Monday , November 25 2024
Breaking News
Home / Breaking News / ತೊಂಡಿಹಾಳ  ಹುಲಿಗೆಮ್ಮ ದೇವಿ ಜಾತ್ರೆ ರದ್ದು 

ತೊಂಡಿಹಾಳ  ಹುಲಿಗೆಮ್ಮ ದೇವಿ ಜಾತ್ರೆ ರದ್ದು 

ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ :  ಮಹಾಮಾರಿ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಸಮೀಪದ ತೊಂಡಿಹಾಳದ  ಪ್ರಸಿದ್ಧ ಹುಲಿಗೆಮ್ಮ ದೇವಿ  ಜಾತ್ರೆ ರದ್ದು ಪಡಿಸಲು ತಾಲೂಕಡಳಿತ  ನಿರ್ಧರಿಸಿದೆ.  ಪ್ರತಿವರ್ಷ ಫೆ.5,6,7 ರಂದು ಹಗಲು ರಾತ್ರಿಯಾಗಿ ತೊಂಡಿಹಾಳ  ಗ್ರಾಮದಲ್ಲಿ ಹುಲಿಗೆಮ್ಮ ದೇವಿ ಜಾತ್ರೆ ನಡೆಯುತ್ತಿತ್ತು. ಜಾತ್ರೆಯ ನಿಮಿತ್ತ ಲಿಂಗಸಗೂರು  ತಾಲೂಕಾಡಳಿತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯನ್ನ ರದ್ದು ಪಡಿಸಲು ತೀರ್ಮಾನ  ತೆಗೆದುಕೊಳ್ಳತಾಯಿತು.
ಈ ಸಂದರ್ಭ ಸಭೆಯಲ್ಲಿ ಗ್ರಾಮಸ್ಥರ ಹಾಗೂ ಅಧಿಕಾರಿಗಳ ಮದ್ಯ ಮಾತಿನ ಚಾಕಮಕಿ ನಡೆಯಿತು. ನಂತರ ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಅಧಿಕಾರಿಗಳು ಕೆಲ ನಿಬಂಧನೆಗಳನ್ನು ಸಡಿಲಿಕೆ ಗೊಳಿಸಿದರು
ದೇವಿಗೆ ಪೂಜೆ  ಸಲ್ಲಿಕೆಗೆ ಸಾಮಾಜಿಕ ಅಂತರ ಕಾಪಾಡಿಕೊಂಡು 10-15ಜನಕ್ಕೆ ಅವಕಾಶ ಕಲ್ಪಿಸಲಾಗಿದೆ, ಬೇರೆ ಸ್ಥಳದಿಂದ ಬರುವ ಅಂಗಡಿ ವ್ಯಾಪಾರಕ್ಕೆ ಅವಕಾಶ ಇಲ್ಲ ಕೇವಲ ಸ್ಥಳೀಯರಿಗೆ ಒಂದು ಅಥವಾ ಎರೆಡು ಅಂಗಡಿಗಳನ್ನು ತೆರೆಯಲು ಸ್ಥಳೀಯರಿಗೆ ಅಧಿಕಾರಿಗಳು ಸೂಚಿಸಿದರು
ಹಾಗೂ ದೇವಸ್ಥಾನದ  ಧಾರ್ಮಿಕ  ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.ಎಂದು ತಾಲೂಕಡಳಿತ ಸೂಚನೆ ನೀಡಿದೆ.ಜನಸಂದಣಿ ಸೇರದಂತೆ ಸೂಕ್ತ ಕ್ರಮದ ಎಚ್ಚರಿಕೆ ಕೂಡ ನೀಡಲಾಗಿದೆ.

About Nagaraj M

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!