ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಸಮೀಪದ ಸಂಗನಾಳ ಗ್ರಾಪಂ ಗೆ ನೂತನ ಅಧ್ಯಕ್ಷರಾಗಿ ಯಮನಮ್ಮ ಹೊಗರನಾಳ, ಉಪಾಧ್ಯಕ್ಷರಾಗಿ ಶರಣಪ್ಪ ಹಂಚಿನಾಳ ಅವಿರೋಧವಾಗಿ ಆಯ್ಕೆಯಾದರು.
ಸಂಗನಾಳ ಗ್ರಾಪಂ ನಲ್ಲಿ ಒಟ್ಟು ೧೬ ಜನ ಸದಸ್ಯರಿದ್ದು, ಅಧ್ಯಕ್ಷ ಸಾಮಾನ್ಯ ಮಹಿಳೆ ಮಿಸಲಾತಿ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯಮನಮ್ಮ ಹೊಗರನಾಳ, ಉಪಾಧ್ಯಕ್ಷ ಸಾಮಾನ್ಯ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಶರಣಪ್ಪ ಹಂಚಿನಾಳ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಯಾರೂ ಸಹ ನಾಮಪತ್ರ ಸಲ್ಲಿಸದೆ ಇರುವದರಿಂದ ಅಧ್ಯಕ್ಷರಾಗಿ ಯಮನಮ್ಮ ಹೊಗರನಾಳ, ಉಪಾಧ್ಯಕ್ಷರಾಗಿ ಶರಣಪ್ಪ ಹಂಚಿನಾಳ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಮರೇಶ ಕಿಲ್ಲಾರಹಟ್ಟಿ ಘೋಷಿಸಿದರು.
ನಂತರ ಕಾಂಗ್ರೇಸ್ ಕಾರ್ಯಕರ್ತರು ಮತ್ತು ಮುಖಂಡರು ಪಟಾಕಿ ಸಿಡಿಸಿ, ಸಿಹಿ ಅಂಚಿ, ಬಣ್ಣ ಎರಚಿಕೊಂಡು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಪ್ರಭಾರಿ ಪಿಡಿಓ ಚಂದ್ರಶೇಖರ ಕಂದಕೂರ, ಕಾರ್ಯದರ್ಶಿ ಅಮರೇಶ, ಕರವಸೂಲಿಗಾರ ಮೌಲಾಸಾಬ, ಕಾಂಗ್ರೇಸ್
ಮುಖಂಡರಾದ ಬಸನಗೌಡ ಮಾಲಿಪಾಟೀಲ್, ವೀರಭದ್ರಪ್ಪ ನಾಲತವಾಡ, ಅಮರೇಶ ಕುಂಬಾರ, ತಿಪ್ಪಣ್ಣ ವಕೀಲರು, ಕುಂಟೆಪ್ಪ ತೆಮ್ಮಿನಾಳ, ಬಸಪ್ಪ ಸಂಗನಾಳ, ತಾಪಂ ಮಾಜಿ ಸದಸ್ಯ ವಿರೇಶ, ಗರುಡಪ್ಪ, ಬಸವರಾಜ ಕನ್ನಾಳ
ಇದ್ದರು.
————————————