ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ :ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಭೇಟಿ ನೀಡಿ , ಆಸ್ಪತ್ರೆಯ ಮೂಲ ಸೌಲಭ್ಯಗಳ ಕುರಿತು ಸಭೆ ನಡೆಸಿದರು
ನಂತರ ಮಾತನಾಡಿದ ಶಾಸಕ ಅಮರೇಗೌಡ ಪಾಟೀಲ್ ಅವರು, ಸ್ಥಳಿಯ ಆಸ್ಪತ್ರೆ ಸುತ್ತಲೂ ಆವರಣ ಗೋಡೆ ಹಾಗೂ ಆರೋಗ್ಯ ಸಹಾಯಕಿಯರ ನೂತನ ೩ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಸರ್ಕಾರದಿಂದ ರೂ ೧ ಕೋಟಿ ೧೦ ಲಕ್ಷ ಹಣ ಮಂಜೂರಾಗಿದ್ದು, ಇದೇ ಫೆ. ೧೫ ರಂದು ಚಾಲನೆ ನೀಡಲಾಗುವದು ಎಂದು ಹೇಳಿದರು.
ನೀರು, ನೆರಳು, ಆಸನಗಳು, ವಿವಿಧ ಮೂಲ ಸೌಕರ್ಯಗಳ ಪರಿಶೀಲಿನೆ ಮಾಡಿದರು. ನಂತರ ಆಸ್ಪತ್ರೆಯ ಎಲ್ಲಾ ಕೊಠಡಿಗಳ ವಿದ್ಯುತ್ ವೈರಿಂಗ್ ಬದಲಾವಣೆ ಮಾಡುವಂತೆ ವೈದ್ಯಾಧಿಕಾರಿ ಡಾ. ಕಾವೇರಿ ಶ್ಯಾವಿ ಮನವಿ ಮಾಡಿಕೊಂಡರು. ಪ್ರತಿಕ್ರೀಯೆ ನೀಡಿದ ಶಾಸಕರು ತಕ್ಷಣವೇ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ಅಧಿಕಾರಿ ಡಾ. ಆನಂದ ಗೋಟೂರು, ಡಾ. ಕಾವೇರಿ ಶ್ಯಾವಿ, ಡಾ. ಪ್ರಶಾಂತ ತಾಳಿಕೋಟಿ, ಡಾ, ಕೃತಿ, ಡಾ. ಶ್ರೀಧರ ಮುಖಂಡರಾದ ಡಾ. ಶ್ಯಾಮೀದ್ ದೋಟಿಹಾಳ, ನಾರಾಯಣಗೌಡ ಮೆದಿಕೇರಿ, ಅಮರೇಶ ಗಾಂಜಿ, ಫಯಾಜ್ ಬನ್ನು ಸೇರಿದಂತೆ ಇನ್ನಿತರರಿದ್ದರು.