ಉದಯ ವಾಹಿನಿ
ಕವಿತಾಳ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೊಲೀಯೊ ಲಸಿಕೆ ಕಾರ್ಯಕ್ರಮಕ್ಕೆ ಮಲ್ಲಟ್ಟ ಜಿಲ್ಲಾ ಪಂಚಾಯತ ಸದಸ್ಯ ಕಿರಿಲಿಂಗಪ್ಪ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ. ಅಮೃತ್ ರಾಥೊಡ್ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಕಿರಿಲಿಂಗಪ್ಪ ಸರ್ಕಾರ ಹಮ್ಮಿಕೊಂಡಿರುವ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಐದು ವರ್ಷದ ಒಳಗಿನ ಪ್ರತಿಯೊಂದು ಮಗುವಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಪಾಲಕರು ತಮ್ಮ ತಮ್ಮ ಮಕ್ಕಳಿಗೆ ಪೋಲಿಯೋ ಬೂತ್ ಗೆ ಕರೆದುಕೊಂಡು ಬಂದು ತಪ್ಪದೆ ಲಸಿಕೆ ಹಾಕಿಸಬೇಕು ಎಂದರು.
ನಂತರ ಮಾತನಾಡಿದ ಡಾ. ಅಮೃತ್ ರಾಥೋಡ್ ದೇಶವು ಈಗಾಗಲೆ ಪೋಲಿಯೋ ಮುಕ್ತ ರಾಷ್ಟ್ರ ವಾಗಿದೆ ಆದರೆ ಅದು ಮರುಕಳಿಸದಂತೆ ಎಚ್ಚರ ವಹಿಸುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ, ನಮ್ಮ ಇಲಾಖೆಯಿಂದ ಅಲ್ಲಲ್ಲಿ ಪೋಲಿಯೋ ಬೂತ್ ಗಳನ್ನು ಮಾಡಲಾಗಿದೆ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ಬಂದು ಲಸಿಕೆ ನಿಡುವ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ನಾಗರಿಕರು ಸಹಕರಿಸಿ ಐದು ವರ್ಷದ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ಪಟ್ಟಣದ ೧೧ ನೇ ವಾರ್ಡಿನಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಮೌನೇಶ ಹೀರೆಕುರುಬರ್ ಮತ್ತು ಬೀರಪ್ಪ ಹೀರಾ ಮಕ್ಕಳಿಗೆ ಪೋಲಿಯೋ ಹಾಕುವ ಮೂಲಕ ಕಾರ್ಯಕ್ರಮ ಆರಂಬಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಯಲ್ಲಮ್ಮ ಮ್ಯಾಗಳಮನಿ, ಖಾಜಾಪಾಷ ಬ್ಯಾಗವಾಟ್, ಎಡಿ ಎಮ್ ಅಕ್ಬರ್, ಹೆಚ್ ಬಸವರಾಜ, ಮೌನೇಶ ನಾಯಕ, ಮುಖಂಡ ವೆಂಕಟೇಶ ಅರಕೇರಿ, ಸಿಬ್ಬಂದಿಗಳಾದ ಪ್ರದೀಪ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಇತರರಿದ್ದರು.