ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ : ಪಟ್ಟಣದ ಲಿಂಗಸಗೂರ – ಗಂಗಾವತಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ವಿರಾಪೂರ ರಸ್ತೆಯು ಅಪಘಾತ ವಲಯವೆಂದು ಪರಿಗಣಿಸಲ್ಪಟ್ಟಿದ್ದು ದುರಸ್ತೆ ಕಾರ್ಯಕ್ಕೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಸಂಬಂಧ ಪಟ್ಟ ಗುತ್ತಿಗೆದಾರರಿಗೆ ಕಾಮಗಾರಿ ಆರಂಭಿಸುವಂತೆ ಇಲಾಖೆಯ ಆದೇಶ ಇದ್ದರೂ ಕೂಡ ಕಳೆದ ಮೂರು ತಿಂಗಳಿನಿಂದೆ ಕಂಕರ್ ಗಳನ್ನು ಹಾಕಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವದರಿಂದ ರಸ್ತೆಯಲ್ಲಿ ದಿನನಿತ್ಯ ರಾಣಿ ಚೆನ್ನಮ್ಮ ವಸತಿ ಶಾಲೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಅಲೆಮಾರಿ ಜನಾಂಗದ ವಸತಿ ಶಾಲೆ ಸೇರಿದಂತೆ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಹಾಗೂ ವಿರಾಪೂರ ಗ್ರಾಮಸ್ಥರು ಓಡಾಡುತ್ತಿದ್ದು ಕಂಕರ್ ರಸ್ತೆ ಯ ಮೂಲಕ ಹಾದು ಹೊಗಬೇಕಾಗಿದ್ದು , ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ರಸ್ತೆ ದುರಸ್ತಿ ಪಡಿಸುವಂತೆ ಒತ್ತಾಯಿಸಿಯಿದ್ದರು ಕೂಡ ಇಲಾಖೆಯ ಅಧಿಕಾರಿಗಳು ಹಾಗೂ ಸಂಭಂದಿಸಿದ ಜನ ಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕುರಿತಂತೆ ಶಿಕ್ಷಕ ಸುಹಾನಿ ಎಸ್ ಒತ್ತಾಯಿಸಿದ್ದಾರೆ.