ಆನಂದ ಸಿಂಗ್ ರಜಪೂತ್
ರಾಜ್ಯದ ವಿವಧೆಡೆ ಎಳ್ಳ ಅಮಾವಾಸ್ಯೆಯ ವಿಶೇಷತೆಯ
ಅಂಗವಾಗಿ ರೈತರು ಕುಟುಂಬದ ಸದಸ್ಯರೊಂದಿಗೆ
ಮತ್ತು ತಮ್ಮ ಬಂಧು ಬಳಗದವರನ್ನು ಗ್ರಾಮಕ್ಕೆ
ಕರೆಸಿಕೊಂಡು ಹೊಲಗಳಿಗೆ ತೆರಳಿ ಪಾಂಡವರ
ಪ್ರತಿಮೆಗಳು ಹಾಗೂ ಭೂದೇವಿಗೆ ವಿಶೇಷವಾದ ಪೂಜೆ
ಮಾಡಿ, ಚರಗ ಚಲ್ಲುವುದರ ಮುಖಾಂತರ ಎಲ್ಲಾರೂ
ಸೇರಿ ಪ್ರಾರ್ಥಿಸುತ್ತಾರೆ.
ಉತ್ತರ ಕರ್ನಾಟಕದಲ್ಲಿಯೂ ಇದೇ ರೀತಿಯ
ವಿಶೇಷತೆಯೊಂದಿಗೆ ಪೂಜೆಯನ್ನು ಮಾಡುತ್ತಾರೆ.
ರೈತರು ಹೊಲದಲ್ಲಿ ಜೋಳದ ಕಣಿಕೆಯಿಂದ
ಕೊಂಪೆಕಟ್ಟಿ ಅದಕ್ಕೆ ಹೊಸ ಸೀರೆಯನ್ನು ಸುತ್ತಿ
ಕೊಂಪೆಯೊಳಗೆ ಪಾಂಡವರ ಪ್ರತಿಮೆಗಳ ಪ್ರತಿ
ರೂಪದಂತೆ ೭ ಕಲ್ಲುಗಳನ್ನು ಇಟ್ಟು ವಿಭೂತಿ
ಕುಂಕುಮ ಅರಿಶಿಣ ಹಚ್ಚಿ ಆರತಿ ಬೆಳಗುತ್ತಾರೆ. ಅದೇ ರೀತಿ
ಗ್ರಾಮೀಣ ಭಾಗದ ಮಹಿಳೆಯರು ಜಾನಪದ
ಹಾಡುಗಳನ್ನು ಹಾಡಿ ಸಂಭ್ರಮಿಸುತ್ತಾರೆ.
ಮುAಗಾರು ಹಂಗಾಮಿನಲ್ಲಿ ಮಳೆ-ಬೆಳೆ ಎರಡು
ಸಮೃದ್ಧಿಯಾಗಿ ಬರಲಿ ಎಂದು ಸ್ಮರಿಸುತ್ತಾ ದೇವರಲ್ಲಿ ಕೈ
ಮುಗಿದು ಕೇಳಿಕೊಳ್ಳುತ್ತಾರೆ.
ಮನೆಯಿಂದ ತಂದಿದ್ದ ಜೋಳದ ರೊಟ್ಟಿ,ಸಜ್ಜೆ ರೊಟ್ಟಿ,
ಕಡುಬು ಎಲ್ಲಾ ದ್ವಿದಳ ಧಾನ್ಯ ತರಕಾರಿಗಳಿಂದ
ಮಾಡಲ್ಪಟ್ಟ ಸ್ವಾದಿಷ್ಟವಾದ ಭಜ್ಜಿ ಪಲ್ಯ, ಶೇಂಗಾ-ಎಳ್ಳಿನ
ಹೋಳಿಗೆ, ನವಣೆ ಅನ್ನ ದೇವರ ಮುಂದೆ ನೈವೇದ್ಯ
ಇಟ್ಟು ಭಕ್ತಿ ಪೂರ್ವಕವಾಗಿ ನಮಿಸುತ್ತಾರೆ. ಹೊಲ ಅಥವಾ
ಗದ್ದೆಯ ಅಂಚಿನಲ್ಲಿರುವ ಮರಗಳ ಕೆಳಗೆ
ಕುಳಿತು ಕುಟುಂಬದ ಸದಸ್ಯರು ಬಂಧುಗಳು
ಜೊತೆಗೆ ಊಟವನ್ನು ಸವಿಯುತ್ತಾರೆ.