Friday , November 22 2024
Breaking News
Home / Breaking News / ತಾವರಗೇರಾ: ಸಿಲಿಂಡರ್ ಹಾಗೂ ತ್ರಿ ಚಕ್ರ ವಾಹನ ವಿತರಣೆ “ಕಾರ್ಯಕ್ರಮಕ್ಕಷ್ಟೇ” ಸೀಮಿತ

ತಾವರಗೇರಾ: ಸಿಲಿಂಡರ್ ಹಾಗೂ ತ್ರಿ ಚಕ್ರ ವಾಹನ ವಿತರಣೆ “ಕಾರ್ಯಕ್ರಮಕ್ಕಷ್ಟೇ” ಸೀಮಿತ

 

ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಕಡು ಬಡವರಿಗೆ ದೊರೆಯಬೇಕಾದ ಸಿಲಿಂಡರ್ ಹಾಗೂ ವಿಕಲ ಚೇತನರಿಗೆ  ದೊರೆಯ ಬೇಕಿದ್ದ ತ್ರಿ ಚಕ್ರ ವಾಹನ ಕಾರ್ಯಕ್ರಮಕ್ಕೆ ಅಷ್ಟೇ ಸೀಮಿತವಾಗಿದ್ದು, ತಿಂಗಳು ಕಳೆದರು ಫಲಾನುಭವಿಗಳಿಗೆ ನೀಡದಿರುವುದು ಪಟ್ಟಣ ಪಂಚಾಯತಿ ನಿರ್ಲಕ್ಷ್ಯ ತೋರಿರುವುದು     ಪಟ್ಟಣದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಡಿಸೆಂಬರ್ 5 ರಂದು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 2019-20ನೇ ಸಾಲೀನ ಎಸ್.ಎಫ್.ಸಿ ಮುಕ್ತನಿಧಿ ಯೋಜನೆಯ ಶೇ7.25% ಮತ್ತು ಶೇ5% ಯೋಜನೆಯಲ್ಲಿ ಕಡುಬಡವರಿಗೆ ಅನೀಲ ಸಂಪರ್ಕ ಕಲ್ಪಿಸುವ ಯೋಜನೆ ಹಾಗೂ 2017-18 ಹಾಗೂ 2018-19ನೇ ಸಾಲಿನ ಎಸ್.ಎಪ್.ಸಿ ಮುಕ್ತನಿಧಿ ಯೋಜನೆಯ ಶೇ 5%ಯಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆಯ ಕಾರ್ಯಕ್ರಮಕ್ಕೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಚಾಲನೆ ನೀಡಿದ್ದರು,

ಈ ಸಂಧರ್ಬದಲ್ಲಿ ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕರ್, ಉಪಾಧ್ಯಕ್ಷೆ ಹಂಪಮ್ಮ ಕೈಲವಾಡಗಿ ಹಾಗೂ ಪಪಂ ಮುಖ್ಯಾಧಿಕಾರಿ ಶಂಕರ್ ಡಿ ಕಾಳೆ, ಪಪಂ ಸದಸ್ಯರು ಉಪಸ್ಥಿತರಿದ್ದರು. ಆದರೆ ತಿಂಗಳಾದರೂ ಕೂಡ ಒಟ್ಟು 21 ಸಿಲಿಂಡರ್ ಫಲಾನುಭವಿಗಳಲ್ಲಿ ಇಬ್ಬರಿಗೆ ಮಾತ್ರ ಸಿಲಿಂಡರ್ ನೀಡಲಾಗಿದ್ದು ಹಾಗೂ 7 ಜನ ವಿಕಲ ಚೇತನ ಫಲಾನುಭವಿಗಳಲ್ಲಿ 4 ಜನರು ಮಾತ್ರ ಸೌಲಭ್ಯ ಪಡೆದಿದ್ದು ಇನ್ನುಳಿದ ಫಲಾನುಭವಿಗಳಿಗೆ ಆದಷ್ಟು ಬೇಗನೆ ವಿತರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

About N Shameed

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!