ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಪಟ್ಟಣದ ದೇವಾಂಗ ಸಮಾಜದವರು ಬೃಹತ್ ಮೆರವಣಿಗೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದರು.
ಬುಧವಾರದಂದು ಇಲ್ಲಿಯ ಚೌಡೇಶ್ವರಿ ದೇವಸ್ಥಾನದಿಂದ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಾಡ ಕಾರ್ಯಾಲಯದಲ್ಲಿ ನಾಡ ತಹಶಿಲ್ದಾರರಾದ ಮಂಜುಳಾ ಪತ್ತಾರ ಇವರ ಮೂಲಕ ಮುಖ್ಯ ಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಬದಲ್ಲಿ ಸಮಾಜದ ಮುಖಂಡ ಪ್ರಹ್ಲಾದ್ ಗೌಡ ಮೆದಿಕೇರಿ ಮಾತನಾಡಿ ನೇಕಾರ ವೃತ್ತಿಯಿಂದಿರುವ ದೇವಾಂಗ ಜಾತಿಯ ಒಟ್ಟು 29 ಉಪ ಪಂಗಡಗಳು ನೇಕಾರಿಕೆ ವೃತ್ತಿಯಲ್ಲಿದ್ದು, ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ಆದ ಕಾರಣ ಸರ್ಕಾರವು ಕೂಡಲೇ ಕರ್ನಾಟಕ ದೇವಾಂಗ ಅಭಿವೃದ್ಧಿ ಪ್ರಾಧಿಕಾರ ರಚಿಸಿ ನಮ್ಮ ಸಮುದಾಯಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂಧರ್ಬದಲ್ಲಿ ಸಮಾಜದ ಮುಖಂಡರಾದ ಅಮರೇಶಪ್ಪ ಕೊಪ್ಪರದ, ಹನುಮೇಶ ಕೊಂಕಲ್, ಅಶೋಕ ಓದಾ, ರಾಘವೇಂದ್ರ ಕೊಂಡಕುಂದಿ, ವಿಶ್ವ ಕರಡಕಲ್ ಸೇರಿದಂತೆ ಸಮಾಜದ ಮಹಿಳೆಯರು ಹಾಗೂ ಇನ್ನೀತರರಿದ್ದರು.
ಕಂದಾಯ ಇಲಾಖೆಯ ಸೂರ್ಯಕಾಂತ ಹಾಗೂ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಯ ರಾಜು ಇದ್ದರು.