Thursday , September 19 2024
Breaking News
Home / Breaking News / ಮುಖ್ಯ ಮಂತ್ರಿ ಹೇಳಿಕೆ ಖಂಡಿಸಿ ತಾವರಗೇರಾದಲ್ಲಿ ಪ್ರತಿಭಟನೆ

ಮುಖ್ಯ ಮಂತ್ರಿ ಹೇಳಿಕೆ ಖಂಡಿಸಿ ತಾವರಗೇರಾದಲ್ಲಿ ಪ್ರತಿಭಟನೆ

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಂಚಮಸಾಲಿ ಸಮಾಜಕ್ಕೆ 2 (ಎ) ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಪಾದಯಾತ್ರೆ ಗೆ ಮೀಸಲಾತಿ ನೀಡುವ ಬಗ್ಗೆ ಶುಕ್ರವಾರ ಮುಖ್ಯ ಮಂತ್ರಿ ಯಡಿಯೂರಪ್ಪ ಮಾತನಾಡಿ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ ಎಂಬ ಹೇಳಿಕೆಯನ್ನು ಖಂಡಿಸಿ ಇಲ್ಲಿಯ ಪಂಚಮಸಾಲಿ ಸಮುದಾಯ ದವರು ಪ್ರತಿಭಟನೆ ನಡೆಸಿದರು..

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಈಗಾಗಲೇ ಕುಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯು ಚಿತ್ರದುರ್ಗ ದವರೆಗೂ ಮುಂದುವರೆದಿದ್ದು, ಈದೇ ಸಂದರ್ಭದಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ನವರು ಅಧಿವೇಶನದಲ್ಲಿ ಈ ಪ್ರತಿಕ್ರಿಯೆ ನೀಡಿ ಮೀಸಲಾತಿ ಕೇಂದ್ರ ಮಟ್ಟದಲ್ಲಿ ಸಿಗಬೇಕಿದ್ದು ನನ್ನ ಕೈಯಲ್ಲಿ ಇಲ್ಲ ಎಂಬ ಹೇಳಿಕೆಯನ್ನು ಖಂಡಿಸಿ ಇಂದು ನಾವೆಲ್ಲರೂ ಪ್ರತಿಭಟನೆ ನಡೆಸುತ್ತಿದ್ದು ಮೀಸಲಾತಿ ದೊರೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ನಂತರ ನಾಡ ತಹಶಿಲ್ದಾರರಾದ ಮಂಜುಳಾ ಪತ್ತಾರ ಅವರ ಮೂಲಕ ಮುಖ್ಯ ಮಂತ್ರಿ ಗಳಿಗೆ ಮನವಿ ಪತ್ರ ಸಲ್ಲಿಸಿದರು. ಇದಕ್ಕೂ ಮುಂಚೆ ಇಲ್ಲಿಯ ರಾಣಿ ಚೆನ್ನಮ್ಮ ವೃತ್ತ ದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕುಗಿದರು.

ಈ ಸಂಧರ್ಬದಲ್ಲಿ ಪಂಚಸೇನೆ ತಾಲೂಕ ಅಧ್ಯಕ್ಷ ವೀರೆಶ ನಾಲತವಾಡ ವಕೀಲರು, ಅರುಣ ನಾಲತವಾಡ, ಶಂಭನಗೌಡ ಪಾಟೀಲ್, ಶ್ರೀಕಾಂತ್ ನಾಲತವಾಡ, ರಮೇಶ್ ತಿಮ್ಮಾಪೂರ, ಶೇಕಪ್ಪ ಗುಬ್ಬಿ, ಅಮರೇಶ್ ನಾಲತವಾಡ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿಿತರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!