Thursday , September 19 2024
Breaking News
Home / Breaking News / ರಾಮ ಬೇಕಾ..? ಎಂ ಎಸ್ ಪಿ ಕಾನೂನು ಬೇಕಾ..?

ರಾಮ ಬೇಕಾ..? ಎಂ ಎಸ್ ಪಿ ಕಾನೂನು ಬೇಕಾ..?

ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಸಮೀಪದ ನಾಗರಹಾಳ ಗ್ರಾಮದಲ್ಲಿ ರೈತ ಜಾಗೃತಿ ಸಮಾವೇಶ ಹಾಗೂ ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಹಸಿರು ಸೇನೆ ರಾಜ್ಯಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಚಾಲನೆ ನೀಡಿದರು.ಈ ಕಾರ್ಯಕ್ರಮಕ್ಕೆ ಹುನಗುಂದ,ಇಲಕಲ್,ಮಸ್ಕಿ,ಸಿಂಧನೂರು,ಮಾನ್ವಿ,ಲಿಂಗಸೂಗೂರು ತಾಲೂಕುಗಳ 500 ಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದರು.ಈ ವೇಳೆ ಮಾತನಾಡಿದ ಕೋಡಿಹಳ್ಳಿ ಮೋದಿ ರಾಮ ರಾಮ ಅಂತ ಹೇಳುತ್ತಾ ದೇಶ ಜನರ ಗಮನ ಬೇರೆಡೆ ಸೆಳೆದು ದೇಶದ ಜನರ ಮತ ಪಡೆದು ದೇಶದ ಪ್ರಧಾನಿ ಯಾಗಿದ್ದಾರೆ. ದೇಶದ ರೈತರೇ ನಿಮಗೆ ರಾಮ ಬೇಕಾ..? ಎಂ ಎಸ್ ಪಿ (ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ )ಕಾನೂನು ಬೇಕಾ.ಎಂದು ಜನರನ್ನು ಪ್ರಶ್ನೆ ಮಾಡುತ್ತಾ.ದೇಶದ ರೈತರು ಮೋದಿ ಅಧಿಕಾರದ ದುರಹಂಕಾರ ಬಂಗ ಮಾಡಬೇಕಿದೆ, ಸುಳ್ಳಿನ ಸರದಾರ ಮೋದಿ ಇಂತಹ ಮನುಷ್ಯ ನನ್ನ ನಾನು ಕಂಡಿಲ್ಲ  ದೇಶದೆಲ್ಲೆಡೆ  300 ಸಭೆಯಲ್ಲಿ ಭಾಷಣ ದಲ್ಲಿ  ರೈತರ ಆದಾಯವನ್ನ ಎರೆಡು ಪಟ್ಟು ಮಾಡುತ್ತೇನೆ ಎಂದು ಮೋದಿ ಮಾತನಾಡಿದ್ದರು ಆದರೆ ಈಗ ಅದನ್ನು  ಮಾತನಾಡುತ್ತಿಲ್ಲ ಬರಿ ಸುಳ್ಳು ಭಾಷಣ ಮಾಡುತ್ತಾರೆ ಅಂಬಾನಿಯ  1ಲಕ್ಷ 72ಸಾವಿರ  ಕೋಟಿ ಮನ್ನಾ ಪತಂಜಲಿ ರಾಮದೇವ್ ರವರ   46ಸಾವಿರ ಕೋಟಿ ಮನ್ನಾ ಮಾಡ್ತಾರೆ  6 ಲಕ್ಷ ಕೋಟಿ ರೈತರ ಸಾಲ ಮನ್ನಾ ಮಾಡಲ್ಲ ಎನ್ನುತ್ತಾರೆ.ಎಪಿಎಂಸಿ ಬೈ ಪಾಸ್ ಬಿಲ್ ಕಾಯ್ದೆ ಜಾರಿಗೆ ತಂದು ಅಂತಾರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿ ಕೊಟ್ರು  ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಜನವರಿ 26 ರಂದು ನವದೆಹಲಿಯಲ್ಲಿ ನಡೆಯುವ ಗಣ ರಾಜ್ಯೋತ್ಸವದಲ್ಲಿ ಪ್ರಧಾನಿಗಳ ಭಾಷಣದ ನಂತರ ರೈತರ ಪರೇಡ್ ನಡೆಯುತ್ತದೆ.ರಾಜ್ಯದಲ್ಲೂ ಮುಖ್ಯಮಂತ್ರಿಗಳ ಭಾಷಣದ ನಂತರ ರೈತರ ಪರೇಡ್ ನಡೆಯುತ್ತೆ.ದೆಹಲಿಯಲ್ಲಿ ರೈತರ ಸತ್ಯಾಗ್ರಹ ಮುಂದುವರದಿದೆ.ಭಾರತ ಸರ್ಕಾರ ರೈತರ  ವಿರುದ್ಧದ ಕಾನೂನುಗಳನ್ನು ಜಾರಿಗೆ ತರುತ್ತಿದೆ.ಈಗಾಗಲೇ ಸುಪ್ರೀಂಕೊರ್ಟ್ ಮಧ್ಯಂತರ ಆದೇಶವನ್ನು ಮಾಡಿದೆ.ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯದೇ ಹೋದರೆ ಹೋರಾಟ ಮುಂದುವರೆಸುತ್ತೇವೆ ಎಂದರು.ಈ ಸಂದರ್ಭ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಜೀರಾ, ಹನುಮಂತಪ್ಪ ಹೋಳಿಯಾಚಿ, ಬಸವರಾಜ್ ಗೋಡಿಹಾಳ,   ತಾಲೂಕ ಅಧ್ಯಕ್ಷ ಶಿಪುತ್ರಪ್ಪ,
ರೈತ ಮುಖಂಡರಾದ  ಮಹಾದೇವಮ್ಮ ಬೇವಿನಾಳ , ಸದಾನಂದ ಮಡಿವಾಳ,ಹಾಗೂ ರೈತ ಮುಖಂಡರು ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!