ನಾಗರಾಜ ಎಸ್ ಮಡಿವಾಳರ ಮುದಗಲ್ : ಇಂದು ಪಟ್ಟಣಕ್ಕೆ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ಆಗಮಿಸಲಿದ್ದಾರೆ. ಪಟ್ಟಣದ ಲಿಂಗಸಗೂರು ರಸ್ತೆಗೆ ಹೊಂದಿಕೊಂಡಿರುವ ಪರಿಮಳ ಗುರುಕುಲ ಶಾಲೆಗೆ ಮದ್ಯಾಹ್ನ 2.45ಗಂಟೆಗೆ ಶ್ರೀಗಳು ಆಗಮಿಸಲಿದ್ದು ಪಟ್ಟಣದ ಸರ್ವ ಭಕ್ತರು ಸರಿಯಾದ ಸಮಯಕ್ಕೆ ಶಾಲಾ ಆವರಣದಲ್ಲಿ ಸೇರಿ ಶ್ರೀಗಳನ್ನ ಸ್ವಾಗತಿಸಿ ಆಶೀರ್ವಾದ ಪಡೆಯಿರಿ ಎಂದು ಶಾಲಾ ಮುಖ್ಯಸ್ಥ ನಾರಾಯಣರಾವ್ ದೇಶಪಾಂಡೆ ಹೇಳಿದರು.
Read More »ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಪಂಪಾಪತಿ ಕೊರ್ಲಿ ಆಯ್ಕೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕುಷ್ಟಗಿ ತಾಲೂಕಿನ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸ್ಥಳೀಯ ಎಸ್ ಎಸ್ ವಿ ಪ್ರಾಥಮಿಕ ಶಾಲೆಯ ಮುಖ್ಯಗುರು ಪಂಪಾಪತಿ ಕೊರ್ಲಿ ಆಯ್ಕೆಯಾಗಿದ್ದಾರೆ. ಶನಿವಾರದಂದು ಕುಷ್ಟಗಿಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು, ಉಪಾಧ್ಯಕ್ಷರಾಗಿ ಗುರುರಾಜ ನಾಡಗೌಡ, ಕಾರ್ಯದರ್ಶಿಯಾಗಿ ಬಸವರಾಜ ತುಂಬದ, ಸಹ ಕಾರ್ಯದರ್ಶಿಯಾಗಿ ಕೆ ಸುರೇಶ, ಖಜಾಂಚಿ ಆಗಿ ಶರಣಪ್ಪ ಚಿನಿವಾಲರ, ನಿರ್ದೇಶಕರಾಗಿ ಜಗದೀಶ್ ಮಲ್ಲನಗೌಡರ, ಮಹಿಳಾ ಪ್ರತಿನಿಧಿ ಯಾಗಿ …
Read More »ಶಾಲಾ ಬಸ್ಸಿಗೆ ಸಿಲುಕಿ, ಮಗು ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ, ಶಾಲಾ ಬಸ್ಸಿನ ಗಾಲಿಗೆ ಸಿಲುಕಿ 3 ವರ್ಷದ ಮಗುವೊಂದು ಸಾವನ್ನಪ್ಪಿದ ಘಟನೆ ತಾಲೂಕಿನ ಗೋತಗಿ ಗ್ರಾಮದಲ್ಲಿ ನಡೆದಿದೆ. ಮೃತ ಮಗುವನ್ನು ಅದೇ ಗ್ರಾಮದ ಬಸವರಾಜ ಬಾವಿಕಟ್ಟಿ ಅವರ ಮಗಳಾದ ಚೈತ್ರಾ (03) ಎಂದು ಗುರುತಿಸಲಾಗಿದ್ದು . ಓತಗೇರಿ ಗ್ರಾಮದ ಖಾಸಗಿ ಪ್ರಾಥಮಿಕ ಶಾಲೆಯ ಬಸ್ಸು ಗೋತಗಿ ಗ್ರಾಮದ ಮಕ್ಕಳಿಗೆ ಶಾಲೆಗೆ ಕರೆದೊಯ್ಯುಲು ಆಗಮಿಸಿದ ಸಂದರ್ಭದಲ್ಲಿ ತನ್ನ ಅಕ್ಕನನ್ನು ಬಸ್ಸಿಗೆ …
Read More »ತಾವರಗೇರಾ: ಗಾಬರಿ ಬುಡ್ಡಪ್ಪ ಇನ್ನಿಲ್ಲ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಹಿರಿಯ ನಾಗರಿಕರಾದ ಹುಸೇನ್ ಸಾಬ ಮುಜಾವರ ಇಲಕಲ್ (ಬುಡ್ಡಪ್ಪ ) ಇವರು ಗುರುವಾರದಂದು ಅನಾರೋಗ್ಯದಿಂದ ಮೃತ ಪಟ್ಟಿದ್ದು, ಇವರ ಅಂತ್ಯಕ್ರಿಯೆಯು ಶುಕ್ರವಾರದಂದು ಬೆಳಿಗ್ಗೆ 10 ಗಂಟೆಗೆ ಖಬರಸ್ತಾನ್ ನಲ್ಲಿ ನಡೆಯಲಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಸ್ಥಳೀಯ ಮುಖಂಡರಾದ ಅಯ್ಯನಗೌಡ ಮಾಲಿ ಪಾಟೀಲ್, ಶೇಖರಗೌಡ ಪೊಲೀಸ್ ಪಾಟೀಲ್, ನಾದೀರ ಪಾಷಾ ಮುಲ್ಲಾ, ವೀರಭದ್ರಪ್ಪ ನಾಲತವಾಡ, ಸೇರಿದಂತೆ ಪಟ್ಟಣದ ಮುಸ್ಲಿಂ ಸಮಾಜದ ಬಾಂಧವರು …
Read More »ಕಣ್ಮರೆಯಾದ ಕೃಷಿ ಪ್ರೀಯ….
ತಾವರಗೇರಾ : ಕೃಷಿ ಪ್ರೀಯ ಸಂಪಾದಕ ಶರಣಪ್ಪ ಕುಂಬಾರ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಕಳೆದ 25 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿರುವ ಶರಣಪ್ಪ ಕುಂಬಾರ ತಮ್ಮ ಕ್ರಿಯಾಶೀಲ,ಸರಳತೆ ಹಾಗೂ ವಿಶೇಷ ಬರಹಗಳಿಂದ ಅಪಾರ ಓದುಗರು ಮತ್ತು ಸ್ನೇಹಿತರ ಬಳಗವನ್ನ ಹೊಂದಿ ಪತ್ರಿಕೆಯ ಬರಹಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅವರು ಬುಧವಾರ ರಾತ್ರಿ ಆರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದು ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಗುರುವಾರ ಮದ್ಯಾಹ್ನ 1ಗಂಟೆಗೆ ಅವರ ಸ್ವಗ್ರಾಮವಾದ ಕುಷ್ಟಗಿ ತಾಲೂಕಿನ …
Read More »ಅಂಜನಾದ್ರಿಯಿಂದ, ಅಯೋಧ್ಯೆ ಗೆ ಸೈಕಲ್ ಯಾತ್ರೆ ಕೈಗೊಂಡ ಯುವಕ..!
ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ:- ತಾಲೂಕಿನ ಕಿಷ್ಕಿಂದೆಯ ಅಂಜನಾದ್ರಿ ಪರ್ವತದಿಂದ ಗಂಗಾವತಿ ಮೂಲದ ಯುವಕ ರಾಮ ಜನ್ಮ ಭೂಮಿ ಅಯೋಧ್ಯೆ ವರೆಗೆ ಸೈಕಲ್ ಯಾತ್ರೆ ಕೈಗೊಂಡಿದ್ದು , ಸಾವಿರಾರು ಕಿಲೋಮೀಟರ್ ದೂರದ ವರೆಗೆ ಸೈಕಲ್ ಯಾತ್ರೆ ಕೈಗೊಂಡ ಯುವಕನ ಸಾಹಸದ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸುವುದರ ಜೊತೆಗೆ ಶುಭ ಹಾರೈಸಿದ್ದಾರೆ, ಯುವಕನು ಪಟ್ಟಣದ ತುಳಸಪ್ಪ ಚತ್ರದ ನಿವಾಸಿಯಾದ ರಾಜು ಎಂಬ ಯುವಕನೆ ಒಬ್ಬಂಟಿ ಯಾಗಿ ಸೈಕಲ್ ಯಾತ್ರೆ …
Read More »ತಾವರಗೇರಾ:- ಸಂಭ್ರಮದ ಬಕ್ರೀದ್ ಆಚರಣೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ತ್ಯಾಗ ಮತ್ತು ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಮಸ್ತ ಮುಸ್ಲಿಂ ಬಾಂಧವರು ಪಟ್ಟಣದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದರು. ಮೊದಲಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಎಲ್ಲರ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ಸಿಗುವಂತಾಗಲಿ ಹಾಗೂ ಈ ಬಾರಿ ಮುಂಗಾರು ಮಳೆ ಬಾರದ ಹಿನ್ನಲೆಯಲ್ಲಿ ಸಂಕಷ್ಟ ಕ್ಕಿಡಾಗಿರುವ ರೈತ ಬಾಂದವರಿಗೆ ಆದಷ್ಟು ಬೇಗನೆ ಮಳೆ ಬಂದು ಉತ್ತಮ ಬೆಳೆ …
Read More »ಶೇಕ್ ಖಾಜಾ ಬೆಳ್ಳಿಕಟ್ ನಿಧನ
ಮುದಗಲ್: ಪಟ್ಟಣದ ಕರ್ನಾಟಕ ಸಪ್ಲೇಯರ್ಸ್ ಮಾಲೀಕರಾದ ಶೇಕ್ ಖಾಜಾ ಬೆಳ್ಳಿಕಟ್ ಬುಧವಾರ ಮದ್ಯಾಹ್ನ ಮೃತಪಟ್ಟಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಪಟ್ಟಣದ ಲಿಂಗಸಗೂರು ರಸ್ತೆಗೆ ಹೊಂದಿಕೊಂಡ ಮುಸ್ಲಿಂ ಸಮಾಜದ ಬೇಗಂಪುರ ಮಜೀದ್ ಹತ್ತಿರದ ಖಬರಿಸ್ತಾನ್ ದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮೃತರ ಹಿರಿಯ ಸಹೋದರ ಶೇಕ್ ಮಹೇಬೂಬ್ ಸಾಬ್ ಬೆಳ್ಳಿಕಟ್ ತಿಳಿಸಿದ್ದಾರೆ. ಮೃತರು 3 ಜನ ಗಂಡು ಮಕ್ಕಳು, 1 ಹೆಣ್ಣು ಮಗಳನ್ನ ಹಾಗೂ ಅಪಾರ ಬಂಧು …
Read More »ಕುರಿ ಹಾಗು ಮನೆ ಕಳ್ಳರ ಬಂಧನ, 9 ಲಕ್ಷ 92 ಸಾವಿರ ರೂ ವಶ..!
ವರದಿ ಎನ್ ಶಾಮೀದ್ ತಾವರಗೇರಾ ಕನಕಗಿರಿ:- ಠಾಣಾ ವ್ಯಾಪ್ತಿಯಲ್ಲಿ ಇತ್ತಿಚೆಗೆ ಕುರಿ ಕಳ್ಳತನ, ಹಾಗೂ ಮನೆ ಕಳ್ಳತನದಂತಹ ಹಲವಾರು ಪ್ರಕರಣಗಳಲ್ಲಿ ಭಾಗಿಯಾದ ಮನೆ ಗಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಯಾಗಿದ್ದು , ಬಂಧಿತ ಆರೋಪಿಗಳಿಂದ 9 ಲಕ್ಷ ಮೌಲ್ಯದ ಒಂದು ಬುಲೆರೋ ವಾಹನ, 46 ಸಾವಿರ ರೂ ನಗದು ಹಣ ಹಾಗೂ 8 ಗ್ರಾಂ ಬಂಗಾರದ ಆಭರಣದ ಮೌಲ್ಯ 46 ಸಾವಿರ ರೂ ಸೇರಿದಂತೆ ಒಟ್ಟು 9 ಲಕ್ಷ 92 …
Read More »ವಿಷ ಸೇವಿಸಿ ಜೀವನದ ಆಟ ಮುಗಿಸಿದ ದೈಹಿಕ ಶಿಕ್ಷಕ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆಗೆ ಸಂಬಂಧಿಸಿದಂತೆ ಪಟ್ಟಣದ ದೈಹಿಕ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕನನ್ನು ಪಟ್ಟಣದ ಬುತ್ತಿ ಬಸವೇಶ್ವರ ಶಿಕ್ಷಣ ಸಂಸ್ಥೆಯ ಮೂಲಕ ರಾಜು ಬ್ಯಾಡಗಿ ಎಂದು ತಿಳಿದುಬಂದಿದ್ದು , ಕೊಲ್ಲಾಪುರ ಮೂಲದ ಎಂಬಿಬಿ ಕಂಪನಿಯೊಂದರ ಏಜೆಂಟ್ ರಾಗಿ ಕೂಡ ಕೆಲಸ ಮಾಡುತ್ತಿದ್ದುರು. ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದಲ್ಲಿ 6 ತಿಂಗಳಲ್ಲಿ ಹಣ ದ್ವಿಗುಣ ಗೊಳ್ಳುವದಾಗಿ …
Read More »