ವರದಿ : ನಾಗರಾಜ್ ಎಸ್ ಮಡಿವಾಳರ್
ಲಿಂಗಸಗೂರು : ಪಟ್ಟಣದ ಶ್ರೀ ಸಂಗಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸಂತ ಸೇವಾಲಾಲರ ಜಯಂತ್ಯೋತ್ಸವ ಕಾರ್ಯಕ್ರಮದ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಧ್ಯಾಪಕ ಭೀಮಸಿಂಗ್ ನಾಯ್ಕ್ ಸೇವಾಲಾಲರು ಬಾಲ್ಯದಲ್ಲಿ ಬೇಟೆಯಾಡಲು ಹೋದಾಗ ನವಿಲೊಂದು ಬೇಟೆಗಾರನ ಕಣ್ತಪ್ಪಿಸಿ ಬಂದು ಸೇವಾಲಾಲರ ಪಂಚೆಯಲ್ಲಿ ಅಡಗಿಕೊಳ್ಳುತ್ತದೆ. ಬೇಟೆಗಾರನಿಂದ ತಪ್ಪಿಸಿ ನವಿಲಿನ ಪ್ರಾಣ ಉಳಿಸುತ್ತಾರೆ. ಅಂದಿನಿಂದ ತಾವೂ ಬೇಟೆಯಾಡುವುದನ್ನು ತ್ಯಜಿಸಿ ಅಹಿಂಸಾ ಸಂದೇಶ ಬೋಧಿಸಿದ ಪರಮ ಸಂತ ಸೇವಾಲಾಲರು
ವೃದ್ಧರು, ಕಷ್ಟದಲ್ಲಿರುವವರು ಮತ್ತು ಅನಾರೋಗ್ಯ ಪೀಡಿತರಿಗೆ ಮತ್ತು ಪ್ರಾಣಿ ಪಕ್ಷಿ ಸಂಕುಲಕ್ಕೂ ರಕ್ಷಣೆ ನೀಡುತ್ತಿದ್ದರು. ಕರುಣಾಮಯಿಯ ಬದುಕು ಯುವಜನತೆ ಅನುಕರಿಸಬೇಕು ಎಂದರು.
ಈ ಸಂದರ್ಭ ಕಾಲೇಜು ಪ್ರಾಚಾರ್ಯ ಬಸವರಾಜ ವೈ, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ನೆರೆದಿದ್ದರು.