Thursday , September 19 2024
Breaking News
Home / Breaking News (page 82)

Breaking News

ತಾವರಗೇರಾ: ಶ್ರೀ ತ್ರೀ ವೀರಭದ್ರೇಶ್ವರ ಜಾತ್ರೆ ಸರಳ ಆಚರಣೆಗೆ ನಿರ್ಧಾರ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:  ಪಟ್ಟಣದ ಶ್ರೀ ತ್ರೀ ವೀರಭದ್ರೇಶ್ವರ ಜಾತ್ರೆಯು ಇದೇ ಫೇ ೧೯ ರಂದು ನಡೆಯಲಿದ್ದು, ಕರೊನಾ ಹಿನ್ನಲೆಯಲ್ಲಿ ಅತ್ಯಂತ ಸರಳವಾಗಿ ಆಚರಣೆ ಮಾಡಲಾಗುವುದು ಎಂದು ದೇವಸ್ಥಾನ ಕಮೀಟಿಯವರು ತಿಳಿಸಿದ್ದಾರೆ. ಪಟ್ಟಣದ ತ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಸಂಪ್ರದಾಯದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಧಿ ವಿಧಾನಗಳು ನಡೆಯಲಿವೆ. ಆದರೆ ಪ್ರತಿ ವರ್ಷದಂತೆ ಅಯ್ಯಾಚಾರ, ಸಾಮೂಹಿಕ ಮದುವೆಗಳು ನಡೆಯುವುದಿಲ್ಲ. ಕರೊನಾ ವೈರಸ್ ಹರಡುವ ಸಾಧ್ಯತೆಯಿಂದ ಮತ್ತು …

Read More »

ಖಾಯಂ ಶಿಕ್ಷಕರ ನೇಮಕಕ್ಕಾಗಿ ಹಾಗೂ ಮೂಲಸೌಕರ್ಯಕ್ಕಾಗಿ ಎಸ್ ಎಫ್ ಐ ಪ್ರತಿಭಟನೆ

  ಉದಯ ವಾಹಿನಿ :- ಕವಿತಾಳ:- ಪಟ್ಟಣದ ಉರ್ದು ಪ್ರೌಢ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸಲು ಹಾಗೂ ವರ್ಗಾವಣೆಯಾಗಿರುವ ಮಹ್ಮದ್ ಯೂಸೂಫ್ ನಾಗೂರ ಪ್ರಭಾರಿ ಮುಖ್ಯಗುರುಗಳನ್ನ ಪುನ: ಕವಿತಾಳಕ್ಕೆ ನೇಮಿಸಲು DDPI ಯವರು ನೀಡಿದ ಆದೇಶ ಉಲ್ಲಂಘನೆ ಮಾಡುತ್ತಿರುವ ದೇವದುರ್ಗ BEO ನಡೆ ಖಂಡಿಸಿ & ಶಾಲೆಗೆ ಖಾಯಂ ಶಿಕ್ಷಕರ ನೇಮಕ ಹಾಗೂ ಮೂಲಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು. ಕವಿತಾಳ ಪಟ್ಟಣಕ್ಕೆ 3 ವರ್ಷಗಳ ಹಿಂದೆ ಉರ್ದು ಮಂಜೂರಾಗಿದ್ದು, ಇಲ್ಲಿಯವರೆಗೂ …

Read More »

ಸರಳವಾಗಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಲಿಂಗಸಗೂರು ತಾಲೂಕ ಮಡಿವಾಳ ಮಾಚಿದೇವರ ಸಂಘ ಹಾಗೂ ವಿವಿಧ ಸರಕಾರಿ ಕಚೇರಿಗಳಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಸರಳ ರೀತಿಯಲ್ಲಿ  ಆಚರಣೆ ಮಾಡಲಾಯಿತು.ಶ್ರೀ  ಮಡಿವಾಳ ಮಾಚಿ ದೇವರ ಭಾವಚಿತ್ರಕ್ಕೆ ಉಪ ತಹಸೀಲ್ದಾರ್ ಪಾರ್ವತಿ ಹಿರೇಮಠ  ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಡಿವಾಳ ಮಾಚಿದೇವ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭ ಮ.ಮಾ. ಸಂಘದ ಅಧ್ಯಕ್ಷ ಶರಣಪ್ಪ ಮಡಿವಾಳ, ವೀರಣ್ಣ ಮಡಿವಾಳ, …

Read More »

ಕವಿತಾಳ: ಶ್ರೀ ಮಡಿವಾಳ ಮಾಚಿ ದೇವರು ಜಯಂತಿ

  ವರದಿ:  ಆನಂದಸಿಂಗ್.ರಜಪೂತ್ ಕವಿತಾಳ :- “ಅರಸುತನ ಮೇಲಲ್ಲ ಅಗಸುತನ ಕೀಳಲ್ಲ” ಎಂದು 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಲ್ಲಿ ಶಿವ ಶರಣರ ಸೇನಾ ದಂಡ ನಾಯಕನಾಗಿ ಬಿಜ್ಜಳನ ಸೈನ್ಯವನ್ನು ಎದುರಿಸಿದಲ್ಲದೇ. ಅಷ್ಟು ವಚನ ಸಾಹಿತ್ಯವನ್ನು ರಚಿಸಿದ ಮಹಾ ಶರಣ ವಚನ ಸಂರಕ್ಷಕ ವೀರ ಗಣಾಚಾರಿ ಶರಣ ಮಡಿವಾಳ ಮಾಚಿ ದೇವರು ಎಂದು ರಮೇಶ ಮಡಿವಾಳ ಹೇಳಿದರು. ಪಟ್ಟಣ ಪಂಚಾಯಿತಿಯಲ್ಲಿ ಇಂದು ಶರಣ ಮಡಿವಾಳ ಮಾಚಿ ದೇವರ ಭಾವಚಿತ್ರ ಪೂಜೆ ಸಲ್ಲಿಸಿ …

Read More »

ಮಡಿವಾಳ ಮಾಚಿದೇವ ಜಯಂತಿಗೆ ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ  ಗೈರು

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಪುರಸಭೆಯಲ್ಲಿ ವೀರ ಗಣಾಚಾರಿ  ಮಡಿವಾಳ  ಮಾಚಿದೇವರ ಜಯಂತಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ  ಮುದಗಲ್ ಪುರಸಭೆ ಮುಖ್ಯಧಿಕಾರಿ ಮರಲಿಂಗಪ್ಪ  ಗೈರು ಹಾಜರಾಗಿದ್ದು ಮಡಿವಾಳ ಸಮುದಾಯದ ಮುಖಂಡರು ಮುಖ್ಯಾಧಿಕಾರಿಗಳ ವಿರುದ್ಧ ಅಸಮಾಧಾನ  ವ್ಯಕ್ತ ಪಡಿಸಿದರು. ಹಾಗೂ  ಪಟ್ಟಣದ ಪೋಲಿಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರ , ಸರಕಾರಿ  ಶಾಲೆಗಳಲ್ಲಿ, ಹಾಗೂ ವಿವಿಧ ಸಂಘ, ಸಂಸ್ಥೆಗಳಲ್ಲಿ ಶ್ರದ್ದಾ ಭಕ್ತಿಯಿಂದ ಮಡಿವಾಳ ಮಾಚಿದೇವರ …

Read More »

ತಾವರಗೇರಾ: ಆಕಸ್ಮಿಕ ಬೆಂಕಿ ಅವಘಡ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ವಿರುಪಾಪುರ ರಸ್ತೆ ಬದಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹತ್ತಿರ ಜಮೀನಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದ ತೋಟಗಳಿಗೆ ಬೆಂಕಿ ತಗುಲುವ ಮುನ್ನವೇ ಸಾರ್ವಜನಿಕ ರು ಪೊಲೀಸ್ ರಿಗೆ ಮಾಹಿತಿ ನೀಡಿ ದ್ದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿದ ಘಟನೆ ಸೋಮವಾರ ನಡೆದಿದೆ. ಇಲ್ಲಿಯ ಸಾಬೀರಪಾಷಾ ಮುಲ್ಲಾ ಎಂಬುವವರ ತೋಟದ ಹತ್ತಿರ ಜಮೀನಿನಲ್ಲಿ ಬೆಂಕಿ ತಗುಲಿದೆ, ನಂತರ ಸ್ಥಳಕ್ಕೆ ಆಗಮಿಸಿದ …

Read More »

ಗಂಗಾವತಿ ತಾಲೂಕಿನ ಹೊಸ್ಕೇರಿಯ ವಿನೋದ ಪಾಟೀಲ್ ಈಗ ಐಪಿಎಸ್ ಅಧಿಕಾರಿ‌

ವರದಿ : ಎನ್ ಶಾಮೀದ್ ತಾವರಗೇರಾ ಗಂಗಾವತಿ:  ತಾಲೂಕಿನ ಹೊಸಕೇರಿ ಗ್ರಾಮದ ವಿನೋದ ಪಾಟೀಲ್ ಈಗ ಐಪಿಎಸ್ ಅಧಿಕಾರಿಯಾಗಿರುವುದು ಕೊಪ್ಪಳ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ತಾವರಗೇರಾ ಪಟ್ಟಣದ ಉದ್ಯಮಿ ಬಸನಗೌಡ ಮಾಲಿ ಪಾಟೀಲ್ ಹೇಳಿದರು. ಅವರು ಗಂಗನಾಳದಲ್ಲಿ ವಿನೋದ ಪಾಟೀಲ್ ರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಿನೋದ ಪಾಟೀಲ್ ಮೂಲತಃ ಗಂಗಾವತಿ ತಾಲೂಕಿನ ಹೊಸಕೇರಿ ಗ್ರಾಮದವರಾಗಿದ್ದು ಈ ಮಟ್ಟದ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ನಂತರ ಸನ್ಮಾನ …

Read More »

ಪ್ರತಿ ಮಗುವಿಗೂ ತಪ್ಪದೇ ಎರಡು ಹನಿ ಪೋಲಿಯೊ ಹನಿ ಹಾಕಿಸಿ – ಡಾ॥ ಪ್ರವೀಣ ಕುಮಾರ್

ಉದಯ ವಾಹಿನಿ :- ಕವಿತಾಳ : 5 ವರ್ಷದೊಳಗಿನ ಪ್ರತಿ ಮಗುವಿಗೂ ಕಡ್ಡಾಯವಾಗಿ ತಪ್ಪದೇ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಮಕ್ಕಳನ್ನು ಅನೇಕ ಮಾನಸಿಕ ರೋಗಿಗಳಿಂದ ರಕ್ಷಿಸ ಬಹುದಾಗಿದೆ ಪ್ರತಿ ಮಗುವಿಗೆ ಪೊಲಿಯೋ ಲಸಿಕೆ ಹಾಕಿಸುವಂತೆ ಡಾ ಪ್ರವೀಣ ಕುಮಾರ್ ಎಂದು ಹೇಳಿದರು. ಪಟ್ಟಣ ಸಮೀಪದ ಮಲ್ಲಟ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪೊಲೀಯೊ ಲಸಿಕೆ ಕಾರ್ಯಕ್ರಮಕ್ಕೆ ವೈದ್ಯಾಧಿಕಾರಿ ಪ್ರವೀಣ ಕುಮಾರ್ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ …

Read More »

ಲಿಂಗಸಗೂರು : ಬರಹಗಾರರ ಸಂಘ ಅಸ್ತಿತ್ವಕ್ಕೆ

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು :  ಪಟ್ಟಣದಲ್ಲಿ ಸಂಘದ ತಾಲೂಕು ಬರಹಗಾರ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ವೀರೇಶ ಎಸ್. ಎಮ್ ಉದಯೋನ್ಮುಖ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಸದುದ್ದೇಶದಿಂದ ಮಧು ನಾಯ್ಕ್ ಅವರ ಸಾರಥ್ಯದಲ್ಲಿ ರಾಜ್ಯ ಮಟ್ಟದಲ್ಲಿ ಬರಹಗಾರರ ಸಂಘ ಅಸ್ತಿತ್ವಕ್ಕೆ ತರಲಾಗಿದೆ. ಈಗಾಗಲೇ 28 ಜಿಲ್ಲೆಗಳಲ್ಲಿ ಸಂಘದ ಕಾರ್ಯ ಆರಂಭವಾಗಿದ್ದು, ರಾಯಚೂರು ಜಿಲ್ಲೆಯಲ್ಲಿಯೂ ಶೀಘ್ರದಲ್ಲೇ ಚಾಲನೆ ನೀಡಿ ಕಾವ್ಯ ಕಮ್ಮಟ, ಕಥಾ ಕಮ್ಮಟ,ಕವಿಗೋಷ್ಠಿ, ವಿಚಾರ ಸಂಕೀರಣಗಳನ್ನು  ಹಮ್ಮಿಕೊಂಡು ಹೊಸ ತಲೆಮಾರಿನ …

Read More »
error: Content is protected !!