ಉದಯವಾಹಿನಿ:
ಕವಿತಾಳ :- ಪಟ್ಟಣ ಸಮೀಪದ ಹಿರೇ ಹಣಿಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆ ಇಂದು ಶಾಂತಿಯುತವಾಗಿ ನಡೆಯಿತು.
ಎಸ್ ಸಿ ಮೀಸಲಾತಿಯ ಅಧ್ಯಕ್ಷ ಆಂಜಿನೇಯ ಭೋವಿ ಹಾಗೂ ಯಲ್ಲಮ್ಮ ನಾಮಪತ್ರ ಸಲ್ಲಿಸಿದ್ದರು. 18 ಮತಗಳ ಪೈಕಿ ಆಂಜನೇಯ 11 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಮಹಿಳಾ ಮೀಸಲು ಸ್ಥಾನದ ಉಪಾಧ್ಯಕ್ಷೆ ಸ್ಥಾನಕ್ಕೆ ರೇಣುಕಾ ಗಂಡ ನಾಗಯ್ಯ ಹಾಗೂ ಜಯಮ್ಮ ಗಂಡ ಅಮರೇಗೌಡ ನಾಮಪತ್ರ ಸಲ್ಲಿಸಿದರು ಜಯಮ್ಮ 11 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಪಿ ಪರಶುರಾಮ್ ಮತ್ತು ಪಿಡಿಓ ಪ್ರಸಾದ್ ಮಾಹಿತಿ ನೀಡಿದರು.
*ಚುನಾವಣೆಗೆ* ಸಿಪಿಐ ದತ್ತಾತ್ರೇಯ ಕಾರ್ನಾಡ್ ಪಿಎಸ್ಐ ವೆಂಕಟೇಶ. ಎಂ ಬಿಗಿ ಬಂದೋಬಸ್ತು ವ್ಯವಸ್ಥೆ ಕಲ್ಪಿಸಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ್. ಗಂಗಾಧರ ನಾಯಕ್. ಮುಖಂಡರಾದ ಶರಣಪ್ಪಗೌಡ ನಕ್ಕುಂದಿ. ತಿಮ್ಮಾರೆಡ್ಡಿ ಭೋಗವತಿ. ಶಿವಶರಣಗೌಡ ಲಕ್ಕಮ್ ದಿನ್ನಿ. ದೇವರಾಜ್ ಗೌಡ ಜಾಡಲದಿನ್ನಿ. ಮಲ್ಲಿಕಾರ್ಜುನ ಜಕ್ಕಲದಿನ್ನಿ. ಜಯರಾಜ್ ಚಿಕ್ಕ ಬಾದರದಿನ್ನಿ. ರವಿ ತಾತ. ಯಮನಪ್ಪ ದಿನ್ನಿ. ಗಫೂರ್ ಸಾಬ್. ನೀಲಕಂಠೇಶ್ವರ. ಲಿಂಗಣ್ಣ ನಾಸಲ್. ವೀರೇಶ್ ಪೊತಾಪೂರು. ಅಮರೇಶ ಈಶ್ವರ್ ಸಿಂಗ್ ಶಿವಕುಮಾರ್. ಕವಿತಾಳ ಪಟ್ಟಣ ಪಂಚಾಯತಿ ಸದಸ್ಯರಾದ ಬಸವರಾಜ್ ಹೆಚ್ ಮೌನೇಶ್ ನಾಯಕ್ ಸೇರಿದಂತೆ ಇತರರು ಇದ್ದರ