ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಅಧಿಕಾರಿಗಳ ಎಡವಟ್ಟಿನಿಂದಾಗಿ ಸಂದ್ಯಾ ಸುರಕ್ಷ ವೃದ್ಧಾಪ್ಯ ವೇತನ ಫಲಾನುಭವಿಯೊಬ್ಬರು ಬದುಕ್ಕಿದ್ದರು ಸಹ ಮರಣ ಹೊಂದಿದ್ದಾರೆಂದು ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಬೇಜಾವಬ್ದಾರಿತನ ತೋರಿರುವುದು ಕುಟುಂಬ ವರ್ಗದರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪಟ್ಟಣದ ನಿವಾಸಿ ಹುಲಿಗೆಮ್ಮ ಹುಸೇನಪ್ಪ ಕಲಾಲ ಇವರು ಕಳೆದ ಹಲವು ವರ್ಷಗಳಿಂದ ಸಂದ್ಯಾ ಸುರಕ್ಷಾ ಯೋಜನೆಯಡಿ ಪ್ರತಿ ತಿಂಗಳು 1 ಸಾವಿರ ರೂಗಳನ್ನು ಪಡೆಯುತ್ತಿದ್ದರು ಆದರೆ ಕಳೆದ 3 ತಿಂಗಳಿನಿಂದ ಹಣ ಜಮೆಯಾಗದಿರುವದರಿಂದ ಕುಷ್ಟಗಿಯ ಖಜಾನೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಾಗ ಫಲಾನುಭವಿ ಮರಣ ಹೊಂದಿದ್ದಾರೆಂಬ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವೇತನ ತಡೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ ವೃದ್ದಾಪ್ಯ ವೇತನದಿಂದ ವಂಚಿತರಾಗಿದ್ದು ಅಧಿಕಾರಿಗಳ ಎಡವಟ್ಟಿನಿಂದ ಬದುಕಿರುವ ಫಲಾನುಭವಿಯು ಮರಣ ಹೊಂದಿದ್ದಾರೆಂಬ ಮಾಹಿತಿ ತಿಳಿಯುತ್ತಿದ್ದಂತೆ ಫಲಾನುಭವಿ ಹುಲಿಗೆಮ್ಮ ಕಲಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.