ಉದಯವಾಹಿನಿ
ಆನಂದ ಸಿಂಗ್ ರಜಪೂತ
ಕವಿತಾಳ : ದಕ್ಷ ಕರ್ತವ್ಯ, ಪ್ರಾಮಾಣಿಕತೆ, ಸರಳತನದಿಂದ ಮಾನವಿಯ ಗುಣಗಳನ್ನು ಅಳವಡಿಸಿಕೊಂಡ ಕವಿತಾಳ ಪೋಲಿಸ್ ಠಾಣೆಯ ಪಿ ಎಸ್ ಐ ತಮ್ಮ ಸರಳತೆಯಿಂಸ ಜನ ಮನ ಗೆದ್ದು ಸಾರ್ವಜನಿಕರ ಪ್ರೀತಿಗೆ . ಸರಳ ವ್ಯಕ್ತಿತ್ವ ಮತ್ತು ಮಾನವಿಯ ಗುಣಗಳನ್ನು ಹೊಂದಿರುವ ಅಧಿಕಾರಿಗಳನ್ನು ಜನರು ಪ್ರಿತಿಸುತ್ತಾರೆ ಮತ್ತು ಸದಾ ಗೌರವಿಸುತ್ತಾರೆ ಎಂಬುವದಕ್ಕೆ
೧೧-೦೧-೨೦೨೦ ರಂದು ಹುಟ್ಟು ಹಬ್ಬದ ನಿಮಿತ್ತವಾಗಿ ಸುಮಾರು ಎರಡು ಮೂರು ನೂರಕ್ಕೂ ಹೆಚ್ಚು ಜನ ಅಭಿಮಾನದಿಂದ ಸನ್ಮಾನಿಸಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿದ್ದೆ ಸಾಕ್ಷಿಯಾಗಿದೆ.
ಸಾಮಾನ್ಯವಾಗಿ ಪೋಲಿಸ್ ಎಂಬ ಶಬ್ಧ ಬಂದಾಗ ಕೆಲವರು ಮೂಗು ಮುರಿಯುವದೆ ಜಾಸ್ತಿ!
ಅಪರಾಧಿಗಳಂತೂ ದಕ್ಷ ಅಧಿಕಾರಿಗಳೆಂದರೆ ತರತರ ನಡುಗುತ್ತಾರೆ, ಆದರೆ ಪಿ ಎಸ್ ಐ ವೆಂಕಟೇಶ ಎಂದಾಕ್ಷಣ ಜನರ ಮನದಲ್ಲಿ ಮೂಡುವ ಭಾವನೆ ಬೇರೆಯಾಗಿದೆ, ಯಾಕೆಂದರೆ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಗೂ ಕೂಡ ಸರಳತೆಯಿಂದ ಕಾನೂನಿನ ಅರಿವು ಮೂಡಿಸಿ ಮನವೊಲಿಸಿ ತಿಳಿ ಹೇಳುವ ವ್ಯಕ್ತಿತ್ವ ರೂಢಿಸಿಕೊಂಡಿದ್ದಾರೆ. ಪೋಲಿಸ್ ಇಲಾಖೆ ಎಂದರೆ
ನ್ಯಾಯ ನೀತಿ ಧರ್ಮದ ಅವಿಭಾಜ್ಯ ಅಂಗವಾಗಿದೆ ಆದರೆ ಪೋಲಿಸ್ ಇಲಾಖೆಯ ಬಗ್ಗೆ ಎಲ್ಲಾ ಅಧಿಕಾರಿಗಳು ಉಳಿಸಿಕೊಂಡಿಲ್ಲ, ಆದರೆ ಇವರು ಕಾನೂನು ಸುವ್ಯವಸ್ಥೆ ಕಾಪಾಡುತ್ತ ಎಲ್ಲಾ ಸಿಬ್ಬಂದಿಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ, ಇವರು ಕರ್ತವ್ಯ ಪಾಲನೆಯಲ್ಲಿ ಸಿಸ್ಥಿನ ಸಿಪಾಯಿಯಾಗಿದ್ದಾರೆ, ದುಷ್ಟರೊಂದಿಗೆ ಖಡಕ್ ಅಧಿಕಾರಿಯಾಗಿ ಮಟಕಾ, ಇಸ್ಪಿಟ್, ಕೋಳಿ ಪಂದ್ಯ, ಮತ್ತು ಅಕ್ರಮ ದಂದೆಗಳಿಗೆ ಕಡಿವಾಣ ಹಾಕಿ ಠಾಣೆಯ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಕಾಪಾಡುವುದನ್ನು ಜನ ಸಾಮಾನ್ಯರು ಮೆಚ್ಚಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಶಾಂತಿಯುತವಾಗಿ ಸರ್ಕಾರದ ಆದೇಶದಂತೆ ನೆರವೇರಿಸಿದರು.
ವೆಂಕಟೇಶ ಎಂ ಅವರು ಪಿ ಎಸ್ ಐ ಹುದ್ದೆಗೆರಿ
ಕವಿತಾಳ ಗೆ ಪ್ರಥಮವಾಗಿ ಪಿ.ಎಸ್.ಐ ಆಗಿ ಅಧಿಕಾರ ಪಡೆದು ಬಂದರು ಅವರು ಬಂದಾಗಿನಿಂದ
ಕರೋನಾ ಸಮಸ್ಯೆಯಲ್ಲಿ “ಕರೋನಾ ವಾರಿಯರ್ಸ್ ಆಗಿ ಕೆಲಸವನ್ನು ದಕ್ಷತೆಯಿಂದ ಮಾಡುತ್ತಿದ್ದಾರೆ.
ಶಿಸ್ತು ಸಂಯಮದ ಜೋತೆ ಹಲವಾರು ಸಮಾಜಕ್ಕೆ ಸಹಕಾರಿಯಾದ ಮಾನವೀಯ ಕೆಸಲಗಳನ್ನು ಶ್ರಿಯತರು ಮಾಡುತ್ತಿದ್ದಾರೆ.
ಕೆಲ ಅಪರಾಧದ ಸಮಸ್ಯೆಗಳನ್ನು ಇವರಲ್ಲಿ ನಿವೇದಿಸಿದಾಗ ತಕ್ಷಣವೆ ಧಾವಿಸಿ ಸಮಸ್ಯೆ ಪರಿಹರಿಸುವದು ಇವರ ದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ. ಹಲವು ಸಮಾಜದ ಸಂಘ ಸಂಸ್ಥೆಗಳು, ಇವರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ಶುಭ ಕವಿತಾಳ ಪಟ್ಟಣ ಮತ್ತು ಸುತ್ತ ಮುತ್ತಲಿನ ಹಳ್ಳಿಯ ಜನರು ಶುಭಕೋರಿರುವುದು ಅವರ ಮೇಲೆ ಇಟ್ಟ ಗೌರವ, ಪ್ರೀತಿಯನ್ನು ಪ್ರದರ್ಶಿಸುತ್ತಿದೆ. ಪಿ ಎಸ್ ಐ ವೆಂಕಟೇಶ ಅವರ ಕಾರ್ಯ ಚಟುವಟಿಕೆಯ ಬಗ್ಗೆ ಜನರಿಂದ ಅಪಾರವಾದ ಹೊಗಳಿಕೆ ಕೇಳಿಬರುತಿರುವುದು ಅವರಿಗೆ ಮತ್ತು ಇಲಾಖೆಗೆ ದೊಡ್ಡ ಗೌರವವಾಗಿದೆ. ಇವರ ಈ ಸೇವೆ ಕೇವಲ ಠಾಣಾ ವ್ಯಾಪ್ತಿಗೆ ಸಿಮಿತವಾಗದೆ ಮುಂದಿನ ದಿನಮಾನಗಳಲ್ಲಿ ತಾಲ್ಲೂಕು ಹಾಗೂ ಜೀಲ್ಲಾ ಮಟ್ಟದಲ್ಲಿ ಉನ್ನತ ಹುದ್ದೆ ಮಾಡಲು ದೇವರು ಆಯಸ್ಸು, ಆರೋಗ್ಯ ಕೋಟ್ಟು ಕಾಪಾಡಲಿ ಎಂದು ಅವರ ಜನ್ಮ ದಿನದಂದು ಜನರು ಹಾರೈಸಿದ್ದಾರೆ.
Check Also
ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …