ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಹೈದರಾಬಾದ್ ನವಾಬ್ ಮೀರ್ ಅಲಿಖಾನ್ ಬಹದ್ದೂರ್ ನಿಜಾಮರ ಆಡಳಿತಾವಧಿಯಲ್ಲಿ ರಾಜ
ಮಹಾರಾಜರಂತೆ ವೈಭವದಿಂದ ತಮಗೆ
ನೀಡಲಾಗಿದ್ದ, ಜಹಗೀರುಗಳಲ್ಲಿ ಮೆರೆದ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ
ಮೆಣೇಧಾಳದ ವಾಡೆಯೂ ಸಹ ಒಂದು.
ವಿಜಯನಗರದ ಕೃಷ್ಣದೇವರಾಯನ
ಮಹಾಮಂತ್ರಿಯಾಗಿದ್ದ ತಿಮ್ಮರಸ ಮತ್ತು
ಬಹುಮನಿ ದೊರೆಗಳ ಆಸ್ಥಾನಗಳಲ್ಲಿದ್ದ
ತಿಪ್ಪರಸ ಎಂಬುವವರು ಮೆಣೇಧಾಳ ವಾಡೆಯ
ಮೂಲ ಪುರುಷರೆಂದು ತಿಳಿದುಬರುತ್ತದೆ.
ವಿಜಯಪೂರ ಭಾಗದಿಂದ ವಲಸೆ ಬಂದ
ತಿಪ್ಪರಸರು ಮೆಣೇಧಾಳ ಗ್ರಾಮದಲ್ಲಿ
ನೆಲೆನಿಂತು, ಈ ಗ್ರಾಮವನ್ನೇ ತಮ್ಮ
ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರೆಂದು,
ಉಲ್ಲೇಖವಿದೆ.
19ನೇ ಶತಮಾನದ ಪೂರ್ವಾರ್ಧದಲ್ಲಿ ನಿರ್ಮಾಣ ಮಾಡಿದ ಮೆಣೇಧಾಳ ವಾಡೆ ಇಂದಿಗೂ ಗಟ್ಟಿ ಮುಟ್ಟಾಗಿದೆ ತಿಪ್ಪರಸರ ನಂತರ ದೇಸಾಯಿ ಮನೆತನದವರು ವಾಡೆಗೆ ವಾರಸುದಾರರಾಗಿ ಅಧಿಕಾರದ ಸೂತ್ರ ಹಿಡಿದರು.
ಒಂದನೇ ಸ್ವಾಮಿರಾವ್ ದೇಸಾಯಿ ವಾಡೆಯನ್ನು ಜೀರ್ಣೊದ್ಧಾರ ಮಾಡಿ ನವಿಕರಿಸಿದರು, ತದ ನಂತರ ಒಂದನೇ ವೆಂಕಟರಾವ್ ಎರಡನೇ ಸ್ವಾಮಿರಾವ್ ವಾಡೆಯ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡರು, ನವಾಬ್ ನಿಜಾಮರು ಇವರ ಪ್ರಾಮಾಣಿಕ ಸೇವೆಯನ್ನು ಮೆಚ್ಚಿ 25 ಹಳ್ಳಿಗಳ ಜಹಗೀರುಗಳ ಕಂದಾಯವನ್ನು ಇವರಿಗೆ ದೊರಕುವಂತೆ ಹುಕುಂ ಹೊರಡಿಸಿ “ ಬಿಲ್ ಮುಕ್ತೆದಾರ” ಎಂದು ಅಧಿಕಾರ ನೀಡಿದರು.
ದೇಸಾಯಿಯವರ ವ್ಯಾಪ್ತಿ 25 ಗ್ರಾಮಗಳ 14
ಸಾವಿರ ಪಟ್ಟಾ ಜಮೀನುಗಳು ಹೊಂದಿದ್ದವು,
ಸುಮಾರು 2 ಸಾವಿರ ಎಕರೆಗಳಷ್ಟು
ಜಮೀನುಗಳನ್ನು ದರ್ಗಾ ಮತ್ತು
ದೇವಸ್ಥಾನಗಳ ಪೂಜಾರಿಗಳಿಗೆ ಇನಾಮ
ಮೂಲಕ ನೀಡಿದ್ದರು. ಸ್ವಾಮಿರಾವ್ ದೇಸಾಯಿ
ಅತ್ಯಂತ ಮೇಧಾವಿ, ಚಾಣಾಕ್ಷಬುದ್ಧಿ,
ಕರುಣಾಮಯಿ ಯಾಗಿದ್ದರು.
ಪ್ರತಿ ಗ್ರಾಮಗಳಿಗೆ ಕುಡಿಯುವ ನೀರಿನ
ವ್ಯವಸ್ಥೆ, ಕೆರೆಗಳನ್ನು ನಿರ್ಮಿಸಿದರು ಇದಕ್ಕಾಗಿ
ನವಾಬ ನಿಜಾಮರ ಗಮನಕ್ಕೆ ತಂದು ಅವರಿಂದ ಹೆಚ್ಚಿನ ಆರ್ಥಿಕ ಸಹಾಯ ಪಡೆಯುತ್ತಿದ್ದರು.
ನಿಜಾಮರ ಸೈನ್ಯದಲ್ಲಿ ಕ್ಯಾಪ್ಟನ್ ಆಗಿದ್ದ
ಲಿಯೋನಾರ್ಡ ಮನ್ ಎಂಬ ಬ್ರಿಟೀಷ್
ವ್ಯಕ್ತಿಯನ್ನು ಬಾವಿಗಳನ್ನು ತೋಡಿಸಲು 1928
ರಿಂದ 1935 ರವರೇಗೆ ಇಲ್ಲಿಗೆ ಕರೆಸಿಕೊಂಡು
ಸುಮಾರು ನೂರಕ್ಕೂ ಹೆಚ್ಚು ಬಾವಿಗಳನ್ನು
ನಿರ್ಮಾಣ ಮಾಡಿಸಿದರು.
ಸ್ವಾಮಿರಾವ್ ದೇಸಾಯಿಯವರು ಸಾಹಿತ್ಯ, ಸಂಗಿತ,
ಕಲಾ ಪ್ರೇಮಿಗಳು ಆಗಿದ್ದರು, ಹಿಂದಿ,
ಇಂಗ್ಲೀಷ, ಮರಾಠಿ, ಕನ್ನöಡ, ಉರ್ದು
ಭಾಷೆಗಳಲ್ಲಿ ಪರಿಪೂರ್ಣತೆ ಪಡೆದಿದ್ದರು.
ನವಾಬರಾಗಲಿ ಅಥವಾ ಬ್ರಿಟೀಷ ಅಧಿಕಾರಿಗಳಾಗಲಿ
ಮೆಣೇಧಾಳಕ್ಕೆ ಬಂದರೆ ಅವರಿಗೆ
ಉಳಿದುಕೊಳ್ಳಲು ಪರಿವೀಕ್ಷಣಾ ಮಂದಿರ,
ಆಸ್ಪತ್ರೆ ಮತ್ತು 25 ಗ್ರಾಮಗಳ ಕಂದಾಯ
ವಸೂಲಿ ಮಾಡುವದಕ್ಕೆ ಸಿಬ್ಬಂದಿಗಳಿಗೆ ಹಾಗೂ
ಕಾರ್ಯಾಲಯಗಳ ಕಟ್ಟಡಗಳನ್ನು
ನಿರ್ಮಿಸಿದರು.
ಅವರು ಪ್ರತಿ ದಿನ ಮಧ್ಹಾನ್ನ ಉಟದ ವೇಳೆ ವಾಡೆಯ ಮುಂದಿನ ಗಂಟೆ ಬಾರಿಸುವ ವ್ಯವಸ್ಥೆ ಮಾಡಿದ್ದರು, ಆ ವೇಳೆ ಎಷ್ಟೇ ಜನ ವಾಡೆಗೆ ಬಂದರೂ ಅವರಿಗೆಲ್ಲಾ ಊಟ ಮಾಡಿಸಿ ಕಳುಹಿಸುತ್ತಿದ್ದರು. ಗ್ರಾಮದ ಯಾವುದೇಕುಟುಂಬದವರ ಸಂಬಂಧಿ ಗಳು ಊರಿಗೆ ಬಂದರೆ, ಅವರಿಗೆ ವಾಡೆಯಲ್ಲಿ ಅತಿಥಿ ಸತ್ಕಾರ ಮಾಡುವ ವ್ಯವಸ್ಥೆ ಮಾಡಿದ್ದರು, ಬಡವರ ಮದುವೆ, ಮುಂಜಿವೆ ಕಾರ್ಯಗಳಿಗೆ ಹಣಕಾಸಿನ ಸಹಾಯವನ್ನೂ ಸಹ ಮಾಡುತ್ತಿದ್ದ ಕರುಣಾಳು.
- ವಾಡೆಯ ಮುಖ್ಯದ್ವಾರದ
ಮೇಲೆ ಇವರ ಲಾಂಛನವಾದ ಗಂಡ
ಭೇರುಂಡದ ಚಿತ್ರವನ್ನು ಕೆತ್ತಲಾಗಿದೆ. ಈ
ಲಾಂಛನವನ್ನು ಈ ದೇಸಾಯಿಯವರ
ಅಡಳಿತಕ್ಕೆ ನೀಡಲಾಗಿತ್ತು. ಈಗ ಇದೇ
ಲಾಂಛನವನ್ನು ರಾಜ್ಯ ರಸ್ತೆ ಸಾರಿಗೆ
ಸಂಸ್ಥೆಯವರು ಬಳಸುತ್ತಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯವು 15-08-1947 ಕ್ಕೆ
ಸಿಕ್ಕರೂ ಸಹ, ಹೈದರಾಬಾದ್ ನಿಜಾಮರ ಆಳ್ವಿಕೆ
ಯಲ್ಲಿದ್ದ ರಾಯಚೂರ, ಕಲಬುರಗಿ, ಬೀದರ್
ಜಿಲ್ಲೆಗಳಿಗೆ ಸ್ವಾತಂತ್ರö್ಯ ಸಿಕ್ಕಿದ್ದು 17-09-1988
ರಂದು. ಅಂದೇ ಮಿಲ್ಟ್ರಿಯವರ ಸಮ್ಮುಖದಲ್ಲಿ
ವಾಡೆಯ ಮೇಲೆ ಹಾರುತಿದ್ದ ನಿಜಾಮರ ಧ್ವಜ
ಇಳಿಸಿ ತ್ರೀವರ್ಣ ಧ್ವಜವನ್ನು ಹಾರಿಸಲಾಯಿತು.
ಭಾರತ ಸರ್ಕಾರದ ಪರಿಧಿಯೊಳಗೆ ಬಂದ
ನಂತರ 25 ಗ್ರಾಮಗಳ ಜಾಹಗೀರನ್ನು
ಕಸಿದುಕೊಳ್ಳಲಾಯಿತು. ಊಳುವವನೇ
ಒಡೆಯ ಯೋಜನೆಯಲ್ಲಿ ಕಾನೂನು
ಪ್ರಕಾರ ಅವರಿಗೆ ಭೂಮಿ ಸೇರಿದವು. ವಾಡೆಯ ವೈಭವ ಕ್ಷಿಣಿಸಿತು. ವಾಡೆಯ ಒಳಭಾಗದ ಮಹಲ್ ಬಿದ್ದು ಹೋಗಿದೆ. ಆದರೆ ಕಲಾತ್ಮಕವಾಗಿ
ಶ್ರೀಗಂಧದ ಕಟ್ಟಿಗೆಯಲ್ಲಿ ನಿರ್ಮಿಸಿರುವ
ಗಣೇಶನ ಮಂಟಪ ಈಗಲೂ ಆಕರ್ಷಕವಾಗಿದೆ.
ವಾಡೆಯು ಇತಿಹಾಸ ಪುಟಗಳನ್ನು
ಸೇರುವಂತಾಗಿದೆ. ಸಧ್ಯ ಈ ವಾಡೆಯಲ್ಲಿ
ಸ್ವಾಮಿರಾವ್ ಅವರ ಮೊಮ್ಮಕ್ಕಳಿದ್ದಾರೆ.