ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸಾಲ ಬಾಧೆ ತಾಳಲಾರದೇ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಹುಲಿಯಾಪುರ ಗ್ರಾಮದಲ್ಲಿ ನಡೆದಿದೆ . ಮೃತ ರೈತನನ್ನು ಕಲ್ಲಪ್ಪ ಹನುಮಪ್ಪ ಕತಿಗೇರ (42) ಎಂದು ಗುರುತಿಸಲಾಗಿದ್ದು , ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮೃತ ರೈತನು ಮನ್ನಾಪುರ ಪಿಜಿಬಿ ಬ್ಯಾಂಕ್ ನಿಂದ 2 ಲಕ್ಷ ರೂ ಬೆಳೆ ಸಾಲ ಹಾಗೂ ಕನಕಗಿರಿಯ ಎಲ್ ಎನ್ ಟಿ ಗುಂಪಿನಲ್ಲಿ 1 ಲಕ್ಷ 20 …
Read More »ವಿಧಾನ ಸಭೆಯ ಮುಖ್ಯ ಸಚೇತಕರಾಗಿ ದೊಡ್ಡನಗೌಡ ಪಾಟೀಲ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಎಚ್ ಪಾಟೀಲ್ ಅವರು ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಅವರ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ ವಿಜಯೇಂದ್ರ ಅವರು ನೇಮಕ ಮಾಡಿದ್ದಾರೆ. ದೊಡ್ಡನಗೌಡ ಪಾಟೀಲ್ ರು ಆಯ್ಕೆಯಾಗಿದ್ದಕ್ಕಾಗಿ ಕುಷ್ಟಗಿ ಕ್ಷೇತ್ರದ ಎಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.
Read More »ತಾವರಗೇರಾ: ಶ್ರೀ ಕನಕದಾಸ ಜಯಂತಿ, ಅದ್ದೂರಿ ಮೆರವಣಿಗೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದಲ್ಲಿ ಹಾಲುಮತ ಸಮಾಜದವರಿಂದ ಶ್ರೀ ಕನಕದಾಸ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕನಕದಾಸ ವೃತ್ತದಲ್ಲಿರುವ ಭಕ್ತ ಕನಕದಾಸ ಪ್ರತಿಮೆ ಗೆ ಶಾಸಕ ದೊಡ್ಡನಗೌಡ ಪಾಟೀಲ ಹೂವಿನ ಹಾರ ಹಾಕುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡಬಸವ ಬಯ್ಯಾಪುರ, ಶೇಖರಗೌಡ ಪೊಲೀಸ್ ಪಾಟೀಲ, ಕೆ. ಮಹೇಶ, ಸೇರಿದಂತೆ ಹಾಲುಮತ ಸಮಾಜದ ಮುಖಂಡರು ಯುವಕರು ಉಪಸ್ಥಿತರಿದ್ದರು. ನಂತರ ಪಟ್ಟಣದ ಪ್ರಮುಖ ವೃತ್ತಗಳ ಮೂಲಕ …
Read More »ತಾವರಗೇರಾ:- ಅಪ್ರಾಪ್ತ ಬಾಲಕಿ ಅಪಹರಣ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕಾಲೇಜಿಗೆ ಹೋಗಿ ಬರುವದಾಗಿ ಹೇಳಿದ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಘಟನೆ ಜರುಗಿದೆ. ಸಮೀಪದ ತೆಗ್ಗಿಹಾಳ ಗ್ರಾಮದ 16 ವರ್ಷ ವಯಸ್ಸಿನ ಬಾಲಕಿಯು ಡಿಸೆಂಬರ್ 13 ರಂದು ಕಾಲೇಜಿಗೆ ಹೋಗಿ ಬರುತ್ತೆನೆ ಎಂದು ಹೇಳಿ , ವಾಪಸ್ ಮನೆಗೆ ಬಂದಿರುವದಿಲ್ಲ , ಮಗಳು ಕಾಣೆಯಾದ ಬಗ್ಗೆ ಪಾಲಕರು ಸಂಭಂದಿಕರ ಊರುಗಳಾದ ಕುಷ್ಟಗಿ, ಮಾದಾಪುರ, ಹಿರೇತೆಮ್ಮಿನಾಳ , ಟೆಂಗುಂಟಿ ಗ್ರಾಮಗಳಲ್ಲಿ ತೆರಳಿ ಹುಡುಕಿದಾಗ ಬಾಲಕಿ …
Read More »ತಾವರಗೇರಾ: ಆನಂದ ಭಂಡಾರಿಯವರಿಗೆ ನುಡಿ ನಮನ ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಈ ದೇಶದ ಶೋಷಿತ ಜನರಿಗಾಗಿ, ನೋವಿನಿಂದ ನರಳುತ್ತಿರುವ ಜನರ ಏಳಿಗೆಗಾಗಿ ಶ್ರಮೀಸಿದ್ದಾರೆ ಅಂತವರಲ್ಲಿ ಆನಂದ ಭಂಡಾರಿ ಒಬ್ಬರು ಎಂದು ಹಿರಿಯ ಹೋರಾಟಗಾರ ಹೆಚ್ ಎನ್ ಬಡಿಗೇರ ಹೇಳಿದರು. ಪಟ್ಟಣದ ಬುದ್ದ ವಿಹಾರದಲ್ಲಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಹಾಗೂ ಪ್ರಗತಿಪರ ದಲಿತ ಸಂಘಟನೆಗಳು ರಾಯಚೂರು-ಕೊಪ್ಪಳ ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ದಲಿತ ನಾಯಕ ದಿ. ಆನಂದ ಭಂಡಾರಿ ಯವರಿಗೆ ನುಡಿ ನಮನ ಕಾರ್ಯ ಕ್ರಮದಲ್ಲಿ …
Read More »ತಾವರಗೇರಾ:- ಮೊಬೈಲ್ ಸ್ಟೇಟಸ್ ಪ್ರಕರಣಕ್ಕೆ ಸ್ಪಷ್ಟನೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ರಾಜಾಸಾಬ ನಾಯಕ್ ಎಂಬ ಯುವಕನು ತನ್ನ ಮೊಬೈಲ್ ಸ್ಟೇಟಸ್ ನಲ್ಲಿ ಸ್ಥಳೀಯ ಯುವಕನಾದ ಶಾಮೀದ ಸಾಬ ಮೆಹೆಬೂಬ ಸಾಬ ಎಂಬ ಯುವಕನ ಸ್ಥಳೀಯ ಧಾರ್ಮಿಕ ಕಾರ್ಯಕ್ರಮಕ್ಕೆ ಸಮಾಜದ ಗುರುಗಳು ಆಗಮಿಸುತ್ತಿರುವದಕ್ಕೆ ಸ್ವಾಗತ ಕೋರಿ, ಸ್ಟೇಟಸ್ ಗೆ ಇಟ್ಟುಕೊಂಡಿದ್ದ ವಿಡಿಯೋ ವನ್ನು , ಆರೋಪಿ ರಾಜಾಸಾಬ ನಾಯಕ ತನ್ನ ಸ್ಟೇಟಸ್ ನಲ್ಲಿ ಪಾಕಿಸ್ತಾನ ದೇಶದ ಧ್ವಜ ಚಿತ್ರ ಹಾಕಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು …
Read More »ತಾವರಗೇರಾ:- ಸ್ಟೇಟಸ್ ನಲ್ಲಿ ಪಾಕಿಸ್ತಾನ ಧ್ವಜ ಯುವಕನ ಬಂಧನ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದಲ್ಲಿ ಸೈಕಲ್ ಶಾಪ್ ಇಟ್ಟುಕೊಂಡಿದ್ದ ರಾಜಾಸಾಬ ಮಹಮ್ಮದ್ ಸಾಬ ನಾಯ್ಕ ಎಂಬ ವ್ಯಕ್ತಿ , ತನ್ನ ಮೊಬೈಲ್ ದ ಸ್ಟೇಟಸ್ ದಲ್ಲಿ ಪಾಕಿಸ್ತಾನ ಧ್ವಜದ ಫೋಟೊ ಹಾಕಿ , ಸ್ಥಳೀಯ ಮಸೀದಿ ಯೊಂದರಲ್ಲಿ ನಿಯೋಜಿಸಿರುವ ಕಾರ್ಯಕ್ರಮಕ್ಕೆ , ಸ್ಥಳೀಯ ಮುಸಲ್ಮಾನರನ್ನು ಪಾಕಿಸ್ತಾನದ ಪರವಾಗಿ ಸ್ವಾಗತಿಸುತ್ತೇನೆ .ಎಂದು ಹಾಕಿದ ಕಾರಣ , ಭಜರಂಗದಳ ಹಾಗೂ ಇನ್ನಿತರ ಸಂಘಟನೆಗಳು ನೀಡಿದ ದೂರಿನ ಮೇಲೆ ತಾವರಗೇರಾ ಠಾಣೆಯಲ್ಲಿ …
Read More »ತಾವರಗೇರಾ: ಶಾಮೀದ್ ಅಲಿ ದರ್ಗಾದಲ್ಲಿ ದೀಪೋತ್ಸವ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಶಾಮೀದ್ ಅಲಿ ದರ್ಗಾದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ದೀಪಾವಳಿ ಹಬ್ಬದಂದು ದೀಪಗಳನ್ನು ಬೆಳಗಿಸುವ ಮೂಲಕ ಮುದುಗಲ್ ಕುಟುಂಬದ ಸದಸ್ಯರು ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಮುದಗಲ್ ಕುಟುಂಬದ ಡಾ. ಶರಣಪ್ಪ ಸೋಲಿ ಕಾಬ್ಳೆ, ಕುಟುಂಬದ ಸದಸ್ಯರು ಸೇರಿಕೊಂಡು ದರ್ಗಾದಲ್ಲಿ 5000 ದೀಪಗಳನ್ನು ಬೆಳಗಿಸಿ ದೀಪಾವಳಿಯ ದೀಪೋತ್ಸವವನ್ನು ಆಚರಿಸಿದರು. ಸೌಹಾರ್ದತೆಯ ಸಂಕೇತವಾದ ಶಾಮಿದಲ್ಲಿ ದರ್ಗದಲ್ಲಿ ಅವರ ಕುಟುಂಬ ಸದಸ್ಯರಾದ ಲಕ್ಷ್ಮಿಕಾಂತ್, …
Read More »ಪ್ರಗತಿ ಪರ ಚಿಂತಕ, ಜ್ಞಾನದ “ಭಂಡಾರಿ” ವಿಧಿವಶ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ರಾಜ್ಯದಲ್ಲಿಯ ಪ್ರಗತಿಪರ ಚಿಂತಕರಲ್ಲಿ ಒಬ್ಬರಾಗಿದ್ದ ಹಾಗೂ ಹುಟ್ಟು ಹೋರಾಟಗಾರರಾದ ಮತ್ತು ಅಪಾರ ಜ್ಞಾನದ ಭಂಡಾರ ಹೊಂದಿದ್ದ ಆನಂದ ಭಂಡಾರಿ ವಿಧಿವಶರಾಗಿರುವುದು ದುರಂತವೇ ಸರಿ, ಬಡ ಹಾಗೂ ಶೋಷಿತ ವರ್ಗದ ಧ್ವನಿಯಾಗಿ ರಾಜ್ಯದಲ್ಲಿಯೇ ಮುಂಚೂಣಿ ನಾಯಕರಾಗಿ ದಲಿತ ಮುಖಂಡರಾಗಿ ಗುರುತಿಸಿಕೊಂಡಿದ್ದ ಅವರು ಅನೇಕ ಬಡ ಕುಟುಂಬ ಹಿಂದುಳಿದ ವರ್ಗದ ಪರ ಸದಾ ಮುಂಚೂಣಿಯಲ್ಲಿ ತಮ್ಮ ಹೋರಾಟದ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿ ಯಾವುದೇ ಜಾತಿ …
Read More »ತಾವರಗೇರಾ: ಕೇಳಿಸುತಿದೆ, ಕಲ್ಲಿನಲ್ಲಿ ಗಂಟೆಯ ನುಡಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ವಿಶ್ವ ಪ್ರಸಿದ್ಧ ಹಂಪಿಯಲ್ಲಿರುವ ವಿಜಯ ವಿಠ್ಠಲ ದೇವಸ್ಥಾನದ ಕಂಬಗಳಿಗೆ ಕಿವಿವೊಟ್ಟು ಕೆಳಿದಾಗ ಶಬ್ದ ಹೊರಹೊಮ್ಮುವಂತೆ ಇಲ್ಲಿಯ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆ ಆವರಣದಲ್ಲಿ ರುವ ಕಲ್ಲು ಬಂಡೆಯೂ ಕೂಡ ಗಂಟೆಯ ಶಬ್ದ ಹಾಗೂ ತಾಮ್ರದ ಪಾತ್ರೆಯ ಶಬ್ದ ಬರುತ್ತಿದ್ದು ಈದು ಸಾರ್ವಜನಿಕರ ಕುತೂಹಲ ಕ್ಕೆ ಕಾರಣವಾಗಿದೆ . ವಸತಿ ಶಾಲಾ ಆವರಣದಲ್ಲಿ ಎರಡು ಕಲ್ಲು ಬಂಡೆಗಳಿದ್ದು ಮೇಲಿನ ಕಲ್ಲು ಬಂಡೆಗೆ , ಸಣ್ಣ …
Read More »