ಕೊಪ್ಪಳ : ಜಿಲ್ಲೆಯಲ್ಲಿ ಕರಡಿ ಹಾಗೂ ಚಿರತೆಗಳ ಹಾವಳಿ ಮುಂದುವರೆದಿದೆ. ಅದರಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕರಡಿಗಳ ಭಯ ಮಾತ್ರ ಆವರಿಸಿಕೊಂಡಿದೆ. ಇದಕ್ಕೆಲ್ಲಾ ಇತ್ತೀಚೆಗೆ ಈ ವಸತಿ ಶಾಲೆಯ ಅಕ್ಕ ಪಕ್ಕದಲ್ಲಿರುವ ಪಪ್ಪಾಯ, ಕಲ್ಲಂಗಡಿ ಸೇರಿದಂತೆ ರೈತರ ಜಮೀನುಗಳಿಗೆ ನುಗ್ಗುವ ಕರಡಿಗಳ ದಾಳಿಯ ಸುದ್ದಿಯಿಂದ ಇಲ್ಲಿನ ಹೆಣ್ಣುಮಕ್ಕಳು ಭಯದ ವಾತಾವರಣದಲ್ಲಿ ಜೀವನ ಸಾಗಿಸುವಂತಾಗಿದೆ. ಇಲ್ಲಿನ ವಿದ್ಯಾರ್ಥಿನಿಯರು ಸೇರಿದಂತೆ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ನಿತ್ಯ ಜೀವ ಕೈಯಲ್ಲಿ ಹಿಡಿದು ಜೀವನ ಸಾಗಿಸುವಂತಾಗಿದೆ. ಮೊದಲೇ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದೆ ಪರ್ವತ ಪ್ರದೇಶಗಳಲ್ಲಿ ನರಭಕ್ಷಕ ವನ್ಯ ಜೀವಿಗಳಿಂದ ಆತಂಕದಲ್ಲಿದ್ದವರಿಗೆ ಇಲ್ಲಿನ ಕರಡಿಗಳ ಹಾವಳಿಯಿಂದ ವಿದ್ಯಾರ್ಥಿಗಳ ಪಾಲಕರು ಬೇಸತ್ತು ಹೋಗಿರುವುದಂತು ಸತ್ಯ..!