುಡಿಹಿಂದಲ್ ಅವರ ಎತ್ತುಗಳು ಪಡೆದು 11 ತೊಲಿ ಬೆಳ್ಳಿ ತಮ್ಮದಾಗಿಸಿಕೊಂಡರೆ ಸ್ಥಳೀಯ ಪಟ್ಟಣದ ಸತ್ತಾರ ಸಾಬ ಮುಲ್ಲಾ ತೃತೀಯ ಸ್ಥಾನ ಪಡೆದು 5 ತೊಲಿ ಬೆಳ್ಳಿ ತಮ್ಮದಾಗಿಸಿಕೊಂಡರು.
ನಂತರ ನಡೆದ ಸಮಾರಂಭದಲ್ಲಿ ಬಹುಮಾನ ವಿತರಣೆ ಕಾರ್ಯಕ್ರದಲ್ಲಿ ಸ್ಥಳೀಯ ಠಾಣಾಧಿಕಾರಿ ಗೀತಾಂಜಲಿ ಶಿಂಧೆ, ಎಎಸ್ಐ ಗಳಾದ ಅತೀಕ್ ಅಹಮದ್, ಮಲ್ಲಪ್ಪ ವಜ್ರದ, ಎಪಿಎಮ್ ಸಿ ನಿರ್ದೇಶಕ ಶೇಖರಪ್ಪ ನಾಲತವಾಡ, ಮುಖಂಡರಾದ ಈರಪ್ಪ ಎಲಿಗಾರ, ವೀರಭದ್ರಪ್ಪ ನಾಲತವಾಡ, ಸಂಗನಗೌಡ ಸರನಾಡಗೌಡರ, ಶಾಮೀದ್ ಸಾಬ ನಾಲಗಾರ, ಆದಪ್ಪ ನಾಲತವಾಡ, ಸಂಗಪ್ಪ ಕೋರಿ, ರಮೇಶ್ ತಿಮ್ಮಾಪೂರ, ಶೇಖಪ್ಪ ಗುಬ್ಬಿ ಸೇರಿದಂತೆ ಇನ್ನೀತರ ಮುಖಂಡರು ಇದ್ದರು.
ಸ್ಥಳೀಯ ಪೋಲಿಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ ಏರ್ಪಡಿಸಲಾಗಿತ್ತು.