ವರದಿ: ಎನ್.ಶಾಮೀದ್ ತಾವರಗೇರಾ
ತಾವರಗೇರಾ : ಪಟ್ಟಣದ ಜನರೊಂದಿಗೆ ಸಹಕಾರ ದಿಂದ, ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಉತ್ತಮ ಕರ್ತವ್ಯ ನಿರ್ವಹಣೆ ಪರಿಗಣಿಸಿ ತಾವರಗೇರಾ ಪೊಲೀಸ್ ಠಾಣೆಯ ಪಿಎಸ್‌ಐ ಗಿತಾಂಜಲಿ ಶಿಂಧೆ ರಿಗೆ
ಅತ್ಯಂತ ಕಡಿಮೆ ಶೇಕಡಾವಾರು ಪ್ರಕರಣಗಳ ತನಿಖೆಯಲ್ಲಿ ಬಾಕಿ ಇರಿಸಿಕೊಂಡು ಉತ್ತಮ ಕರ್ತವ್ಯ ನಿರ್ವಹಣೆ ಪರಿಗಣಿಸಿ ಪಿಎಸ್‌ಐ ಗಿತಾಂಜಲಿ ಶಿಂಧೆರಿಗೆ ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕರ ಕಾರ್ಯಾಲಯದಲ್ಲಿ ಬುಧವಾರ ಐಜಿಪಿ ಎಂ.ನಂಜುಂಡಸ್ವಾಮಿ ಅವರು ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.
ಇದೆ 27 ರಂದು ವಲಯ ಅಪರಾಧ ಸಭೆ ಕೈಗೊಂಡು ಪೊಲೀಸ್ ಠಾಣೆಗಳಲ್ಲಿ ಅತ್ಯಂತ ಕಡಿಮೆ ಶೇಕಡಾವಾರು ಪ್ರಕರಣಗಳನ್ನು ತನಿಖೆಯಲ್ಲಿ ಬಾಕಿ ಇರಿಸಿಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಿದಾಗ ತಾವರಗೇರಾ ಠಾಣೆಯಲ್ಲಿ 2020 ನೇ ಸಾಲಿನಲ್ಲಿ
ವರದಿಯಾದ 186 ಪ್ರಕರಣಗಳಲ್ಲಿ ಪ್ರಕರಣಗಳಲ್ಲಿ ತನಿಖೆ ಮಾಡಿ ನ್ಯಾಯಾಲಯಕ್ಕೆ 170 ಸಲ್ಲಿಸಲಾಗಿರುತ್ತದೆ. 2020 ಅಂತ್ಯಕ್ಕೆ ಕೇವಲ 16 ಪ್ರಕರಣಗಳನ್ನು ಮಾತ್ರ ತನಿಖೆಯಲ್ಲಿ ಬಾಕಿ ಉಳಿಸಿಕೊಂಡು ಅತ್ಯುತ್ತಮ ಕಾರ್ಯ ನಿರ್ವಹಿಸಿದ ಕಾರಣ ಪಿಎಸ್‌ಐ ಗಿತಾಂಜಲಿ ಶಿಂಧೆಗೆ ಪೊಲೀಸ್ ಇಲಾಖೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸರ್ಕಾರದ ಮತ್ತು ಪೊಲೀಸ್ ಮ್ಯಾನುಯಲ್-1 ರ ಆದೇಶದಂತೆ ಪಿಎಸ್‌ಐ ಗಿತಾಂಜಲಿ ಶಿಂಧೆರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಗಿದೆ ಹಾಗೂ ಠಾಣಾ ಸಿಬ್ಬಂದಿ ಯವರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನಲಾಗಿದೆ.