ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸಮೀಪದ ಬಚನಾಳ್ ಗ್ರಾಮದಲ್ಲಿ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ. ಮೃತ ವ್ಯಕ್ತಿಯನ್ನು ಈಶಪ್ಪ (33) ಎಂದು ಗುರುತಿಸಲಾಗಿದ್ದು, ಸ್ಥಳಕ್ಕೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ತಾವರಗೇರಾ: ಶೌಚಾಲಯ ಗೋಡೆ ಕುಸಿತ ದುರ್ಘಟನೆ , ಸಚಿವ, ಶಾಸಕರ ಭೇಟಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಶೌಚಾಲಯ ಕುಸಿದು ಬಿದ್ದು, ಇಬ್ಬರು ಮಹಿಳೆಯರು ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ತಂಗಡಗಿ ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರ ಕುಟುಂಬಗಳಿಗೆ ತೆರಳಿ ಸಾಂತ್ವನ ಹೇಳಿದರು. ಈಗಾಗಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಧನ ವಿತರಿಸಿದ ಬಗ್ಗೆ ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಶೌಚಾಲಯ ಸಂಪೂರ್ಣವಾಗಿ ನೆಲ ಸಮಗೊಳಿಸಿ ಸಾರ್ವಜನಿಕರಿಗೆ …
Read More »ತಾವರಗೇರಾ: ಶೌಚಾಲಯ ಗೋಡೆ ಕುಸಿತ, ಇಬ್ಬರ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ 5ನೇ ವಾರ್ಡಿನ ಶೀಥಿಲಾವಸ್ತೆಯಲ್ಲಿದ್ದ ಸಾರ್ವಜನಿಕ ಮಹಿಳಾ ಶೌಚಾಲಯದ ಗೋಡೆ ಕುಸಿದು ಬಿದ್ದು ಇಬ್ಬರು ದಾರುಣ ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮೃತರನ್ನು ಭಾನು ಬೇಗಂ ಖಾಜಿ ಹಾಗೂ ಉಮಾ ಬಾಯಿ ಬಪ್ಪರಗಿ ಎಂದು ಗುರುತಿಸಲಾಗಿದ್ದು ಮತ್ತೊಬ್ಬ ಮಹಿಳೆಗೆ ಗಾಯಗಳಾಗಿವೆ, ಕುಸಿದ ಶೌಚಾಲಯವನ್ನು ಯಾರು ಉಪಯೋಗಿಸದಂತೆ ಪಟ್ಟಣ ಪಂಚಾಯಿತಿಯು ನಿಷೇದಿಸಿತ್ತು , ಮಳೆಯಿಂದಾಗಿ ಕಟ್ಟಡ ನೆನೆದಿದ್ದು , ರಾತ್ರಿ ವೇಳೆ ಮಹಿಳೆಯರು …
Read More »ತಾವರಗೇರಾ:- ಸಿಡಿಲು ಬಡಿದು ಯುವಕ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಿಡಿಲು ಬಡಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಹಿರೇಮುಕರ್ತನಾಳ ಗ್ರಾಮದ ಹೊರ ಹೊಲಯದಲ್ಲಿ ನಡೆದಿದೆ. ಮೃತ ಯುವಕನನ್ನು ಕನಕರಾಯಪ್ಪ ನಾಗಪ್ಪ ಕಾಟಾಪುರ (28) ಎಂದು ಗುರುತಿಸಲಾಗಿದೆ. ಕುರಿ ಕಾಯಲು ತೆರಳಿದ್ದ ಸಂದರ್ಭದಲ್ಲಿ ಶನಿವಾರ ಸಂಜೆ ಬಾರಿ ಸಿಡಿಲು ಹಾಗೂ ಗುಡುಗಿ ನೊಂದಿಗೆ ಮಳೆ ಆರಂಭ ವಾಗುತ್ತಿದಂತೆ , ಮಳೆಯಿಂದ ತಪ್ಪಿಸಿಕೊಳ್ಳಲು ಗಿಡದ ಕೆಳಗೆ ಕುಳುತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಯುವಕನು ಮೃತಪಟ್ಟಿದ್ದಾನೆ. …
Read More »ತಾವರಗೇರಾ: ಇತಿಹಾಸ ಸೃಷ್ಟಿಸಿದ ಮತದಾನ ಬಹಿಷ್ಕಾರ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಚುನಾವಣೆಯಿಂದ ದೂರ ಉಳಿದ ಘಟನೆ ಇಂದು ನಡೆದ ಚುನಾವಣೆಯಲ್ಲಿ ನಡೆದಿದೆ. ಪಟ್ಟಣದ 18ನೇ ವಾರ್ಡ್ ವ್ಯಾಪ್ತಿಯ 142ನೇ ಮತಗಟ್ಟೆಯ ವಿಠಲಾಪುರ ಗ್ರಾಮದ ಗ್ರಾಮಸ್ಥರು ಚುನಾವಣಾ ಬಹಿಷ್ಕರಿಸಿದ್ದಾರೆ, ಕಳೆದ ವಾರ ಗರ್ಭಿಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಲ್ಲಿ ಒಗ್ಗಟ್ಟಾಗಿ ನ್ಯಾಯ ಸಿಗುವವರೆಗೂ ನಾವು ಮತದಾನ ಮಾಡುವುದಿಲ್ಲ ಎಂದು ಘೋಷಿಸಿದ್ದರು, ಅದರಂತೆಯೇ ಇಂದು ಕೂಡ ಗ್ರಾಮದ ಯಾರೊಬ್ಬರೂ …
Read More »ತಾವರಗೇರಾ: ಗರ್ಭಿಣಿ ಸಾವು ನ್ಯಾಯಕ್ಕಾಗಿ ಚುನಾವಣಾ ಬಹಿಷ್ಕಾರ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಸಮೀಪದ ವಿಠಲಾಪೂರ ಮತದಾರರು ಇದೇ ದಿ.7 ರಂದು ನಡೆಯುವ ಲೋಕಸಭಾ ಚುನಾವಣಾ ಮತದಾನ ಬಹಿಷ್ಕಾರ ಮಾಡಲಿದ್ದಾರೆ. ಎಪ್ರಿಲ್ 30 ರಂದು ರಾತ್ರಿ ವಿಠಲಾಪೂರದ ಲಕ್ಷ್ಮೀ ಎಂಬ ಗರ್ಭಿಣಿಯು ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಬಂದಾಗ , ವೈದ್ಯಾಧಿಕಾರಿ ಡಾ.ಕಾವೇರಿ ಯವರ ನಿರ್ಲಕ್ಷ್ಯ ದಿಂದ ಲಕ್ಷ್ಮೀ ಮೃತಪಟ್ಟಿದ್ದಳು, ಅದಕ್ಕೆ ವಿಠಲಾಪೂರದ ರೊಚ್ಚಿಗೆದ್ದ ಸ್ಥಳೀಯ ನೂರಾರು ಜನರು ಆಸ್ಪತ್ರೆ ಮುಂದೆ ಧರಣಿ ಹೂಡಿ , …
Read More »ತಾವರಗೇರಾ:- ಲೋಕಸಭೆ ಚುನಾವಣೆ, ಅರೆ ಮಿಲಟರಿ ಪಡೆ ಪಥಸಂಚಲನ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿಯುತ ಮತದಾನ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಿಪಿಐ ಯಶ್ವಂತ್ ಬಿಸನಳ್ಳಿ ಹೇಳಿದರು. ಅವರು ಪಟ್ಟಣದಲ್ಲಿ ಶುಕ್ರವಾರದಂದು ನಡೆದ ಅರೆ ಮಿಲಿಟರಿ ಪಡೆಯ ಪಥಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದರು ನಂತರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಥ ಸಂಚಲನ ನಡೆಸಲಾಯಿತು. ಈ ಸಂದರ್ಭದಲ್ಲಿ ಠಾಣಾಧಿಕಾರಿ ಸುಜಾತ ನಾಯಕ್, ಪಟ್ಟಣ ಪಂಚಾಯತಿಯ ಸಿಬ್ಬಂದಿಗಳಾದ ಶಾಮೂರ್ತಿ ಕಟ್ಟಿಮನಿ, …
Read More »ತಾವರಗೇರಾ: ಗರ್ಭಿಣಿ ಸಾವು, ವೈದ್ಯಾಧಿಕಾರಿ ಅಮಾನತ್ತಿಗೆ ಪ್ರತಿಭಟನೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ , ಪ್ರಥಮ ಹೆರಿಗೆ ಸಮಯದಲ್ಲಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯತನ ದಿಂದ ಹೆರಿಗೆ ಆಗುವ ಮುಂಚೆಯೇ ಗರ್ಭಿಣಿ ಯು ಮಂಗಳವಾರ ರಾತ್ರಿ ಹತ್ತು ಗಂಟೆಗೆ ಮೃತ ಪಟ್ಟಿದ್ದಾಳೆ. ಪಟ್ಟಣದ ವಿಠಲಾಪೂರನ ಲಕ್ಷ್ಮೀ ನೇಮಿನಾತ ಮುಗುದುಮ್ ( 20 ) ಎಂಬ ಯುವತಿಯ ಮದುವೆಯು ಒಂದು ವರೆ ವರ್ಷದ ಹಿಂದೆ ಆಗಿತ್ತು. ಪ್ರಥಮ ಹೆರಿಗೆ ಗೆಂದು ತಾವರಗೇರಾದ ಸರ್ಕಾರಿ ಸಮುದಾಯ ಆರೋಗ್ಯ …
Read More »ತಾವರಗೇರಾ : ಶಿಕ್ಷಕ ಎಲ್ಲಪ್ಪ ಬಿದರಿ ಇನ್ನಿಲ್ಲ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕಿಲ್ಲಾರಹಟ್ಟಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಲ್ಲಪ್ಪ ಬಿದರಿ ಅವರು ಅನಾರೋಗ್ಯದಿಂದ ಮಂಗಳವಾರದಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಯನ್ನು ಅಗಲಿದ್ದು, ಕುಷ್ಟಗಿ ತಾಲೂಕಿನ ಶಿಕ್ಷಕರ ಬಳಗ ಇವರ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸಿದೆ. ಮೂಲತಃ ವಿಜಯಪುರ ಜಿಲ್ಲೆಯ ಬಬಲೇಶ್ವರ ಗ್ರಾಮದ ಎಲ್ಲಪ್ಪ ಬಿದರಿಯವರು ಶಿಕ್ಷಕರಾಗಿ ತಾವರಗೇರಾ ಹೋಬಳಿಯಲ್ಲಿ ಕೆಲಸ ಮಾಡಿದ್ದು, ಸಾರ್ವಜನಿಕರಲ್ಲಿ …
Read More »ತಾವರಗೇರಾ: ಸಾಮೂಹಿಕ ವಿವಾಹ, ಸಮಾಜಕ್ಕೆ ಮಾದರಿ, ದೊಡ್ಡನಗೌಡ ಪಾಟೀಲ್..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸಾಮೂಹಿಕ ವಿವಾಹಗಳು ನಡೆಸಿಕೊಡುವುದು ಬಡವರ ಬದುಕಿನಲ್ಲಿ ಆಶಾ ಕಿರಣವಾದಂತಾಗಿದ್ದು ತಮ್ಮ ಮಗನ ಮದುವೆ ಜೊತೆ ಗೆ , 40 ಜೋಡಿಗಳ ವಿವಾಹವನ್ನು ನಡೆಸಿಕೊಟ್ಟಿರುವುದು, ವೀರಭದ್ರಪ್ಪ ನಾಲತವಾಡ ಇವರ ಕುಟುಂಬದ ಸಾಧನೆ ಎಂದು ವಿಧಾನಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರಾದ ದೊಡ್ಡನಗೌಡ ಪಾಟೀಲ್ ಹೇಳಿದರು. ಅವರು ಪಟ್ಟಣದಲ್ಲಿ ವೀರಭದ್ರಪ್ಪ ನಾಲತವಾಡ ಅವರ ಮಗನಾದ ಅರುಣ್ ಕುಮಾರ್ ನಾಲತವಾಡ ವಿವಾಹದ ಜೊತೆಗೆ ಹಮ್ಮಿಕೊಂಡಿದ್ದ ಸಾಮೂಹಿಕ …
Read More »