Thursday , September 19 2024
Breaking News
Home / Breaking News / ತಾವರಗೇರಾ: ಶ್ರೀ ತ್ರೀ ವೀರಭದ್ರೇಶ್ವರ ಜಾತ್ರೆ ಸರಳ ಆಚರಣೆಗೆ ನಿರ್ಧಾರ

ತಾವರಗೇರಾ: ಶ್ರೀ ತ್ರೀ ವೀರಭದ್ರೇಶ್ವರ ಜಾತ್ರೆ ಸರಳ ಆಚರಣೆಗೆ ನಿರ್ಧಾರ

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:  ಪಟ್ಟಣದ ಶ್ರೀ ತ್ರೀ ವೀರಭದ್ರೇಶ್ವರ ಜಾತ್ರೆಯು ಇದೇ ಫೇ ೧೯ ರಂದು ನಡೆಯಲಿದ್ದು, ಕರೊನಾ ಹಿನ್ನಲೆಯಲ್ಲಿ ಅತ್ಯಂತ ಸರಳವಾಗಿ ಆಚರಣೆ ಮಾಡಲಾಗುವುದು ಎಂದು ದೇವಸ್ಥಾನ ಕಮೀಟಿಯವರು ತಿಳಿಸಿದ್ದಾರೆ.
ಪಟ್ಟಣದ ತ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಸಂಪ್ರದಾಯದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಧಿ ವಿಧಾನಗಳು ನಡೆಯಲಿವೆ. ಆದರೆ ಪ್ರತಿ ವರ್ಷದಂತೆ ಅಯ್ಯಾಚಾರ, ಸಾಮೂಹಿಕ ಮದುವೆಗಳು ನಡೆಯುವುದಿಲ್ಲ. ಕರೊನಾ ವೈರಸ್ ಹರಡುವ ಸಾಧ್ಯತೆಯಿಂದ ಮತ್ತು ಕೊರೊನಾ ಮುಂಜಾಗೃತಾ ಕ್ರಮವಾಗಿ ಎಲ್ಲರೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಸಿಬೇಕು. ಸಾನಿಟೈಜರ್ ಉಪಯೋಗಿಸಬೇಕು. ಜಾತ್ರೆಯಲ್ಲಿ ಯಾವುದೇ ತರಹದ ಅಂಗಡಿ, ಮುಗ್ಗಟ್ಟುಗಳು ಇರುವದಿಲ್ಲ. ಜಾತ್ರೆಯ ಅಂಗವಾಗಿ ಫೇ ೧೯ ಶುಕ್ರವಾರ ಬೆಳಿಗ್ಗೆ ತ್ರೀ ವೀರಭದ್ರೇಶ್ವರ ಮಹಾರಥೋತ್ಸವವು ಸಂಪ್ರದಾಯದಂತೆ ಸರಳವಾಗಿ ನಡೆಯಲಿದೆ ಎಂದು ದೇವಸ್ಥಾನ ಕಮೀಟಿಯವರು ಮಂಗಳವಾರ ನಡೆದ ಜಾತ್ರಾ ಪೂರ್ವ ಭಾವಿ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ತ್ರೀ ವೀರಭದ್ರೇಶ್ವರ ದೇವಸ್ಥಾನ ಕಮೀಟಿಯ ಶೇಖರಗೌಡ ಪೊಲೀಸ್ ಪಾಟೀಲ್, ಮಲ್ಲಪ್ಪ ಜುಮಲಾಪೂರ, ಗುರುಮೂರ್ತಿಸ್ವಾಮಿ ಹಿರೇಮಠ, ಪರಪ್ಪ ಅಕ್ಕಿ, ಕರೆಡಪ್ಪ ನಾಲತವಾಡ, ಅಮರೇಶ ಗಲಗಲಿ, ಕಳಕಪ್ಪ ಕುಂಬಾರ, ಹೊನ್ನಪ್ಪ ಲಾಳಿ, ನಿಂಗಪ್ಪ ಬಸರಿಗಿಡದ ಇನ್ನಿತರರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!