ಉದಯವಾಹಿನಿ :-
ಕವಿತಾಳ :
ಪಟ್ಟಣ ಸಮೀಪದ ವಟಗಲ್ ಗ್ರಾಮ ಪಂಚಾಯಿತಿ
ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೈಗೊಂಡಿರುವ ಯಕ್ಲಾಸಪೂರ ಕರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.
ನಂತರ ಮಾತನಾಡಿದ ಅವರು ಸರ್ಕಾರ ಕೂಲಿ ಕಾರ್ಮಿಕರಿಗಾಗಿ ಕಾಮಗಾರಿಗಾಗಿ ವರ್ಷದ ನೂರು ದಿನಗಳ ಅವಧಿಗೆ ಕೆಲಸ ಮಾಡುವ ನಿಟ್ಟಿನಲ್ಲಿ ಯೋಜನೆಯನ್ನು ಜಾರಿಗೆ ತಂದಿದ್ದು ಅದನ್ನು ಸರಿಯಾಗಿ ಸದುಪಯೋಗ ಪಡೆದುಕೊಳ್ಳುವ ಮೂಲಕ ಸರಿಯಾಗಿ ಕೆಲಸ ನಿರ್ವಹಿಸಬೇಕು ಕೆರೆ ಕಾಮಗಾರಿ ಜೊತೆಗೆ ಕವಿತಾಳ ಕಾಯ್ದಿಟ ಅರಣ್ಯದಲ್ಲಿ ಕಂದಕ ಬಂದು ನಿರ್ಮಾಣ ಮಾಡುವಂತೆ ಸೂಚಿಸಿದರು. 60 ವರ್ಷ ಮೇಲ್ಪಟ್ಟವರಿಗೆ ಅರ್ಧದಷ್ಟು ಪ್ರಮಾಣ ಕೆಲಸ ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಇಓ ಬಾಬು ರಾಥೋಡ್. ಎಡಿ ಮಂಜುನಾಥ ಜಾವರ್. ತಾಂತ್ರಿಕ ಸಹಾಯಕರು ಶಿವಲಿಂಗೇಶ್ವರ. ಪಿಡಿಓ ಬಸವರಾಜ್. ದಲಿತ ಮುಖಂಡ ಶಿವಪ್ಪ ಚೆಲುವಾದಿ. ಕಂಪ್ಯೂಟರ್ ಆಪರೇಟರ್ ಬಸವರಾಜ್. ಅನಿಲ್ ಕುಮಾರ್ ಪಾಟೀಲ್. ಸೇರಿದಂತೆ ಇತರರು ಇದ್ದರು