ವರದಿ : ಎನ್ ಶಾಮೀದ್ ತಾವರಗೇರಾ
ತಾವರಗೇರಾ : ಪಟ್ಟಣದ ಸಮುದಾಯ
ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಪಲ್ಸ್
ಪೋಲಿಯೋ ಕಾರ್ಯಕ್ರಮಕ್ಕೆ ಪಟ್ಟಣ
ಪಂಚಾಯಿತಿ ಅಧ್ಯಕ್ಷ ವಿಕ್ರಮ್ ರಾಯ್ಕರ್
ಭಾನುವಾರ ಚಾಲನೆ ನೀಡಿದರು
ನಂತರ ಮಾತನಾಡಿದ ಅವರು ದೇಶದಲ್ಲಿ
ಇಂದಿನಿಂದ ಜ.೩೧ ರಿಂದ ಫೆ.೩ ರವರೆಗೆ
ಹಮ್ಮಿಕೊಂಡಿರುವ ಪಲ್ಸ್ ಪೋಲಿಯೋ
ಕಾರ್ಯಕ್ರಮದಲ್ಲಿ ೫ ವರ್ಷದೊಳಗಿನ
ಪ್ರತಿ ಮಗುವಿಗೆ ಪೋಲಿಯೋ ಹನಿ
ಹಾಕಿಸಬೇಕು. ಇದರಿಂದ ಮಕ್ಕಳ ಆರೋಗ್ಯ
ರಕ್ಷಣೆ ಆಗಲಿದೆ ಮತ್ತು ಆರೋಗ್ಯ
ಇಲಾಖೆಗೆ ಸಹಕಾರ ನೀಡಿದಂತಾಗುವದು ಎಂದು ಹೇಳಿದರು
ಸ್ಥಳಿಯ ಸಮುದಾಯ ಆರೋಗ್ಯ
ಕೇಂದ್ರದ ವ್ಯಾಪ್ತಿಯ ಒಟ್ಟು ೫ ಪ್ರಾಥಮಿಕ
ಆರೋಗ್ಯ ಉಪ ಕೇಂದ್ರಗಳಲ್ಲಿ ಮತ್ತು
ಒಂದು ಸಂಚಾರಿ ತಂಡ, ಒಂದು ಮೋಬೈಲ್
ತಂಡಗಳನ್ನು ವ್ಯವಸ್ಥೆ ಮಾಡಲಾಗಿದೆ.
ಒಟ್ಟು ೪೧೮೯ ಮಕ್ಕಳಿಗೆ ೧೯ ಬೂತ್‌ಗಳಲ್ಲಿ
ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ
ಈ ಕಾರ್ಯಕ್ರಮದಲ್ಲಿ ಸ್ಥಳಿಯ
ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ
ಮತ್ತು ಅಂಗನವಾಡಿ ಕಾರ್ಯಕರ್ತೆಯರು,
ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಾ
ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದಾರೆ
ಎಂದು ವೈದ್ಯಾಧಿಕಾರಿ ಡಾ.ಕಾವೇರಿ ಶ್ಯಾವಿ ತಿಳಿಸಿದರು ಡಾ.ಕೃತಿ, ಡಾ. ಶ್ರೀಧರ ಡಾ.ಪ್ರಶಾಂತ
ತಾಳಿಕೋಟಿ ಮತ್ತು ಪಪಂ ಸದಸ್ಯ
ಚಂದ್ರಶೇಖರ ನಾಲ್ತವಾಡ, ಹಿರಿಯ ಆರೋಗ್ಯ
ಸಹಾಯಕಿ ಶಂಕ್ರಮ್ಮ ಮತ್ತು ಸಿಬ್ಬಂದಿ
,ಮಕ್ಕಳು ತಾಯಂದಿರು ಇದ್ದರು.