ಜಾಲಹಳ್ಳಿ-12 ಸಮಾಜದಲ್ಲಿ ಜಾತಿ ವ್ಯವಸ್ಥೆ ಬೇರೂರಿದೆ ಸಮಾಜದಲ್ಲಿ ಬದಲಾವಣೆ ಅನ್ನುವುದು ಕನಸಾಗಿದೆ ಜಾತಿ ವ್ಯವಸ್ಥೆ ಕಿತ್ತು ಹೊಗೆದು ಹೊರಬರದಿದ್ದರೆ ನಾವು ಸ್ವಾಭಿಮಾನಿ ಗಳಾಕಲಿಕ್ಕೆ ಸಾಧ್ಯತೆ ಇಲ್ಲಾ ಎಂದು ಕರ್ನಾಟಕ ರಾಜ್ಯ ವಿಧಾನಸಭಾ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಹೇಳಿದರು. ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಯಲ್ಲಿ ಬರುವ ತಿಂಥಣಿ ಬ್ರಿಜ್ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ತಿಂಥಣಿ ಬ್ರಿಜ್ ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆಯುವ ಹಾಲುಮತ ಸಂಸ್ಕೃತಿ ವೈಭವ ಡೊಳ್ಳು ಭಾರಿಸುವ ಮುಖಾಂತರ ಉಧ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ವಿದ್ಯಾವಂತರಾಗಿ ಸಾಮಾಜಿಕ ವಾಗಿ ರಾಜಕೀಯವಾಗಿ ಆರ್ಥಿಕವಾಗಿ ಸಧೃಢರಾಗಬೇಕು ಸಮಾಜದ ಒಳಿತಿಗಾಗಿ ವಿದ್ಯಾವಂತ ಯುವಕರು ದುಡಿಯಬೇಕು ಸಮಾಜ ಒಟ್ಟಾಗಿ ಸೇರುವದಕ್ಕೆ ಮತ್ತು ಜಾಗೃತಿ ಮೂಡಿಸುವದಕ್ಕೆ ಇಂತಹ ಕಾರ್ಯಕ್ರಮ ನಡೆಯಬೇಕೆಂದು ಹೇಳಿದರು ಸ್ವಾಮೀಜಿಯವರು ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು ಎಸ್ ಟಿ ಗೆ ಸೇರಿಸಿ ಎನ್ನುವ ಹೋರಾಟ ಮಾಡುವದಕ್ಕಿಂತ ಬೀದರ್ ಗುಲ್ಬರ್ಗ ಯಾದಗಿರ ಮತ್ತು ಕೊಡಗು ಜಿಲ್ಲೆಗಳನ್ನು ಎಸ್ ಟಿ ಗೆ ಸೇರಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಿದೆ ಕಾರ್ಯರೂಪಕ್ಕೆ ತರಲು ಈಶ್ವರಪ್ಪ ಪ್ರಯತ್ನ ಮಾಡಲಿ ಎಂದು ಹೇಳಿದರು ಇದೆ ಸಂದರ್ಭದಲ್ಲಿ ಸುರೇಶ್ ಭೈರತಿ ಶಾಸಕರು ರಾಘವೇಂದ್ರ ಹಿಟ್ನಾಳ ಶಾಸಕರು ಸಮಾಜದ ಒಳಿತಿಗಾಗಿ ನಾವೆಲ್ಲ ದುಡಿಯೋಣ ಎಂದು ಹೇಳಿದರು ಪ್ರಾಸ್ತಾವಿಕ ವಾಗಿ ಕಾರ್ಯಕ್ರಮ ನೇತೃತ್ವ ವಹಿಸಿ ಪ ಪೂ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿಯವರು ಮಾತನಾಡಿದರು ಕಾರ್ಯಕ್ರಮದಲ್ಲಿ ಬೀರದೇವರ ಉತ್ಸವ ಗ್ರಾಮಪಂಚಾಯತ ಸದಸ್ಯರ ಸಮಾವೇಶ ಸಾಂಸ್ಕೃತಿಕ ಕಾರ್ಯಕ್ರಮ ಪುಸ್ತಕ ಬಿಡುಗಡೆ ಕಾರ್ಯಕ್ರಮ ಟಗರು ಕಾಳಗ ಕಾರ್ಯಕ್ರಮ ನೆರವೇರಿಸಿದರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಶ್ರೀ ಮಹಾದೇವ ಜಾನಕರ ಆರ್ ಎಸ್ ಪಿ ರಾಷ್ಟ್ರ ಅಧ್ಯಕ್ಷರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಡಿ ಎಸ್ ಹುಲಿಗೇರಿ ಶಾಸಕರು ಎನ್ ಎಸ್ ಬೋಸರಾಜ ಮಾಜಿ ವಿಧಾನ ಪರಿಷತ್ ಸದಸ್ಯರು ಅಮರೆಗೌಡ ಪಾಟೀಲ್ ಬಯ್ಯಾಪೂರ ಶಾಸಕರು ಕೆ ಎಂ ರಾಮಚಂದ್ರಪ್ಪ ಚಂದಪ್ಪ ಬುದ್ದಿನಿ ಹಾಗೂ ಸಮಾಜದ ಜನಪ್ರತಿನಿಧಿಳು ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ದ ರು