Friday , November 22 2024
Breaking News
Home / Breaking News / ಶಿಕ್ಷಣವೇ ಶಕ್ತಿ ಶಿಕ್ಷಣದಿಂದಲೇ ಪ್ರಗತಿ- ಶ್ರೀ ರಾಮುಲು

ಶಿಕ್ಷಣವೇ ಶಕ್ತಿ ಶಿಕ್ಷಣದಿಂದಲೇ ಪ್ರಗತಿ- ಶ್ರೀ ರಾಮುಲು


ವರದಿ :- ಆನಂದ ಸಿಂಗ್ ರಜಪೂತ
ಉದಯವಾಹಿನಿ :
ಕವಿತಾಳ :
ಶೈಕ್ಷಣಿಕವಾಗಿ ಹಿಂದುಳಿದ ನಮ್ಮ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿಕ್ಷಣದ ಕ್ರಾಂತಿಯನ್ನು ಮಾಡುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂದು ಆಸೆಯಾಗಿದೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು
ಅವರು ಇಂದು ವಟಗಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಶಿಕ್ಷಣವೇ ಶಕ್ತಿ ಶಿಕ್ಷಣದಿಂದಲೇ ಪ್ರಗತಿ ಶಿಕ್ಷಣದಿಂದಲೇ ಬದುಕು ಎಂಬುವುದು ಡಾ.ಬಿ.ಆರ್ ಅಂಬೇಡ್ಕರ್ ಎಂದಿರುವ ಮಾತಿನಂತೆ ಹಲವಾರು ಯೋಜನೆಗಳಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಅತ್ಯಂತ ಹಿಂದುಳಿದ ತಾಲೂಕಿನಲ್ಲಿ ಶೈಕ್ಷಣಿಕ ಶಾಂತಿಗಾಗಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕಂಬ ಉದ್ದೇಶದಿಂದ ಇಂದಿರಾಗಾಂಧಿ ವಸತಿ. ಮುರಾರ್ಜಿ ವಸತಿ ಶಾಲೆಗಳು ಸೇರಿದಂತೆ ಏಕಲವ್ಯ ವಸತಿ ಶಾಲೆಯನ್ನು ಸಹ ಮಂಜೂರು ಮಾಡಲಾಗಿದೆ.
ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಆದ್ದರಿಂದ ತಾವುಗಳು ಮುಂದಿನ ಉಪಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಆಶೀರ್ವಾದಿಸಬೇಕು ಎಂದು ಮನವಿ ಮಾಡಿದರು.
ವಿಶೇಷವಾಗಿ ಆಹ್ವಾನಿತರಾಗಿರುವ ಪ್ರತಾಪ್ ಗೌಡ ಪಾಟೀಲ್ ಮಾಜಿ ವಿಧಾನಸಭಾ ಸದಸ್ಯರು. ಮಾತನಾಡಿ ನಾನು 2008 ರಲ್ಲಿ ಮಸ್ಕಿ ಶಾಸಕನಾಗಿ ಆಯ್ಕೆಯಾದಾಗ 2006ರಲ್ಲಿ ಪ್ರಾರಂಭವಾಗಿರುವ ಕೇವಲ ಒಂದು ಮೂರಾರ್ಜಿ ವಸತಿ ಶಾಲೆ ಮಾತ್ರ ಇದು 5 ಹೊಸ ವಸತಿ ಶಾಲೆಗಳನ್ನು ಮಂಜೂರು ಮಾಡುವ ಮೂಲಕ ನಾವು ಕಟ್ಟಡವನ್ನು ನಿರ್ಮಾಣ ಮಾಡಿ ಪ್ರಾರಂಭಿಸಿದ್ದೇವೆ ವಿಶೇಷವಾಗಿ ಶಿಕ್ಷಣಕ್ಕಾಗಿ ಹೆಚ್ಚಿನ ಆದ್ಯತೆಯನ್ನು ಕೊಟ್ಟಿದ್ದೇನೆ ಅಲ್ಲದೆ ನಮ್ಮ ಸರಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನವನ್ನು ನಮ್ಮ ಕ್ಷೇತ್ರಕ್ಕೆ ತರುವ ಮೂಲಕ ಮಾದರಿ ಕ್ಷೇತ್ರವನ್ನಾಗಿಸುವ ಗುರಿಯನ್ನು ಹೊಂದಿದ್ದು ಬರುವ ಉಪಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ಇನ್ನಷ್ಟು ಈ ಕ್ಷೇತ್ರದ ಅಭಿವೃದ್ಧಿಗೆ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಆದಿಮನಿ ವೀರ ಲಕ್ಷ್ಮಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಕೆ. ಸತೀಶ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿವನಗೌಡ ಮಾಲಿಪಾಟೀಲ್ ಶ್ರೀನಿವಾಸ ಇರಕಲ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಮ್ಮ ವೆಂಕಟೇಶ್ ಅರಕೇರಿ. ಮಾಜಿ ಶಾಸಕ ಗಂಗಾಧರ ನಾಯಕ್. ಮಹಾದೇವಪ್ಪಗೌಡ. ಅಂದಾನಪ್ಪ ಗುಂಡಳ್ಳಿ. ವಿಶ್ವನಾಥ್ ಪಾಟೀಲ್ ತೋರಣದಿನ್ನಿ. ಅಪ್ಪಾಜಿಗೌಡ. ಡಾಕ್ಟರ್ ಶಿವ ಬಸಪ್ಪ. ಡಾಕ್ಟರ್ ಮಲ್ಲಿಕಾರ್ಜುನ. ವಿಶ್ವನಾಥ ಪಾಟೀಲ ಅಮೀನಡ. ಸಹಾಯಕ ಆಯುಕ್ತರಾದ ರಾಜಶೇಖರ್ ಡಂಬಳ. ತಶಿಲ್ದಾರ್ ಬಲರಾಮ್ ಕಟ್ಟಿಮನಿ. ಸಿರವಾರ ತಾಲೂಕು ಪಂಚಾಯತ್ ಅಧ್ಯಕ್ಷ ದೇವರಾಜ ನಾಯಕ ಕುರುಕುಂದ. ಶಿವಲಿಂಗಪ್ಪ ವಟಗಲ್. ಶಿವಕುಮಾರ ಗೌಡ. ಬಲವಂತರಾಯ ಗೌಡ ಚಂದ್ರಕಾಂತ್ ಪಾಟೀಲ್ ಗೂಗೇಬಾಳ. ಸೇರಿದಂತೆ ಇತರರು ಇದ್ದರು
ಡಿವೈಎಸ್ಪಿ ವಿಶ್ವನಾಥ್ ಕುಲಕರ್ಣಿ. ಮಾನವಿ ಸಿಪಿಐ ದತ್ತಾತ್ರೇಯ ಕಾರ್ನಾಡ್. ಸಿರವಾರ ಪಿಎಸ್ಐ ಸುಜಾತ ನಾಯಕ್. ಪಿಎಸ್ಐ ವೆಂಕಟೇಶ್. ಎಂ ಮತ್ತು ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದರು

About Nagaraj M

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!