ವರದಿ: ಎನ್ ಶಾಮೀದ್ ತಾವರಗೇರಾ
ತಾವರಗೇರಾ : ಈ ಭಾಗದ ಆರಾಧ್ಯ ದೇವರು ಶ್ರೀ ತ್ರಿ ವೀರಭದ್ರೇಶ್ವರ ಜಾತ್ರೆಯು ಫೆ 18 ರಿಂದ ಮೂರು ದಿನಗಳ ಕಾಲ ವಿಜ್ರಂಭಣೆಯಿಂದ ಜರುಗುವದಾಗಿ ಜಾತ್ರಾ ಸಮಿತಿ ತಿಳಿಸಿದೆ. ಕೊರೊನಾ ಹಿನ್ನೆಲೆ ಯಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಿದ್ದ ಸಮಿತಿಯವರು ಜಾತ್ರೆಗೆ ಅನುಮತಿ ದೊರೆತ ಹಿನ್ನೆಲೆಯಲ್ಲಿ ಪ್ರತಿ ವರ್ಷ ದಂತೆ ಈ ವರ್ಷವೂ ಕೂಡ ಸಕಲ ಸಂಪ್ರದಾಯ ದಂತೆ ನಡೆಯಲಿದೆ. ಕಳೆದ ವರ್ಷ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಶೀತಲ ಗೊಂಡಿದ್ದ ರಥ ವನ್ನು ಈ ಬಾರಿ ಹೊಸದಾಗಿ 6 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಶ್ರೀಕರಿವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ, ಮಧ್ಯಾಹ್ನ 4 ಗಂಟೆಗೆ ಮೇಗಲಪೇಟೆ ಶ್ರೀವೀರಭದ್ರೇಶ್ವರ ದೇವಸ್ಥಾದಿಂದ ಬೆಳ್ಳಿ ಉತ್ಸವ ಮೂರ್ತಿಗಳ ಮೆರವಣಿಗೆ ಸಕಲ ಮಂಗಳ ವಾದ್ಯಗಳೊಂದಿಗೆ ಹೊರಟು ಒಳಕೋಟಿ ಶ್ರೀವೀರಭದ್ರೇಶ್ವರ ದೇವರ ಮೂರ್ತಿಗೆ ಬೆಳ್ಳಿ ಆಭರಣಗಳಿಂದ ಅಲಂಕರಿಸುವುದು.
ಫೆ. 19 ರಂದು ಶನಿವಾರ ಶ್ರೀ ಒಳಕೋಟಿ ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ, 7 ಗಂಟೆಗೆ ಮೇಗಲಪೇಟೆ ಶ್ರೀವೀರಭದ್ರೇಶ್ವರ ದೇವಸ್ಥಾನದಿಂದ ಗುಗ್ಗಳ ಪುರವಂತರಿಂದ ವೀರಗಾಸೆ, ಪೂಜೆ ಕುಣಿತ, ಶಿವತಾಂಡವ ನೃತ್ಯ, ಖಡ್ಗ ಪ್ರವಚನ, ಗೊಂಬೆ ಕುಣಿತ, ಆನೆ, ಕುದುರೆ, ನಂದಿಕೋಲು ಕುಣಿತ, ಸುಮಂಗಲೆಯರಿಂದ ಕಳಸ, ಕುಂಭೋತ್ಸವ, ಸಕಲ ಮಂಗಳ ವಾದ್ಯಗಳೊಂದಿಗೆ ಹೊರಟು ಒಳಕೋಟಿ ಶ್ರೀವೀರಭದ್ರೇಶ್ವರ ದೇವಸ್ಥಾನ ತಲುಪಿ, ಅಗ್ನಿ ಪ್ರವೇಶ, ಕುಂಬಾಭಿಷೇಕ, ಶ್ರೀಗಳ ಪಾದ ಪೂಜೆ, 11 ಗಂಟೆಗೆ ಅಯ್ಯಾಚಾರ ಅನ್ನ ಸಂತರ್ಪಣೆ ಮಧ್ಯಾಹ್ನ 12 ಕ್ಕೆ ವಿವಿಧ ಮಠಾಧೀಶರಿಂದ ಆರ್ಶೀವಚನ ಮತ್ತು ಧಾರ್ಮಿಕ ಗೋಷ್ಠಿ ಹಾಗೂ ಸನ್ಮಾನ ಸಮಾರೋಪ ಸಮಾರಂಭ ಜರುಗುವುದು.
ಸಾಯಾಂಕಾಲ 5 ಗಂಟೆಗೆ ಕಳಸಾರೋಹಣ ಹಾಗೂ ಮಹಾರಥೋತ್ಸವವು ಜರುಗಲಿದೆ.
ಫೆ.20 ಶನಿವಾರ ರಂದು 1.5 ಟನ್ ಭಾರದ ಕಲ್ಲನ್ನು ಎತ್ತುಗಳಿಂದ ಎಳೆಯುವ ಸ್ಪರ್ಧೆ ಮತ್ತು ದನಗಳ ಜಾತ್ರೆ ನಡೆಯಲಿದೆ.
ಕಲ್ಲು ಎಳೆಯುವ ಸ್ಪರ್ಧೆ : ಎತ್ತುಗಳಿಂದ 1 .5 ಟನ್ ಭಾರದ ಕಲ್ಲುಗಳನ್ನು ಎಳೆಯುವ ಸ್ಪರ್ದೆ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ಪಾಲ್ಗೋಳ್ಳುವದು ವಿಶೇಷವಾಗಿದೆ.