Thursday , September 19 2024
Breaking News
Home / Breaking News / ಕವಿತಾಳ: ಶ್ರೀ ಮಡಿವಾಳ ಮಾಚಿ ದೇವರು ಜಯಂತಿ

ಕವಿತಾಳ: ಶ್ರೀ ಮಡಿವಾಳ ಮಾಚಿ ದೇವರು ಜಯಂತಿ

 

ವರದಿ:  ಆನಂದಸಿಂಗ್.ರಜಪೂತ್

ಕವಿತಾಳ :- “ಅರಸುತನ ಮೇಲಲ್ಲ ಅಗಸುತನ ಕೀಳಲ್ಲ” ಎಂದು 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಲ್ಲಿ ಶಿವ ಶರಣರ ಸೇನಾ ದಂಡ ನಾಯಕನಾಗಿ ಬಿಜ್ಜಳನ ಸೈನ್ಯವನ್ನು ಎದುರಿಸಿದಲ್ಲದೇ. ಅಷ್ಟು ವಚನ ಸಾಹಿತ್ಯವನ್ನು ರಚಿಸಿದ ಮಹಾ ಶರಣ ವಚನ ಸಂರಕ್ಷಕ ವೀರ ಗಣಾಚಾರಿ ಶರಣ ಮಡಿವಾಳ ಮಾಚಿ ದೇವರು ಎಂದು ರಮೇಶ ಮಡಿವಾಳ ಹೇಳಿದರು.

ಪಟ್ಟಣ ಪಂಚಾಯಿತಿಯಲ್ಲಿ ಇಂದು ಶರಣ ಮಡಿವಾಳ ಮಾಚಿ ದೇವರ ಭಾವಚಿತ್ರ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು 12 ಶತಮಾನದಲ್ಲಿ ಬಸವಣ್ಣರ ಅನುಭವ ಮಂಟಪದಲ್ಲಿ ಶರಣರ ಕಾಲದಲ್ಲಿ ಮಡಿವಾಳ ಮಾಚಿದೇವ ಕೂಡ ಶರಣರಿದ್ದರು, ಮಾಚಿದೇವ ಇವರನ್ನು ವಚನ ಸಾಹಿತ್ಯ ರಕ್ಷಕ ಎಂದು ಕರೆಯಲಾಗುತ್ತಿತ್ತು. ಅಂತಹ ಸಾವಿರಾರು ವಚನಗಳನ್ನು ರಕ್ಷಿಸಿದ ಮಡಿವಾಳ ಸಮಾಜದ ಜನರ ರಕ್ಷಣೆ ಇಲ್ಲದಾಗಿದೆ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಲಾಗಿದೆ. ಹಲವಾರು ವರ್ಷಗಳಿಂದ ಪರಿಶಿಷ್ಟ ಜಾತಿಗೆ ಸೇರಿಸಲು ಹೋರಾಟ ನಡೆಸಲಾಗುತ್ತಿದ್ದು ಇಲ್ಲಿಯವರೆಗೂ ಯಾವುದೇ ಪ್ರಯೋಜನ ಆಗಿರುವುದಿಲ್ಲ, ರಾಜ್ಯದಲ್ಲಿ ಮಲ ಹೊರುವ ಪದ್ಧತಿ ವಿರೋಧಿಸಲಾಗುತ್ತಿದೆ, ಆದರೆ ಮಡಿವಾಳ ಸಮಾಜದ ಜನರ ಮಲ, ಮೂತ್ರ, ಮುಟ್ಟು, ಮೈಲುಗೆ ಯನ್ನು ತಮ್ಮ ಕೈ ಯಿಂದ ಸ್ವಚ್ಚ ಮಾಡಲಾಗುತ್ತಿದೆ.

ದೇಶದಲ್ಲಿ ಮಡಿವಾಳ ಸಮಾಜವನ್ನು 18 ರಾಜ್ಯಗಳಲ್ಲಿ 5 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ ನಮ್ಮ ರಾಜ್ಯದಲ್ಲೂ ಕೂಡ ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಮಡಿವಾಳ ಸಮಾಜದ ಯುವ ಘಟಕದ ಅಧ್ಯಕ್ಷ ರಮೇಶ ಮಡಿವಾಳರ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ದೊಡ್ಡ ಕರಿಯಪ್ಪ, ಈರಣ್ಣ ಬಸಾಪುರ, ಮಲ್ಲಯ್ಯ, ವೀರೇಶ ಮಡಿವಾಳ, ಅಂಬರೇಶ, ರಮೇಶ, ವೆಂಕಟೇಶ್.ಯಮನೂರು. ದೇವರಾಜ. ಉಮೇಶ್. ಯಮನಪ್ಪ ಹನುಮೇಶ ಪಟ್ಟಣ ಪಂಚಾಯತ ಸದಸ್ಯರಾದ ಗಂಗಪ್ಪ ದಿನ್ನಿ,ಮೌನೇಶ್ ಹಿರೇಕುರುಬರ್. ಕರಿಯಪ್ಪ ಅಡ್ಡೆ, ಕಿಶನ್ ಸಿಂಗ್ ರಜಪೂತ ನಿಂಗಪ್ಪ ದಿನ್ನಿ ಹಾಗೂ ಪಟ್ಟಣ ಪಂಚಾಯತ ಸಿಬ್ಬಂದಿಗಳು ಮುಂತಾದವರು ಭಾಗವಹಿಸಿದ್ದರು

*ವಿವಿಧೆಡೆಆಚರಣೆ* :- ಪೋಲಿಸ್ ಠಾಣೆಯಲ್ಲಿ ಪಿಎಸ್ಐ ವೆಂಕಟೇಶ್ ಎಂ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಅಮೃತ ರಾಥೋಡ್. ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಶಿವನಗೌಡ ಬಿರಾದಾರ. ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಜುಳಾ ಅಂಗಡಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮಶೇಖರ್ . ಸರಕಾರಿ ಹಿರಿಯ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ರುದ್ರಪ್ಪ ಲೋಕಪೂರ ಇವರು ಮಡಿವಾಳ ಮಾಚಿ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!