ವರದಿ : ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಸಮೀಪದ ಮೆಣೇಧಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರದಂದು ನಡೆಯಿತು. ಗ್ರಾಪಂ ಅಧ್ಯಕ್ಷರಾಗಿ ದಾವಲಭಾಷಾ ಅಂಕುಶದೊಡ್ಡಿ ಹಾಗೂ ಉಪಾಧ್ಯಕ್ಷರಾಗಿ ಸೋಮಪ್ಪ ಬುಡಕುಂಟಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಅಮರೇಶ ಕಿಲಾರಹಟ್ಟಿ ಘೋಷಿಸಿದರು.
ಮೆಣೇಧಾಳ ಗ್ರಾಮ ಪಂಚಾಯತಿಯ ಒಟ್ಟು 19 ಜನ ಸದಸ್ಯರಿದ್ದರು ಅದರಲ್ಲಿ ಬಿಜೆಪಿ ಬೆಂಬಲಿತ ದಾವಲಭಾಷಾ ಅಂಕುಶದೊಡ್ಡಿ 11 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು, ಪ್ರತಿಸ್ಪರ್ಧಿ ಜಗದೀಶ್ ಚಿದಾನಂದಪ್ಪ ಅವರಿಗೆ 8 ಮತಗಳು ಪಡೆದಿದ್ದರಿಂದಾಗಿ ಪರಾಭಾವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 10 ಮತಗಳನ್ನು ಪಡೆದು ಸೋಮಪ್ಪ ಬುಡಕುಂಟಿ ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಂಕಪ್ಪ ಗೊರಲುಟಿ 9 ಮತಗಳನ್ನು ಪಡೆದು ಪರಾಭವಗೊಂಡರು.
ಈ ಸಂದರ್ಭದಲ್ಲಿ ಪಿಡಿಒ ಬಸವರಾಜ ರಾವಣಕಿ, ಕಾರ್ಯದರ್ಶಿ ಮಂಜುನಾಥ, ಉಪಸ್ಥಿತರಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪೂರ್ಣಗಳ್ಳುತ್ತಿದ್ದಂತೆಯೇ ಬಿಜೆಪಿ ಬೆಂಬಲಿತರು ಸಂಭ್ರಮಾಚರಣೆಯಲ್ಲಿ ತೊಡಗಿದರು.
ಈ ಸಂಧರ್ಬದಲ್ಲಿ ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.