ವರದಿ: ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಉತ್ತಮ ಜೀವನ ರೂಪಿಸಿಕೊಳ್ಳಲು ಕಾಲೇಜು ಹಂತದಲ್ಲಿ ಒಳ್ಳೆಯ ಸಾಧನೆ ಮಾಡಬೇಕು ಅಂದಾಗ ಮಾತ್ರ ನಾವೂ ಅಂದುಕೊಂಡ ಗುರಿಯನ್ನು ತಲುಪಲು ಸಾಧ್ಯ ಮತ್ತು ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ಇದೆ ಎಂದು ಗಂಗಾವತಿ ಡಿವಾಯ್ ಎಸ್ ಪಿ ರುದ್ರಪ್ಪ ಉಜ್ಜನಕೊಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ರಸ್ತೆ ಸುರಕ್ಷಾ ಸಪ್ತಾಹ ಮತ್ತು ನಿಮ್ಮ ಸುರಕ್ಷೆ ಕಾಪಾಡುವ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಲೇಜಿನಲ್ಲಿರುವ ವಿದ್ಯಾರ್ಥಿಗಳು ಪ್ರೌಢಾವಸ್ಥೆಗೆ ಬಂದಿದ್ದು, ನೂರಕ್ಕೆ ತೊಂಬತೈದರಷ್ಟು ವಿದ್ಯಾರ್ಥಿಗಳು ಬೈಕ್ ಸವಾರಿ ಮಾಡುತ್ತಿರ ಬಹುದು ಆದರೆ ಚಾಲನೆ ಪರವಾನಿಗೆಯ ಗುರುತಿನ ಚೀಟಿ ಭವಿಷ್ಯ ಇರುವದಿಲ್ಲಾ ಅಂತ ವಿದ್ಯಾರ್ಥಿಗಳು ಮೊದಲು ಚಾಲನಾ ಪರವಾನಿಗೆಯನ್ನು ಪಡೆಯಬೇಕು ಮತ್ತು ರಸ್ತೆಯ ಸಂಚಾರ ನಿಯಮಗಳನ್ನು ತಿಳಿದುಕೊಳ್ಳಬೇಕು.
ರಾತ್ರಿ ರಸ್ತೆ ಪಕ್ಕದಲ್ಲಿ ತಿರುಗಾಡುವವರು ಬಿಳಿ ಅಥವಾ ಹಳದಿ ಬಣ್ಣದ ಡ್ರೇಸ್ ಗಳನ್ನು ಧರಿಸಬೇಕು. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಬಿಸಿಲು ಹೆಚ್ಚಿರುತ್ತದೆ ಎಂಬ ಕಾರಣಕ್ಕೆ ಈ ಭಾಗದ ಬೈಕ್ ಸವಾರರು ಹೆಲ್ಮೇಟ್ ಧರಿಸದೆ ಓಡಾಡುತ್ತಾರೆ ಅದು ತಪ್ಪು. ವಿದ್ಯಾರ್ಥಿಗಳು ಆದವರು ಕಾಲೇಜು ಜೀವನದಲ್ಲಿ ಪ್ರೇಮ, ಪ್ರೀತಿ ಬಲಿಗೆ ಬೀಳಬಾರದು. ಹುಡುಗಿಯರನ್ನು ಚುಡಾಯಿಸುವದನ್ನು ಬೀಡಿ. ಓದಿನ ಕಡೆ ಹೆಚ್ಚು ಗಮನ ಕೊಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಿಸಿ ಎಂದರು.
ಕುಷ್ಟಗಿ ಸಿಪಿಐ ನಿಂಗಪ್ಪ ಆರ್ ಎಸ್, ರಸ್ತೆ ಸುರಕ್ಷತೆಯ ಬಗ್ಗೆ ಮಾತನಾಡಿ, ಸಂಚಾರ ನಿಯಮಗಳ ಬಗ್ಗೆ ವಿಸ್ತಾರವಾಗಿ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಯಲ್ಲಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪನ್ಯಾಸಕ ಲೋಹಿತ ಸ್ವಾಗತಿಸಿದರು, ಉಪನ್ಯಾಸಕಿ ಅರುಣಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು, ಲವ ಕುಮಾರ ವಂದಿಸಿದರು.