ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಸಮೀಪದ ಕಲ್ಯಾಣಾಶ್ರಮದ ಮುದಗಲ್ ಮಹಾಂತಸ್ವಾಮೀಜಿ ಪತ್ರಿಕೆಯೊಂದಿಗೆ ಮಾತನಾಡಿ ಮುದಗಲ್ ಪಟ್ಟಣ ಭವ್ಯ ಪರಂಪರೆ ಉಳ್ಳದ್ದು
ಭಾವೈಕ್ಯ, ಧಾರ್ಮಿಕತೆ, ಸಾಂಸ್ಕೃತಿಕ, ಸಾಹಿತ್ಯ ಪರಂಪರೆ ಕನ್ನಡ ನಾಡಿನಲ್ಲೆ ಒಂದು ಐತಿಹಾಸಿಕವಾದ ಸಂಚಲನ ಮೂಡಿಸಿದ ಮುದಗಲ್ ಪಟ್ಟಣ.
ಐತಿಹಾಸಿಕ ನಗರಿಯ ಅಳಿವು ಉಳಿವಿಗಾಗಿ ಬದುಕನ್ನು ಮಿಸಲಿಟ್ಟು ಹೋರಾಟ ಮಾಡಿದ ಮಹಾನುಭಾವ ವಿಜಯ ನಗರ ಸಾಮ್ರಾಜ್ಯದ ಅರಸರು ಶ್ರೀ ಕೃಷ್ಣ ದೇವರಾಯರಂತಹ ವೀರರ ಹೆಸರಿನಲ್ಲಿ ಪಟ್ಟಣದ ದ್ವಾರಬಾಗಿಲಾದ ಮೇಗಳಪೇಟೆಗೆ ಹೊಂದಿರುವ ಮುಖ್ಯ ರಸ್ತೆಯಲ್ಲಿ ಶ್ರೀ ಕೃಷ್ಣ ದೇವರಾಯರ ವೃತ್ತವನ್ನು ನಿರ್ಮಿಸಿ. ಇದರಿಂದ ಮುದಗಲ್ ಪಟ್ಟಣದ ಇತಿಹಾಸ ಅಜರಾಮರವಾಗಿ ಉಳಿಯಲಿದೆ ಮತ್ತು ಯುವಪೀಳಿಗೆಗೆ ಇತಿಹಾಸ ತಿಳಿಸಲಿದೆ ಹಾಗೂ ಕಲ್ಯಾಣ ಕರ್ನಾಟಕದ ಕೊನೆಯ ಪಟ್ಟಣ ಪ್ರದೇಶವಾದ ಮುದಗಲ್ ಐತಿಹಾಸಿಕವಾಗಿ ಕಲ್ಯಾಣ ಕರ್ನಾಟಕ ಸಾಮ್ರಾಜ್ಯದ ಹೆಬ್ಬಾಗಿಲು.
ಮುದಗಲ್ ಪಟ್ಟಣದಿಂದ 15ಕಿ.ಮೀ ಗೆ ಮುಂಬೈ ಕರ್ನಾಟಕ ಪ್ರಾರಂಭವಾಗುತ್ತದೆ. ಮುದಗಲ್ ಪಟ್ಟಣವೇ ಕಲ್ಯಾಣ ಕರ್ನಾಟಕದ ಪ್ರಥಮ ಪಟ್ಟಣವಾಗಿದೆ.ಈ ಹಿನ್ನೆಲೆಯಲ್ಲಿ
ಲಿಂಗಸಗೂರು ನಿಂದ ಮುದಗಲ್ ಗೆ ಪ್ರವೇಶವಾಗುವ ಪೆಟ್ರೋಲ್ ಬಂಕ್ ಹತ್ತಿರ
ಮಹಾ ಮಾನವತವಾದಿ ಸಕಲ ಜೀವತ್ಮಗಳಿಗೂ ಲೇಸುಬಯಸಿದ ವಿಶ್ವ ಗುರು ಬಸವಣ್ಣನವರ ವೃತ್ತವನ್ನು ನಿರ್ಮಿಸಬೇಕು ಈ ಮೂಲಕ ನಮ್ಮ ಪಟ್ಟಣದ ಇತಿಹಾಸವನ್ನು ನಾವೇ ಉಳಿಸಿಕೊಳ್ಳೋಣ ಎಂದು ಶ್ರೀ ಮಠದಲ್ಲಿ ಮಹಾಂತಸ್ವಾಮೀಜಿ ಮಾತನಾಡಿದರು.